Advertisement
ಕುಲ್ಲುವಿನಿಂದ 64 ಕಿ.ಮೀ. ದೂರದಲ್ಲಿರುವ ಭುಂತರ್‌ನಿಂದ 56 ಕಿ.ಮೀ., ಮನಿಕರನ್ ನಿಂದ 22 ಕಿ.ಮೀ. ಮತ್ತು ಮನಾಲಿಯಿಂದ 102 ಕಿ.ಮೀ. ದೂರದಲ್ಲಿ ಖೀರ್ ಗಂಗಾ ಪಾರ್ವತಿ ಕಣಿವೆಯಲ್ಲಿ 3,050 ಮೀಟರ್ ಎತ್ತರದ ಲ್ಲಿದೆ. ಇದು 11 ಕಿ.ಮೀ. ಟ್ರೆಕ್ ಮೂಲಕ ಬರ್ಶೆನಿ ಯಿಂದ ತಲುಪಬೇಕು. ಸಾಮಾನ್ಯವಾಗಿ ಕುಲ್ಲು / ಬರ್ಶೆನಿ ಯಿಂದ 2 ದಿನಗಳ ಚಾರಣದ ಮೂಲಕ ತಲುಪಬೇಕಾಗುತ್ತದೆ.
ಪಾರ್ವತಿ ಕಣಿವೆಯಲ್ಲಿ ಹಾದು ಹೋಗುವ ಪಾರ್ವತಿ ನದಿಯ ನೀರಿನಿಂದಾಗಿ ಖೀರ್ ಗಂಗಾ ಹೆಸರು ಬಂದಿತು. ಈ ಕಣಿವೆ ನೀರಿನ ಸಂಪನ್ಮೂಲಗಳಲ್ಲಿ ಬಹಳ ಹೇರಳವಾಗಿದೆ. ಮನಿಕರನ್‌ನಿಂದ ತಲುಪ ಬಹುದಾದ ಬರ್ಶೆನಿ ಹಳ್ಳಿಯಿಂದ ಖೀರ್ ಗಂಗಾ ಚಾರಣ ಆರಂಭ ವಾಗುತ್ತದೆ. ಖೀರ್ ಗಂಗಾ ತಲುಪಲು ಬರ್ಶೆನಿಗೆ ಸುಮಾರು 11 ಕಿ.ಮೀ. ಟ್ರೆಕ್ ಅಗತ್ಯವಿದೆ. ಈ ಮಾರ್ಗವನ್ನು ಟ್ರೆಕ್ ಮಾಡಲು ಒಂದು ಮಾರ್ಗ ದರ್ಶಿಯನ್ನು ನೇಮಿ ಸುವುದು ಒಳ್ಳೆಯದು. ಧಾರ್ಮಿಕ ಹಿನ್ನೆಲೆ
ಖೀರ್ ಗಂಗಾ ಒಂದು ಬಿಸಿ ನೀರಿನ ಬುಗ್ಗೆ ಯೊಂದಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿ ಶಿವ ಮತ್ತು ಪಾರ್ವತಿಗೆ ಅರ್ಪಿತವಾದ ದೇವಾಲಯವಿದೆ. ದಂತಕಥೆಯ ಪ್ರಕಾರ, ಶಿವ ಮತ್ತು ಪಾರ್ವತಿಯ ಕಿರಿಯ ಪುತ್ರ ಕಾರ್ತಿಕೇಯ ಖೀರ್ ಗಂಗಾದಲ್ಲಿ ಸಾವಿರ ವರ್ಷ ಧ್ಯಾನ ಮಾಡಿದ್ದರು. ಹಾಗಾಗಿ ಇದು ಹಿಂದೂಗಳಿಗೆ ಪ್ರಮುಖ ಧಾರ್ಮಿಕ ಸ್ಥಳ.
Related Articles
ಖೀರ್ ಗಂಗಾವನ್ನು ಹತ್ತಿದ ಅನಂತರ, ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿದಾಗ ಮನಸ್ಸು ಮತ್ತು ದೇಹವನ್ನು ಸಡಿಲಗೊಳಿಸುತ್ತದೆ. ಖೀರ್ ಗಂಗಾ ಕಾಡುಗಳ ಮೂಲಕ ಟ್ರೆಕಿಂಗ್ ಮಾಡುವ ಹೊರತಾಗಿ ಸೂರ್ಯಾಸ್ತದ ನೋಟವು ಅದ್ಭುತ ಅನುಭವವಾಗಿದೆ. ಮತ್ತೂಂದು ವಿಶೇಷ ಎಂದರೆ ಖೀರ್ ಗಂಗಾದಲ್ಲಿ ವಿದ್ಯುತ್ ಇಲ್ಲ ಎಲ್ಲಾ ಸೌರಶಕ್ತಿಯ ಮೇಲೆ ಚಲಿಸುತ್ತವೆ.
Advertisement
ಹವಾಮಾನ ಹಿತಕರವಾದ ಮತ್ತು ಅನು ಕೂಲಕರವಾದಾಗ ಮಾರ್ಚ್ -ನವೆಂಬರ್ ನಡುವೆ ಖೀರ್ ಗಂಗಾಗೆ ಭೇಟಿ ನೀಡಲು ಸೂಕ್ತ ಸಮಯ. ಖೀರ್ ಗಂಗಾ ಚಳಿಗಾಲದಲ್ಲಿ ಹಿಮದಿಂದ ಆವೃತ ವಾಗಿರುತ್ತದೆ ಮತ್ತು ಬೇಸಗೆಯಲ್ಲಿ ತಾತ್ಕಾಲಿಕ ಹವಾಮಾನ ಹೊಂದಿರುತ್ತದೆ. ಶಿವ ದೇವಸ್ಥಾನದ ಬಳಿ ಯೊಂದು ಆಶ್ರಮ ಇದ್ದು, ಅಲ್ಲಿ ಮೂಲ ಸೌಕರ್ಯ ದೊರೆಯುತ್ತದೆ. ಸೌಲಭ್ಯಗಳನ್ನು ಒದಗಿಸುತ್ತದೆ. ಖೀರ್ ಗಂಗಾ ಸಮೀಪದ ಕೆಲವು ರೆಸ್ಟೋರೆಂಟ್‌ಗಳಲ್ಲಿ ಸಸ್ಯಾಹಾರ/ ಮಾಂಸಾಹಾರ ತಿನಿಸುಗಳಿವೆ.
ಹೋಗುವ ಸೌಕರ್ಯ ಹೇಗಿದೆ?ವಿಮಾನದ ಮೂಲಕ – ಖೀರ್ ಗಂಗಾಕ್ಕೆ ಸಮೀಪದ ವಿಮಾನ ನಿಲ್ದಾಣ ಪಂತ್ ನಗರ ವಿಮಾನ ನಿಲ್ದಾಣ. ಇದು ಖೀರ್ ಗಂಗಾದಿಂದ 235 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಬರ್ಶೆಗೆ ಟ್ಯಾಕ್ಸಿ ಅಥವಾ ಬಸ್ ಸಹಾಯದಿಂದ ಪ್ರವಾಸ ಮಾಡಬಹುದಾಗಿದೆ. ಅಲ್ಲಿಂದ 11 ಕಿ.ಮೀ. ದೂರದಲ್ಲಿ ಖೀರ್ ಗಂಗಾಗೆ ಪ್ರಯಾಣಿಸಬಹುದು. ರೈಲು ಮೂಲಕ – ಖೀರ್ ಗಂಗಾದಿಂದ ಸುಮಾರು 198 ಕಿ.ಮೀ. ದೂರದಲ್ಲಿರುವ ಕಾತೊಡಮ್ ಹತ್ತಿರದ ರೈಲು ನಿಲ್ದಾಣವಾಗಿದೆ. ರಸ್ತೆಯ ಮೂಲಕ – ಖೀರ್ ಗಂಗಾಗೆ ಹೋಗುವ ಮಾರ್ಗವು ಬರ್ಶೆನಿಂದ ಸಂಪರ್ಕ ಹೊಂದಿದ್ದು, 11 ಕಿ.ಮೀ. ನಡೆದರೆ ಖೀರ್ ಗಂಗಾವನ್ನು ತಲುಪಬಹುದು. - ವಿಜಿತಾ ಅಮೀನ್