Advertisement

ಈ ಬಾರಿ ‘ಖತ್ರೋನ್ ಕೆ ಖಿಲಾಡಿ’ ನಿರೂಪಣೆ ಮಾಡಲು ಮತ್ತೆ ಸಂಭಾವನೆ ಹೆಚ್ಚಿಸಿದ ರೋಹಿತ್‌ ಶೆಟ್ಟಿ

01:16 PM Mar 13, 2024 | Team Udayavani |

ಮುಂಬಯಿ: ಬಾಲಿವುಡ್‌ ನಿರ್ದೇಶಕ ರೋಹಿತ್‌ ಶೆಟ್ಟಿ ತನ್ನ ಹಾಸ್ಯ ಹಾಗೂ ಸಾಹಸಮಯ ಸಿನಿಮಾಗಳಿಂದ ಎಷ್ಟು ಖ್ಯಾತಿಗಳಿಸಿದ್ದರೋ, ತನ್ನ ನಿರೂಪಣಾ ಪ್ರತಿಭೆಯಿಂದಲೂ ಟಿವಿ ಲೋಕಕದಲ್ಲಿ ಅಷ್ಟೇ ಹೆಸರುಗಳಿಸಿದ್ದಾರೆ.

Advertisement

ರೋಹಿತ್‌ ಶೆಟ್ಟಿ ಬಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾ ಪ್ರೇಕ್ಷಕರನ್ನು ತನ್ನ ಸಿನಿಮಾಗಳಿಂದ ರಂಜಿಸಿದ ಅವರು, ರಿಯಾಲಿಟಿ ಶೋವೊಂದರಿಂದಲೂ ಗಮನ ಸೆಳೆದಿದ್ದಾರೆ. ‘ಖತ್ರೋನ್ ಕೆ ಖಿಲಾಡಿ’ ಎನ್ನುವ ಸಾಹಸಮಯ ರಿಯಾಲಿಟಿ ಶೋಗಳ ಹಲವು ಸೀಸನ್‌ ಗಳನ್ನು ಅವರು ನಡೆಸಿಕೊಟ್ಟಿದ್ದಾರೆ.

ಒಬ್ಬ ಖ್ಯಾತ ನಿರ್ದೇಶಕನನನ್ನು ಅಥವಾ ನಟನನ್ನು ಕಿರುತೆರೆಗೆ ತಂದು ಕಾರ್ಯಕ್ರಮವನ್ನು ನಿರೂಪಣೆ ಮಾಡಿಸುವುದು ಹೊಸದಲ್ಲ. ಆದರೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಟರಿಗೆ ಕೊಡುವ ಸಂಭಾವನೆ ಲಕ್ಷ ಲಕ್ಷದಾಗಿರುತ್ತದೆ.

ಸೋಶಿಯಲ್‌ ಮೀಡಿಯಾ ಸೆಲೆಬ್ರಿಟಿಗಳು ಹಾಗೂ ಟಿವಿ ಲೋಕದ ಸ್ಟಾರ್‌ ಗಳು ಭಾಗಿಯಾಗುವ ‘ಖತ್ರೋನ್ ಕೆ ಖಿಲಾಡಿ’ ಸೀಸನ್‌ -14 ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಈ ಬಾರಿಯೂ ರೋಹಿತ್‌ ಶೆಟ್ಟಿ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಬಾರಿ ಅವರು ಕಾರ್ಯಕ್ರಮವನ್ನು ನಡೆಸಿಕೊಡಲು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎನ್ನುವ ವರದಿಯೊಂದು ಹೊರಬಿದ್ದಿದೆ. ಶೇ.50 ರಷ್ಟು ತನ್ನ ಸಂಭಾವನೆಯನ್ನು ಅವರು ಹೆಚ್ಚಿಸಿದ್ದಾರೆ ಎಂದು ವರದಿ ಆಗಿದೆ.

Advertisement

ಖತ್ರೋನ್ ಕೆ ಖಿಲಾಡಿಯ ಆರಂಭಿಕ ಸೀಸನ್‌ನಲ್ಲಿ ರೋಹಿತ್ ಈ ಹಿಂದೆ ಪ್ರತಿ ಸಂಚಿಕೆಗೆ 50 ಲಕ್ಷಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಇದೀಗ ಸೀಸನ್‌ -14 ಗೆ ಒಂದು ಎಪಿಸೋಡ್‌ ಗೆ ಅವರು 60-70 ರಿಂದ ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಆ ಮೂಲಕ ಇಡೀ ಸೀಸನ್‌ ನಲ್ಲಿ 16 ಕೋಟಿ ರೂ. ಪಡೆಯಲಿದ್ದಾರೆ ಎಂದು ʼಸಿಯಾಸತ್ʼ ವರದಿ ಮಾಡಿದೆ.

ʼಖತ್ರೋನ್ ಕೆ ಕಿಲಾಡಿʼ ಸೀಸನ್ 5 ಮತ್ತು 6 ನ್ನು ಹೋಸ್ಟ್ ಮಾಡಲು ರೋಹಿತ್ ಪ್ರತಿ ಸಂಚಿಕೆಗೆ 10-20 ಲಕ್ಷ ಶುಲ್ಕ ಪಡೆಯುತ್ತಿದ್ದರು. ಸೀಸನ್‌ -7 ನ್ನು ಅರ್ಜುನ್‌ ಕಪೂರ್‌ ನಡೆಸಿಕೊಟ್ಟಿದ್ದರು. ಆ ಬಳಿಕ ಶುರುವಾದ ಸೀಸನ್‌ -8 ನ್ನು ಮತ್ತೆ ರೋಹಿತ್‌ ಶೆಟ್ಟಿ ನಡೆಸಿಕೊಟ್ಟರು. ಈ ಸೀಸನ್‌ 10ರ ಪ್ರತಿ ಸಂಚಿಕೆಗೆ ಅವರು, 37 ಲಕ್ಷ ರೂ.ವನ್ನು ಸಂಭಾವನೆಯಾಗಿ ಪಡೆದುಕೊಂಡರು.

2021ರಲ್ಲಿ ಬಂದ ʼಖತ್ರೋನ್ ಕೆ ಕಿಲಾಡಿ ಸೀಸನ್ 11ʼ ಗಾಗಿ ಅವರು ಪ್ರತಿ ಸಂಚಿಕೆಗೆ 49 ಲಕ್ಷ ಸಂಭಾವನೆ ಪಡೆದಿದ್ದರು. ಸೀಸನ್‌ 12 ಮತ್ತು 13 ಗಳಿಗೆ, ಅವರು ಪ್ರತಿ ಸಂಚಿಕೆಗೆ 50 ಲಕ್ಷ ಸಂಭಾವನೆ ಪಡೆದಿದ್ದರು.

ಇದೀಗ ಅವರು  14ನೇ ಸೀಸನ್‌ ಗಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಈ ಬಾರಿಯ ಸೀಸನ್‌ ನಲ್ಲಿ ಅಭಿಷೇಕ್ ಕುಮಾರ್, ವಿವೇಕ್ ದಹಿಯಾ, ಮುನಾವರ್ ಫಾರೂಕಿ, ಮನ್ನಾರಾ ಚೋಪ್ರಾ ಮತ್ತು ಮನೀಶಾ ರಾಣಿ ಹಾಗೂ ಇತರರು ಸ್ಪರ್ಧಿಗಳಾಗಿ ಭಾಗಯಾಗುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next