Advertisement
ಹೌದು, ಸಲಿಂಗಕಾಮದ ಕಥಾಹಂದರ ಹೊಂದಿರುವ “ಕತ್ರಾ ಡೇಂಜರಸ್’ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿದ್ದರು, ಇದೇ ಏ. 8ಕ್ಕೆ ಚಿತ್ರ ತೆರೆ ಕಾಣಲಿದೆ.
Related Articles
Advertisement
“ಇದೊಂದು ಎಲ್‌ಜಿಬಿಟಿ ಸಮುದಾಯವನ್ನು ಇಟ್ಟುಕೊಂಡು ಮಾಡಲಾದ ಸಿನಿಮಾ. ನಮ್ಮ ಸಮಾಜ ಈ ಸಮುದಾಯವನ್ನು ಅಪರಾಧಿ ಮನೋಭಾವನೆಯಲ್ಲಿ ನೋಡುತ್ತದೆ. ಆದರೆ ಐಪಿಸಿ ಸೆಕ್ಷನ್ 377 ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ 2018ರಲ್ಲಿ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪು ಅಂಥವರ ಪರವಾಗಿದೆ. ಅದೇ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇಬ್ಬರು ಸಲಿಂಗಿ ಹುಡುಗಿಯರ ಜೀವನದಲ್ಲಿ ನಡೆದಿರುವ ಒಂದಷ್ಟು ಕಾಲ್ಪನಿಕ ಘಟನೆ, ಕ್ರೈಂ, ಆ್ಯಕ್ಷನ್‌ಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ’ ಎಂಬುದು ಸಿನಿಮಾದ ಬಗ್ಗೆ ಆರ್‌ಜಿವಿ ವಿವರಣೆ.
ಅಂದಹಾಗೆ, “ಸಲಿಂಗಿಗಳು ಹಾಗೂ ಲೈಂಗಿಕ ಕಾರ್ಯಕರ್ತರ ನಡುವಿನ ಪ್ರೇಮ, ಒಂದು ಪ್ರೇಮಕಥೆಯಾಗಿ ಉಳಿಯಬೇಕು, ಕಾಮಕಥೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ’ ಎನ್ನುವುದು ತಮ್ಮ ಸಿನಿಮಾದ ಸಬ್ಜೆಕ್ಟ್ ಬಗ್ಗೆ ಆರ್‌ಜಿವಿ ನಿಲುವು.
ಇನ್ನು ಆರ್ ಜಿವಿ ನಿರ್ದೇಶನದ ಇಂಥದ್ದೊಂದು ಕಥಾಹಂದರದ ಸಿನಿಮಾದಲ್ಲಿ ಅಭಿನಯಿಸಿರುವುದರ ಬಗ್ಗೆ ಇಬ್ಬರು ನಾಯಕಿಯರಾದ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿ ಖುಷಿ ಹೆಮ್ಮೆ ಮತ್ತು ಖುಷಿಯ ಮಾತುಗಳನ್ನಾಡಿದರು. “ಮೇಲ್ನೋಟಕ್ಕೆ ಇದೊಂದು ಗ್ಲಾಮರಸ್, ಕ್ರೈಂ ಸಬ್ಜೆಕ್ಟ್‌ನಂತೆ ಕಂಡರೂ ಸಿನಿಮಾ ನೋಡಿದ ಬಳಿಕ ಯೋಚಿಸುವ ಹಲವು ವಿಷಯಗಳಿವೆ’ ಎಂಬುದು ಇಬ್ಬರು ನಾಯಕಿಯರ ಮಾತು. ಉಳಿದಂತೆ ರಾಜ್‌ಪಾಲ್ ಯಾದವ್, ಘಾಜಿ, ಮಿಥುನ್ ಪುರಂದರಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಜಿ. ಎಸ್. ಕಾರ್ತಿಕ ಸುಧನ್