Advertisement
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್.ಎಲ್.ದೀಪಕ್, ಆಸ್ತಿಯ ಮಾಲೀಕತ್ವ ದೃಢಪಡಿಸಲು ಪ್ರಮುಖವಾಗಿ ಖಾತೆ ಪ್ರಮಾಣಪತ್ರದ ಅವಶ್ಯಕತೆಯಿದೆ. ಅದರಲ್ಲೂ ಎ ಮತ್ತು ಬಿ ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲ ನಿವಾರಿಸಲು ಖಾತಾ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಖಾತೆ ಪಡೆಯುವ ಸಲುವಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಕಚೇರಿಗಳಿಗೆ ಜನರು ಅಲೆಯಬೇಕಾಗುತ್ತದೆ. ಈ ತಾಪತ್ರಾಯವನ್ನು ತಪ್ಪಿಸಲು ಸಲುವಾಗಿ ಒಂದು ತಿಂಗಳ ಕಾಲ ಖಾತಾ ಆಂದೋಲನ ನಡೆಸಲಾಗುತ್ತಿದೆ. ಹೊಸ ಬಡಾವಣೆಯಲ್ಲಿ ನಿವೇಶನ ಖರೀದಿಸಿರುವವರು, ಅಪಾರ್ಟ್ ಮೆಂಟ್‌ಗಳಲ್ಲಿ ಫ್ಲಾಟ್ ಖರೀದಿಸಿರುವವರು, ಖಾತೆಯ ಹೆಸರು ಬದಲಿಸಿಕೊಳ್ಳುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
Related Articles
Advertisement
ಖಾತೆ ಮಾಡಿಕೊಳ್ಳಲು ಅಗತ್ಯವಿರುವ ದಾಖಲೆಗಳು :
ಕಂದಾಯ ಪ್ರದೇಶ: ಸತ್ತಿನ ಹಕ್ಕು ನಿರೂಪಿಸುವ ದಾಖಲೆ, ಭೂಪರಿವರ್ತನೆ ಆದೇಶ, ಸರ್ವೇ ನಕ್ಷೆ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ
ಗ್ರಾಮಠಾಣ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆ, ಹಿಂದಿನ ಸ್ಥಳೀಯ ಸಂಸ್ಥೆ ವಿತರಿಸಿರುವ ಅರ್ಜಿ ನಮೂನೆ 9, ತಹಶೀಲ್ದಾರ್ ಅಥವಾ ಭೂಮಾಪಕರು ನೀಡಿರುವ ಸರ್ವೇ ನಕ್ಷೆ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ
ಬಿಡಿಎ, ಕೆಎಚ್‌ಬಿ, ಇತರ ಪ್ರಾಧಿಕಾರದಿಂದ ಹಂಚಿಕೆಯಾದ ಸ್ವತ್ತುಗಳು: ಹಂಚಿಕೆ ಪತ್ರ, ಸಂಬಂಧಪಟ್ಟ ಪ್ರಾಧಿಕಾರದಿಂದ ಹಂಚಿಕೆ ಮಡಿರುವ ಸ್ವಾಧೀನ ಪತ್ರ, ಗುತ್ತಿಗೆ ಕರಾರು ಪತ್ರ ಅಥವಾ ಕ್ರಯಪತ್ರ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ
ಬಿಡಿಎ ಅನುಮೋದಿತ ಬಡಾವಣೆ: ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು, ಅನುಮೋದಿತ ಬಡಾವಣೆ ನಕ್ಷೆ, ಬಿಡಿಎಯಿಂದ ಬಿಡುಗಡೆ ಆದೇಶ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ
ಬಿಡಿಎ ರಿಕನ್ವೆ ಪ್ರದೇಶ: ಸ್ವತ್ತಿನ ಹಕ್ಕು ವರ್ಗಾವಣೆ ದಾಖಲೆ, ಸ್ವತ್ತಿನ ಋಣಭಾರವಿಲ್ಲದ ಪ್ರಮಾಣಪತ್ರ, ಸುಧಾರಣಾ ವೆಚ್ಚ ಪಾವತಿಸಿರುವ ರಶೀದಿ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಣ ನಕ್ಷೆ