Advertisement
ಬಣ ರಾಜಕೀಯ ಸಹಿತ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ವಿಷಯ ವನ್ನು ನೇರ ವಾಗಿ ಹೈಕಮಾಂಡ್‌ಗೂ ತಲುಪಿಸ ಬಹುದೆಂಬ “ಧೈರ್ಯ’ವೂ ಸಿಕ್ಕಂತಾಗಿದೆ.
Related Articles
Advertisement
ಹೀಗಾಗಿ, ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ತಲುಪಲು ಖರ್ಗೆ ಮಾರ್ಗದರ್ಶನವೂ ಲಭ್ಯವಾಗಲಿದೆ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು, ದೇಶದಲ್ಲಿ ಕಾಂಗ್ರೆಸ್‌ಗೆ ಬಲ ತುಂಬುವ ಸವಾಲೂ ಖರ್ಗೆ ಮುಂದಿದೆ.
ಸಮನ್ವಯಕಾರಮಲ್ಲಿಕಾರ್ಜುನ ಖರ್ಗೆ ಅವರ ಪಕ್ಷ ನಿಷ್ಠೆ ಪ್ರಶ್ನಾತೀತ. ಪಕ್ಷಕ್ಕೆ ಸಂಕಷ್ಟ ಬಂದಾಗ ಎಂಥ ತ್ಯಾಗಕ್ಕೂ ಸಿದ್ಧರಾಗಿ ಪಕ್ಷ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾದವರು. ಮುಂದಿನ ಚುನಾ ವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿದರೆ ಆಗ ಸಮನ್ವಯಕ್ಕೂ ಖರ್ಗೆ ಪಾತ್ರ ಮಹತ್ವದ್ದಾಗಿರುತ್ತದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್ ಹಾಗೂ ಇತರ ನಾಲ್ವರು ಕಾರ್ಯಾಧ್ಯಕ್ಷರನ್ನು ಚುನಾ ವಣೆಯಲ್ಲಿ ಸಮರ್ಥವಾಗಿ ದುಡಿಸಿ ಕೊಳ್ಳಬಲ್ಲ ಜಾಣ್ಮೆಯೂ ಖರ್ಗೆಗಿದೆ. ಅಪಸ್ವರಕ್ಕೆ ಆಸ್ಪದ ಇಲ್ಲದಂತೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವೂ ಇವರಿಗಿದೆ ಎನ್ನಲಾಗುತ್ತಿದೆ. ದಲಿತ ಮತಬ್ಯಾಂಕ್ ಸೆಳೆಯಲು ಪ್ರಯತ್ನ
ಮಲ್ಲಿಕಾರ್ಜುನ ಖರ್ಗೆ ತನ್ನನ್ನು ದಲಿತ ಸಮುದಾಯದ ನಾಯಕ ಎಂಬು ದಕ್ಕಿಂತ ಕಾಂಗ್ರೆಸ್ ನಾಯಕ ಎಂದೇ ಬಿಂಬಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಅನುಭವ ಮತ್ತು ಹಿರಿತನಕ್ಕೆ ಆದ್ಯತೆ ಅಷ್ಟೆ. ರಾಜ್ಯದ ಮಟ್ಟಿಗೆ ಖರ್ಗೆ ಅವರು ದಲಿತ ಸಮುದಾಯದ ಪ್ರಶ್ನಾತೀತ ನಾಯಕರೂ ಆಗಿದ್ದು, ಎಐಸಿಸಿ ಅಧ್ಯಕ್ಷ ರಾಗಿರುವುದರಿಂದ ಕಾಂಗ್ರೆಸ್‌ನಿಂದ ದೂರವಾಗಿರುವ ದಲಿತ ಮತಬ್ಯಾಂಕನ್ನು ಮತ್ತೆ ಸೆಳೆಯಲು ಗಂಭೀರ ಪ್ರಯತ್ನ ನಡೆಯಲಿದೆ ಎನ್ನಲಾಗುತ್ತಿದೆ. -ಎಸ್. ಲಕ್ಷ್ಮೀನಾರಾಯಣ