Advertisement

ಗಿರೀಶ ಕಂಬಾನೂರ ಮನೆಗೆ ಖರ್ಗೆ ಭೇಟಿ

02:55 PM Aug 09, 2022 | Team Udayavani |

ಶಹಾಬಾದ: ಇತ್ತೀಚೆಗಷ್ಟೆ ನಗರದ ರೇಲ್ವೆ ನಿಲ್ದಾಣದಲ್ಲಿ ಭೀಕರ ಕೊಲೆಯಾದ ಕಾಂಗ್ರೆಸ್‌ ಮುಖಂಡ, ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಅವರ ಮನೆಗೆ ಶುಕ್ರವಾರ ಚಿತ್ತಾಪೂರ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Advertisement

ಈ ಸಂದರ್ಭದಲ್ಲಿ ನನ್ನ ಗಂಡನನ್ನು, ಭಾವನನ್ನು ಕೊಂದ ಆರೋಪಿಗಳು ಮೈದುನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ದ್ದಾರೆ. ಇದರಿಂದ ಭಯ ಉಂಟಾಗಿ, ಮನೆಯಿಂದ ಹೊರಗಡೆ ಹೋಗದಂತಾಗಿದೆ. ಬಾಗಿಲು ಮುಚ್ಚಿಕೊಂಡು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಪ್ರಿಯಾಂಕ್‌ ಖರ್ಗೆ ಅವರ ಮುಂದೆ ಕಣ್ಣೀರಿಟ್ಟರು.

ನಂತರ ಮಾತನಾಡಿದ ಗಿರೀಶ ತಾಯಿ ಸರೋಜಾಬಾಯಿ, ನನ್ನ ಮಗ ಏನು ತಪ್ಪು ಮಾಡಿದ್ದ ಅಂತ ಹೀಂಗ್‌ ಮಾಡ್ಯಾರ್‌ ರೀ. ಅವನ್‌ ಸುತ್ತಮುತ್ತಾ ನೂರಾರು ಮಂದಿ ಇದ್ರೂ ಯಾರು ಉಳಿಸಲಿಕ್ಕ ಒಬ್ಬರೂ ಬರಲಿಲ್ಲ ರಿ. ಅವನ್‌ ಎತ್ತಲೂ ಯಾರೂ ಸಮೀಪ ಬಂದಿಲ್ಲರಿ. ಈಗ ಬೆದರಿಕೆ  ಹೋಗ್ಯಾನ್‌. ಅಂಜಿಕಿ ಆಗ್ಯಾದ. ಅಂಜಿ ಅಂಜಿ ಬದುಕಬೇಕ್ಯಾದ. ರಾತ್ರಿ ನಿದ್ದಿಯಲ್ಲ. ಊಟ ಸೇರುತ್ತಿಲ್ಲ. ಹೇಂಗ್‌ ಮಾಡೋದು ತಿಳಿವಲುª. ನಮಗ ನ್ಯಾಯ ಕೊಡಸ್ರಿ ಎಂದು ಕಣ್ಣೀರುದರು.

ಗಿರೀಶ ಭಾವಚಿತ್ರಕ್ಕೆ ಹೂಗಳನ್ನು  ಶ್ರದ್ಧಾಂಜಲಿ ಅರ್ಪಿಸಿದ ಪ್ರಿಯಾಂಕ್‌ ಖರ್ಗೆ, ಯಾವುದಕ್ಕೂ ಭಯಪಡಬೇಡಿ. ಈಗಾಗಲೇ ಉನ್ನತ ಅಧಿ ಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲ ರೀತಿಯ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಅಪರಾಧಿ ಗಳಿಗೆ ತಕ್ಕ ಶಿಕ್ಷೆ ಆಗಲಿದೆ. ಧೈರ್ಯದಿಂದ ಇರಿ ಎಂದು ಸಾಂತ್ವನದ ಮಾತುಗಳನ್ನು ಆಡಿದರು.

ತಹಶೀಲ್ದಾರ್‌ ಸುರೇಶ ವರ್ಮಾ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಿವಕುಮಾರ ಹೊನಗುಂಟಿ, ಜಿಲ್ಲಾ ವಕ್ತಾರ ಪೀರಪಾಶಾ, ರಾಜೇಶ್‌ ಯನಗುಂಟಿಕರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಕಿರಣ ಚವ್ಹಾಣ, ಮಲ್ಲಿಕಾರ್ಜುನ ವಾಲಿ, ಡಾ| ಅಹ್ಮದ್‌ ಪಟೇಲ್‌, ಕುಮಾರ ಚವ್ಹಾಣ, ಮಾಣಿಕ್‌ಗೌಡ, ಶಿವಕುಮಾರ ನಾಟೇಕಾರ, ದೇವೇಂದ್ರ ಕಾರೊಳ್ಳಿ, ನಾಗರಾಜ ಕರಣಿಕ್‌, ತಿಪ್ಪಣ್ಣ ನಾಟೇಕಾರ, ಫಜಲ್‌ ಪಟೇಲ್‌, ಸ್ನೇಹಲ್‌ ಜಾಯಿ, ನಾಗೇಂದ್ರ ನಾಟೇಕಾರ ಸೇರಿದಂತೆ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next