Advertisement

Kalaburagi; ಮೋದಿ ಪ್ರಧಾನಿಗಿಂತ ಇವೆಂಟ್ ಮ್ಯಾನೇಜ್ಮೆಂಟ್ ಪರಿಣಿತ: ಪ್ರಿಯಾಂಕ್ ಖರ್ಗೆ

02:39 PM Apr 12, 2024 | Team Udayavani |

ಕಲಬುರಗಿ:  ನರೇಂದ್ರ ಮೋದಿ ಈ ದೇಶದ ಪ್ರಧಾನಿ ಅಲ್ಲ. ಅವರು ಇವೆಂಟ್ ಮ್ಯಾನೇಜಮೆಂಟ್ ನಲ್ಲಿ ಪರಣಿತರು. ಚುನಾವಣೆ ಬಂದಾಗ ಜನರ ಮೇಲೆ ಎಂತೆಂತಹ ಮೋಹ ಪಾಶದ ಬಲೆ ಬೀಸಿ ಮತ ಸೆಳೆಯುವ ಗೇಮರ್ಸ್ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

Advertisement

ಶುಕ್ರವಾರ ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಸರ್ವೆ ಪ್ರಕಾರ ಕಳೆದ ಹತ್ತು ವರ್ಷದಲ್ಲಿ 67% ಯುವಕರಿಗೆ ಉದ್ಯೋಗ ಸಿಗುವುದು ಕಷ್ಟ ಎಂದು ಹೇಳುತ್ತದೆ. ಗೇಮರ್ಸ್ ಜೊತೆಗೆ ಕರೆಸಿ ಮಾತನಾಡಿದಂತೆ ನಿರುದ್ಯೋಗಿ ಯುವಕರನ್ನು ಕರೆಸಿ ಮಾತನಾಡಿಸಬೇಕಲ್ಲವೇ ಅವರ ಸಮಸ್ಯೆಗಳು ಕೇಳಿಸಿಕೊಳ್ಳಬೇಕಲ್ಲವೇ ಅದನ್ನು ಎರಡು ಅವಧಿಯಲ್ಲಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಗೇಮರ್ಸ್ ಇಂಡಸ್ತ್ರಿಗಳ ಬಂಡವಾಳ ವಿದೇಶಕ್ಕೆ ಹೋಗುತ್ತಿದೆ. ಇದರ ಬಗ್ಗೆ ಮಾತನಾಡಲ್ಲ. ಜುಜೂ ಗೇಮಿಂಗ್ ಅಲ್ಲದೆ ಕಂಪನಿಗಳಿಗೆ 2 ಲಕ್ಷ ಕೋಟಿ ಟ್ಯಾಕ್ಸ್ ಹಾಕಿದ್ದಾರೆ. ಹಲವು ಗೇಮಿಂಗ್ ಕಂಪನಿಗಳು ಉದ್ಯೋಗ ಸೃಷ್ಟಿಸಬಹುದು ಅದರ ಬಗ್ಗೆ ಮತನಾಡುವುದಿಲ್ಲ ಯಾಕೆ ಎಂದರು.

ಗ್ರಾಮ ವಾಸ್ತವ್ಯದಿಂದ ಏನಾಯಿತು?

ಅಭಿವೃದ್ಧಿಗೆ ಬಿಜೆಪಿ ಸರಕಾರದಲ್ಲಿ ಆರ್.ಅಶೋಕ ಏನು ಮಾಡಿದ್ದಾರೆ ಅದನ್ನು ಹೇಳುವುದನ್ನು ಬಿಟ್ಟು ಹಳ್ಳಿಗಳಲ್ಲಿ ಮಲಗಿರುವ ವಿಷಯವನ್ನು ಹೇಳುತ್ತಿದ್ದಾರೆ. ನಿಮ್ಮ ವಾಸ್ತವ್ಯದಿಂದ ಕೆಲಸ ಏನಾಗಿದೆ ಎಂದು ಹೇಳಬೇಕು ಎಂದರು.

Advertisement

ಕುಮಾರಸ್ಬಾಮಿ‌ ಹಾಗೂ ಆರ್. ಅಶೋಕ್ ಗ್ರಾಮವಸ್ತವ್ಯ ಮಾಡಿದ್ದರು. ಒಂದಾದರೂ ಹಳ್ಳಿಗಳು ಉದ್ದಾರ ಆದವಾ ಎಂದು ಪ್ರಶ್ನೆ ಮಾಡಿದರು. ಹಳ್ಳಿಗಳು ಉದ್ದಾರಾ ಮಾಡುತ್ತೇವೆ ಎಂದು ರಾತ್ರಿ ಮಲಗಿದ್ದೀರಲ್ಲವೇ, ಉದ್ದಾರಾ ಆಯ್ತಾ? ಹಳ್ಳಿಗಳಿಗೆ ಏನು ಮಾಡಿದ್ದಿರೆಂದು ಕೇಳಿದರೆ ಹಳ್ಳಿಗಳಲ್ಲಿ ಮಲಗಿದ್ದೆ ಎಂದು ಹೇಳ್ತಾರೆ ಎಂದರು.

ಪ್ರಿಯಾಂಕ್ ಖರ್ಗೆ ಮನಸು ಮಾಡಿದ್ದರೆ ಕೊಲಿ ಸಮಾಜವನ್ನು ಎಸ್.ಟಿಗೆ ಸೇರಿಸಬಹುದೆಂದು ಹೇಳು ಸಂಸದ ಡಾ. ಉಮೇಶ್ ಜಾಧವ್ ಅವರು, ಡಬಲ್ ಎಂಜಿನ ಸರಕಾರಕ್ಕೆ ಐದು ವರ್ಷದಲ್ಲಿ ಮಾಡಕ್ಕಾಗಿಲ್ಲ. ಈ ವಿಚಾರ ನನ್ನ ತಲೆ ಮೇಲೆ ಹಾಕುತ್ತಾರೆ. ಕೇಂದ್ರದಲ್ಲಿ ನಮ್ಮ ಸರಕಾರ ಬಂದರೆ ಕೊಲಿ ಸಮಾಜವನ್ನು ಎಸ್.ಟಿಗೆ ಸೇರ್ಪಡೆ ಮಾಡುವ ಭರವಸೆಯಿಂದ ಬಾಬುರಾವ್  ಚಿಂಚನಸೂರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next