Advertisement
ಜಿಲ್ಲೆಯಲ್ಲೂ ಅವರ ಆಪ್ತ ಬಳಗವಿದ್ದು, ಮುಂಬರುವ ಚುನಾವಣೆಗೆ ಖರ್ಗೆ ಆಯ್ಕೆಯಿಂದ ತಮಗಾಗುವ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಿದ್ದಾರೆ. ಖರ್ಗೆ ಅವರ ಪದಗ್ರಹಣ ಕಾರ್ಯಕ್ರಮಕ್ಕೂ ಜಿಲ್ಲೆಯ ಕಾಂಗ್ರೆಸ್ ನಾಯಕರ ನಿಯೋಗ ತೆರಳಿ ಖರ್ಗೆ ಅವರಿಗೆ ಶುಭ ಕೋರಿ ಬಂದಿದೆ. ಜಿಲ್ಲಾಧ್ಯಕ್ಷ ಬಿ.ವಿ. ನಾಯಕ ನೇತೃತ್ವದಲ್ಲಿ ಶಾಸಕರು, ಮಾಜಿ ಶಾಸಕರು ಮಾತ್ರವಲ್ಲದೇ ಅನೇಕ “ಕೈ’ ನಾಯಕರು ದಿಲ್ಲಿಯಲ್ಲಿ ಬೀಡು ಬಿಟ್ಟು ಖರ್ಗೆ ಜತೆ ಉಭಯ ಕುಲಶೋಪರಿ ಮಾಡಿ ಬಂದಿದ್ದಾರೆ. ಕಲಬುರಗಿ ಜಿಲ್ಲೆಯನ್ನು ಹೆಚ್ಚು ಪ್ರತಿನಿಧಿ ಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, 371 ಜೆ ಅನುಷ್ಠಾನದ ಬಳಿಕ ಕಲ್ಯಾಣ ಕರ್ನಾಟಕ ಭಾಗದಪ್ರಶ್ನಾತೀತ ನಾಯಕರಾದರು. ಆದರೆ, ರಾಜ್ಯದಲ್ಲಿ ಅವರಿಗೆ ಹೆಚ್ಚಿನ ಅ ಧಿಕಾರಗಳು ಸಿಗದಿದ್ದಾಗ ಬೇರೆ ಜಿಲ್ಲೆಗಳ ಮೇಲೆ ಅವರ ಪ್ರಭಾವ ಅಷ್ಟಾಗಿ ಇರಲಿಲ್ಲ.
Related Articles
ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಈಗ ಭಿನ್ನಮತದ್ದೇ ಸುದ್ದಿ. ಪಕ್ಷದ ಆಂತರಿಕ ಕಚ್ಚಾಟ ಇತ್ತೀಚೆಗೆ ಬೀದಿಗೆ ಬರುತ್ತಿದ್ದು, ಪಕ್ಷದಲ್ಲಿ ಶಿಸ್ತು ಕ್ಷೀಣಿಸಿದೆ ಎಂದು ಹಿರಿಯ ನಾಯಕರೇ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಭಿನ್ನಮತವೇ ಚುನಾವಣೆಯಲ್ಲಿ ಸೋಲು, ಗೆಲುವುಗಳನ್ನು ನಿರ್ಧರಿಸಿರುತ್ತಿರುವುದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ ಕೂಡ. ಆದರೂ, ಇಂದಿಗೂ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರಿಯುತ್ತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎದುರಲ್ಲೇ ಜಗಳವಾಗಿರುವುದು ತಾಜಾ ನಿದರ್ಶನ. ಈ ಗೊಂದಲವನ್ನು ಪಕ್ಷದ ಜಿಲ್ಲಾಧ್ಯಕ್ಷರು, ಇಲ್ಲವೇ ಕೆಪಿಸಿಸಿ ನಾಯಕರು ನಿವಾರಿಸಬೇಕು. ಆದರೆ, ಕಲ್ಯಾಣ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಖರ್ಗೆಯವರಿಗೆ ಇಂಥ ಸಂಗತಿಗಳು ಮುಜುಗರ ತರಿಸುವಂತಾದರೆ ಕಷ್ಟ.
Advertisement
ವರವಾಗುವುದೇ ರಾಹುಲ್ ಭೇಟಿ?ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ ಐಕ್ಯತಾ ಯಾತ್ರೆ ಕೂಡ ಜಿಲ್ಲೆಯಲ್ಲಿ ಮೂರು ದಿನ ನಡೆದಿರುವುದು ಪಕ್ಷಕ್ಕೆ ವರವೇ ಎನ್ನಲಾಗುತ್ತಿದೆ. ರಾಯಚೂರು ಗ್ರಾಮೀಣ ಮತ್ತು ನಗರ ಕ್ಷೇತ್ರದಲ್ಲಿ ಸಂಚರಿಸಿದ ಯಾತ್ರೆಗೆ ಎಲ್ಲಿಲ್ಲದ ಬೆಂಬಲ ಸಿಕ್ಕಿತ್ತು. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಹೆಜ್ಜೆಗಳು ಮತಗಳಾಗಿ ಪರಿವರ್ತನೆಗೊಂಡಲ್ಲಿ ಕಾಂಗ್ರೆಸ್‌ಗೆ ನಿಜಕ್ಕೂ ವರವಾಗಲಿದೆ. *ಸಿದ್ಧಯ್ಯಸ್ವಾಮಿ ಕುಕನೂರು