ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರೂ ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ್ ಖರ್ಗೆ, ಡಾ| ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಯಾಗದೇ ಇರುವುದು ರಾಜ್ಯದ ದೌರ್ಭಾಗ್ಯ ಎಂದು ಬಣ್ಣಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಮಲ್ಲಿ ಕಾರ್ಜುನ್ ಖರ್ಗೆಯವರು ಮುಖ್ಯ ಮಂತ್ರಿ ಮಾತ್ರವಲ್ಲ, ಪ್ರಧಾನ ಮಂತ್ರಿಯೂ ಆಗಬೇಕು ಎಂದು ಆಶಿಸಿದರು.
ನಗರದಲ್ಲಿ ಮಾತನಾಡಿ, ಮೋದಿಯವರು ರಾಹುಲ್ ಗಾಂಧಿಗೂ ಹೆದರುವುದಿಲ್ಲ. ಮೋದಿಯವರು ಯಾರಿಗಾದರೂ ಅಂಜುತ್ತಾರೆಂದರೆ ಅದು ಮಲ್ಲಿಕಾರ್ಜುನ್ ಖರ್ಗೆಗೆ ಮಾತ್ರ. ಮೋದಿ ಅವರನ್ನು ಎದುರಿಸುವ ಶಕ್ತಿ ಹೊಂದಿರುವ, ಹುಟ್ಟು ಹೋರಾಟಗಾರ ರಾಗಿರುವ ಮಲ್ಲಿಕಾ ರ್ಜುನ್ ಖರ್ಗೆ ಯವರು ಪ್ರಧಾನಮಂತ್ರಿ ಆಗಬೇಕು. ಮುಂದೆ ಅವರು ಪ್ರಧಾನ ಮಂತ್ರಿಯಾದರೆ ಅಚ್ಚರಿ ಪಡುವಂತಿಲ್ಲ ಎಂದರು.
ರಾಜ್ಯದಲ್ಲಿ ಜೀವಂತವಿದ್ದ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ಮೂಲೋತ್ಪಾಟನೆ ಮಾಡಿದ ಕೀರ್ತಿಯ ಬಿ.ಬಸವ ಲಿಂಗಪ್ಪನವರು ಮುಖ್ಯಮಂತ್ರಿ ಆಗಬೇಕಿತ್ತು. ದೆಹಲಿ ನಾಯಕರಿಂದ ಒಪ್ಪಿಗೆ ಸಹ ಪಡೆದಿದ್ದರು. ಆದರೆ, ಕೊನೆಗೆ ದೇವರಾಜ ಅರಸು ಅವರನ್ನು ಮುಖ್ಯ ಮಂತ್ರಿ ಮಾಡಲಾಯಿತು. ಮುಂಬೈಗೆ ಬಂದು ತಮ್ಮನ್ನು ಕಾಣುವಂತೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೇ ಹೇಳಿ ದ್ದರೂ ಕೆ.ಎಚ್.ರಂಗನಾಥ್ ಹೋಗಲಿಲ್ಲ. ಹಾಗಾಗಿ, ಅವರು ಕೂಡಾ ಮುಖ್ಯಮಂತ್ರಿ
ಆಗುವುದು ತಪ್ಪಿತು ಎಂದರು.