Advertisement

Kharge ಬಿಜೆಪಿ ಸೇರಬಹುದು… ; ಜೋಶಿ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಕಿಡಿ

07:54 PM Feb 03, 2024 | Team Udayavani |

ವಿಜಯಪುರ : ರಾಷ್ಟ್ರ ಅಥವಾ ರಾಜ್ಯ ರಾಜಕಾರಣವಿದ್ದರೂ ಅಧಿಕಾರದ ಮೇಲೆ ರಾಜಕಾರಣ ಮಾಡಬಾರದು. ಬದಲಾಗಿ ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು. ಯಾರ ಬಗ್ಗೆಯೂ ಹಗರುವಾಗಿ ಮಾತನಾಡಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

”2024 ರಲ್ಲಿ ಬಿಜೆಪಿ ಅವರೇ ಅಧಿಕಾರಕ್ಕೆ ಬರುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ ಕಲಾಪದ ವೇಳೆ ನೀಡಿದ ಹೇಳಿಕೆಗೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಖರ್ಗೆ ಅವರ ಮಾತನ್ನು ಕೇಳಿದರೆ ಅವರೇ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂಬ ಅನುಮಾನವಿದೆ” ಎಂದಿದ್ದರು.

ಯಾರೂ ಅಧಿಕಾರದ ಮೇಲೆ ರಾಜಕಾರಣ ಮಾಡಬಾರದು, ಯಾರ ಬಗ್ಗೆಯೂ ಯಾರೂ, ಯಾವ ರೀತಿಯಲ್ಲೂ ಹಗುರವಾಗಿ ಮಾತನಾಡಬಾರದು. ಎಲ್ಲರಿಗೂ ಅವರು ಬೆಳೆದು ಬಂದ ಸಿದ್ಧಾಂತ, ನಂಬಿಕೆ, ಆಚಾರ, ವಿಚಾರ ಎಲ್ಲಾ ಇರುತ್ತದೆ. ಹೀಗಾಗಿ ಖರ್ಗೆ ಕಾಂಗ್ರೆಸ್ ಸೇರುತ್ತಾರೆ ಎಂದಿರುವ ಜೋಶಿ ಅವರ ಹೇಳಿಕೆ ಕುರಿತು ಚರ್ಚೆಯೇ ಸೂಕ್ತವಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.

ಬೆಂಗಳೂರು ರಿಂಗ್ ರೋಡ್ ಕಾಮಗಾರಿ ವಿಚಾರದಲ್ಲಿ ಟೆಂಡೆರ್ ಕರೆದಿದ್ದರೂ ರೈತನ ಮಗನಾಗಿ ನಾನು ಯಾವ ರೈತರಿಗೂ ಅನ್ಯಾಯ ಆಗದಂತೆ ರೈತರ ಹಿತರಕ್ಷಣೆ ಮಾಡುತ್ತೇನೆ. ರೈತರಿಗೆ ನಾನು ಏನು ಸಹಾಯ ಮಾಡಬೇಕು ಎಂಬ ಅರಿವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next