Advertisement

ಆತ್ಮೀಯ ಗೆಳೆಯನಿಗೆ ಖರ್ಗೆ ಅಂತಿಮ ನಮನ

07:15 AM Jul 29, 2017 | Team Udayavani |

ಕಲಬುರಗಿ: “ರಾಜಕೀಯ ಜೀವನದಲ್ಲಿ ಸತತ 50 ವರ್ಷಗಳ ಕಾಲ ಒಂದೇ ನಿಲವು, ಒಗ್ಗಟ್ಟು ಹಾಗೂ ಸಮಾನ ಮನಸ್ಸಿನಿಂದ ಮುನ್ನಡೆದು ಬಂದ ಜೋಡಿ ಯಾವುದಾದರೂ ಇದ್ದರೆ ಧರಂಸಿಂಗ್‌ ಹಾಗೂ ನಾನು’ ಎಂದು ಕಾಂಗ್ರೆಸ್‌
ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದರು.

Advertisement

ಗುರುವಾರ ಅಸ್ತಂಗತರಾದ ಮಾಜಿ ಮುಖ್ಯಮಂತ್ರಿ, ಆಪ್ತ ಗೆಳೆಯ ಎನ್‌. ಧರಂಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಇಲ್ಲಿನ
ನೂತನ ವಿದ್ಯಾಲಯ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಿ ಅವರು ಮಾತನಾಡಿದರು. ನಾನು ಕೆಪಿಸಿಸಿ ಅಧ್ಯಕ್ಷರಾಗಿದ್ದರೆ ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ವಿಧಾನಸಭೆಯಲ್ಲದೆ ಲೋಕಸಭೆಯಲ್ಲೂ ಇಬ್ಬರು ಒಟ್ಟಿಗೇ ಪ್ರವೇಶ ಮಾಡಿದ್ದೆವು. ಹೀಗೆ ತಮ್ಮಿಬ್ಬರದ್ದು ಅಪರೂಪದ ಜೋಡಿ ಎಂದು ಅಗಲಿದ ಗೆಳೆಯನ ಸ್ಮರಿಸಿಕೊಂಡರು.

ನಮ್ಮಿಬ್ಬರನ್ನು ನೋಡಿ ಅನೇಕರು, ಏನ್ರೀ ನಿಮ್ಮಿಬ್ಬರದು ಅಪರೂಪದ ಜೋಡಿ. ಇಂತಹ ಜೋಡಿ ನೋಡಿಯೇ ಇಲ್ಲ ಎನ್ನುತ್ತಿದ್ದರು. ಪ್ರತಿಯೊಂದು ವಿಷಯದ ಬಗ್ಗೆಯೂ ಇಬ್ಬರೂ ಕೂಡಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು. ಕೆಲವು
ವಿಚಾರಗಳಲ್ಲಿ ಭಿನ್ನತೆ ಇದ್ದರೂ ನಡೆ-ನುಡಿ ಒಂದೇ ಆಗಿತ್ತು. ಎಲ್ಲರ ಹೆಸರು ಹಾಗೂ ದೂರವಾಣಿ ಸಂಖ್ಯೆಗಳನ್ನು ಫ‌ಟಾಫ‌ಟ್‌ ಹೇಳುತ್ತಿದ್ದರು. ಆಪ್ತ ಗೆಳೆಯನನ್ನು ಕಳೆದುಕೊಂಡು ನನಗೆ ಅತೀವ ದುಃಖ ಉಂಟಾಗಿದೆ ಎಂದು ಕಂಬನಿ ಮಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next