ಕಲಬುರಗಿ: “ನಾನು ಮುಖ್ಯಮಂತ್ರಿಯಾಗಿ 5 ವರ್ಷ ಅ ಧಿಕಾರ ನಡೆಸಿದ್ದೇನೆ, ನನ್ನ ಸರ್ಕಾರದ ಸಾಧನೆ ಪಟ್ಟಿ ಕೊಡುತ್ತೇನೆ. ಅದೇ ರೀತಿ ಪ್ರಧಾನಿಯಾಗಿ 5 ವರ್ಷದ ಸಾಧನೆ ಪಟ್ಟಿ ಮೋದಿ ಕೊಡಲಿ’ ಎಂದು ಸವಾಲು ಹಾಕಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಮೋದಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಎಂದರೆ ಭಯ. ಹೀಗಾಗಿ ಅವರನ್ನು ಸೋಲಿಸಲು ದಿಲ್ಲಿಯಿಂದ ಹಳ್ಳಿ ನಾಯಕರ ತನಕ ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಸತತ 11 ಬಾರಿ ಖರ್ಗೆ ಅವರನ್ನು ಕಲಬುರಗಿ ಮತದಾರರು ಗೆಲ್ಲಿಸಿದ್ದು ತಮಾಷೆಯಲ್ಲ. ಖರ್ಗೆ ಅವರ ಅಭಿವೃದ್ಧಿ ಕೆಲಸ ನೋಡಿ ಮತ ಹಾಕಿದ್ದಾರೆಯೇ ಹೊರತು ಬಿಜೆಪಿಗರ ಬಣ್ಣದ ಮಾತಿಗಲ್ಲ. ಲೋಕಸಭೆಯಲ್ಲಿ ಅವರು ಇದ್ದರೆ ಲೋಕಸಭೆಗೆ ಗೌರವ ಇದ್ದಂತೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಹಾಗೂ ಉಮೇಶ ಜಾಧವ ಕೊಡುಗೆ ಕಲಬುರಗಿಗೆ ಏನಿದೆ? ಉಮೇಶ ಜಾಧವ ಗೋಮುಖ ವ್ಯಾಘ್ರ, ತನ್ನನ್ನೇ ತಾನು ಮಾರಿಕೊಂಡವ ಕಲಬುರಗಿ ಬಿಡ್ತಾನಾ? ಹೀಗಾಗಿ ಮಾರಿಕೊಂಡವರಿಗೆ ಮನ್ನಣೆ ಕೊಡುವುದನ್ನು ಬಿಟ್ಟು , ಕಣ್ಣಿಗೆ ಕಾಣುವಂತ, ಅಭಿವೃದ್ಧಿ ಕೆಲಸ ಮಾಡಿದ ಖರ್ಗೆ ಅವರಿಗೆ ಮತ ಕೊಡಿ ಎಂದರು.
ಸಂವಿಧಾನ ಬದಲಾಯಿಸುತ್ತೇವೆ, ಮಿಸಲಾತಿ ತೆಗೆಯುತ್ತೇವೆ ಎನ್ನುವ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ, ಅನಂತ ಕುಮಾರ ಹೆಗಡೆ ಗ್ರಾಪಂ ಸದಸ್ಯನಾಗಲೂ ನಾಲಾಯಕ್ ಆಗಿದ್ದಾನೆ. ತೇಜಸ್ವಿ ಸೂರ್ಯ ಅಲ್ಲ ಆತ ಅಮಾವಾಸ್ಯೆಯ ಕತ್ತಲು. ಇಂತವರಿಗೆ ಮತ ನೀಡಬೇಡಿ ಎಂದರು.
ಈ ಚುನಾವಣೆ ಕೇವಲ ನನ್ನನ್ನು ಸೋಲಿಸುವ ಹುನ್ನಾರ ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವದ ಅಳಿವು, ಉಳಿವಿನ ಚುನಾವಣೆಯಾಗಿದೆ. ದಿಲ್ಲಿಯಿಂದ ಗಲ್ಲಿ ತನಕ ಪ್ರಜಾಪ್ರಭುತ್ವ ವಿರೋ ಧಿಗಳೆಲ್ಲ ಒಂದಾಗಿದ್ದಾರೆ. ಅವರಿಂದ ದೇಶಕ್ಕೆ ಗಂಡಾಂತರ ಇದೆ. ಹೀಗಾಗಿ ಪ್ರಜಾಪ್ರಭುತ್ವ ವಿರೋ ಧಿಗಳಿಗೆ ಮತದಾರ ಪ್ರಭುಗಳು ಬುದ್ಧಿ ಕಲಿಸಬೇಕು.
-ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ