ಮುಂಬಯಿ: ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹರ್ ನಗರದ ಪಹೇಲ್ವಾನ್ ಚಾಳ್‌ನಲ್ಲಿ ತುಳು ಕನ್ನಡಿಗರ ಆಡಳಿತದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳಿಂದ ಕಳೆದ ಸುಮಾರು ಐದೂವರೆ ದಶಕಗಳಿಂದ ಮುನ್ನಡೆದು ಬಂದ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಶ್ರೀ ಶನಿದೇವರ ಪ್ರತಿಷ್ಠಾಪಿತ ಸಾಯಿಧಾಮ್ ಬಿಲ್ಡಿಂಗ್‌ನ ಮಂದಿರದಲ್ಲಿ ಶ್ರೀ ಶನೀಶ್ವರ ಜಯಂತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೂ. 3 ರಂದು ದಿನಪೂರ್ತಿ ನಡೆಯಿತು.
ಶನಿಜಯಂತಿಯ ಅಂಗವಾಗಿ ಜೂ. 3 ರಂದು ವಿದ್ವಾನ್ ಶ್ರೀನಿವಾಸ ಜೋಯಿಸ ಅವರ ಪೌರೋಹಿತ್ಯದಲ್ಲಿ ಗಣಹೋಮ, ಚಿನ್ನದ ಶನಿದೇವರ ಭಾವಚಿತ್ರ, ಜಗನ್ಮಾತೆ, ಗುರು ರಾಘವೇಂದ್ರ ಸ್ವಾಮಿ ಹಾಗೂ ಮಹಾಗಣಪತಿ ದೇವರ ಬೆಳ್ಳಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಯಿತು. ಮಂದಿರದ ಅರ್ಚಕ, ಸಮಿತಿಯ ಗೌರವ ಕೋಶಾಧಿಕಾರಿ ನಾಗೇಶ್ ಜಿ. ಸುವರ್ಣ ಅವರ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ಕಲಶ ಅಭಿಷೇಕ ಹಾಗೂ ಸಮಿತಿಯ ಉಪಾಧ್ಯಕ್ಷ ದೇವೇಂದ್ರ ವಿ. ಬಂಗೇರ ಮತ್ತು ತಾರಾ ದೇವೇಂದ್ರ ದಂಪತಿಯ ಯಜಮಾನಿಕೆಯಲ್ಲಿ ಕಲಶ ಪ್ರತಿಷ್ಠೆ ಮತ್ತು ಜತೆ ಕಾರ್ಯದರ್ಶಿ ರಮೇಶ್ ಪೂಜಾರಿ ಯಜಮಾನಿಕೆಯಲ್ಲಿ ಮಹಾಪೂಜೆ ನಡೆಯಿತು. ಅನಂತರ ಭಜನೆ, ಶ್ರೀ ಶನಿಗ್ರಂಥ ಪಾರಾಯಣ ಹಾಗೂ ರಾತ್ರಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥಪ್ರಸಾದ ವಿತರಿಸಲಾಯಿತು.
ಕಲಶ ಪ್ರತಿಷ್ಠೆ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಧಾನ ಪ್ರಬಂಧಕ ಎನ್. ಜಿ. ಪೂಜಾರಿ, ಭೂಮಿಕಾ ಎನ್.ಪೂಜಾರಿ, ರೈಲ್ವೇ ಯಾತ್ರಿ ಸಂಘ ಬೊರಿವಿಲಿ ಮುಂಬಯಿ ಇದರ ಪ್ರೇಮನಾಥ್ ಪಿ. ಕೋಟ್ಯಾನ್, ರಜಿತ್ ಸುವರ್ಣ ಅವರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಅಧ್ಯಕ್ಷ ಶಂಕರ್ ಕೆ. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ. ಹೆಜ್ಮಾಡಿ, ಕಾರ್ಯಾಧ್ಯಕ್ಷ ಆರ್. ಡಿ. ಕೋಟ್ಯಾನ್, ಉಪಾಧ್ಯಕ್ಷ ಜಯರಾಮ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಹರೀಶ್ ಎನ್. ಪೂಜಾರಿ, ಹರೀಶ್ ಕೋಟ್ಯಾನ್ ಕಾಪು, ಜನಾರ್ದನ್ ಎನ್. ಸಾಲ್ಯಾನ್, ಜತೆ ಕೋಶಾಧಿಕಾರಿ ವಿನೋದ್ ವೈ. ಹೆಜ್ಮಾಡಿ, ಮಹಿಳಾ ಮಂಡಳಿ ಜೊತೆ ಕಾರ್ಯಾಧ್ಯಕ್ಷೆಯರಾದ ಕೇಸರಿ ಬಿ. ಅಮೀನ್, ಶೋಭಾ ವಿ. ಕೋಟ್ಯಾನ್, ಯುವಕ ವೃಂದದ ಕಾರ್ಯಾಧ್ಯಕ್ಷ ವಿಜಯ್ ಎನ್. ಸಾಲ್ಯಾನ್, ಭೋಜ ಸಿ. ಪೂಜಾರಿ, ಅರ್ಚಕರಾದ ಕೃಷ್ಣ ಕುಲಾಲ್, ಗಿರೀಶ್ ಪೂಜಾರಿ, ರವಿ ಹೆಜ್ಮಾಡಿ, ವಿಶ್ವಸ್ತ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಮತ್ತು ಯುವಕ ವೃಂದದ ಸೇವಾಕರ್ತರು, ಸದಸ್ಯರು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಶನಿದೇವರ ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್