ಮುಂಬಯಿ: ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ ಸುವರ್ಣ ಮಹೋತ್ಸವ ಸಂಭ್ರಮವು ಫೆ. 5 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಮಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ನಿರಂತರ 50 ವರ್ಷಗಳ ಸೇವೆಸಲ್ಲಿಸಿದ ಯೋಗೆಶ್ ಕೆ. ಹೆಜ್ಮಾಡಿ ಮತ್ತು ಲೀಲಾ ಯೋಗೇಶ್ ದಂಪತಿಯನ್ನು ಅತಿಥಿಗಳು ಸೇವಾ ಸಮಿತಿ ಪರವಾಗಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರು ವಿಶೇಷವಾಗಿ ಸಮ್ಮಾನಿಸಿ ಗೌರವಿಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಉಪಸ್ಥಿತಿಯಲ್ಲಿ ಅಸೋಸಿಯೇಶನ್‌ನ ಸೇವಾದಳದ ಅನನ್ಯ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು. ಸೇವಾದಳ ಪಡೆಯ ಸಿಪಾಯಿಗಳು, ಮಹಿಳಾ ಕಾರ್ಯಕರ್ತೆಯರನ್ನು ಸೇರಿಕೊಂಡು ಸೇವಾದಳದ ದಳಪತಿ ಗಣೇಶ್ ಕೆ. ಪೂಜಾರಿ, ಉಪ ದಳನಾಯಕ ಸುಧಾಕರ ಎ. ಪೂಜಾರಿ ಅವರನ್ನು ಸಮ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶನಿ ಮಹಾತ್ಮ ಸೇವಾ ಸಮಿತಿಯ ಅಧ್ಯಕ್ಷ ಶಂಕರ್ ಕೆ. ಸುವರ್ಣ, ಗೌರವಾಧ್ಯಕ್ಷ ಶ್ರೀಧರ್ ಜೆ. ಬಂಗೇರ, ಉಪಾಧ್ಯಕ್ಷ ದೇವೇಂದ್ರ ವಿ. ಬಂಗೇರ, ಗೌರವ ಪ್ರಧಾನ ಕೋಶಾಧಿಕಾರಿ ನಾಗೇಶ್ ಜಿ. ಸುವರ್ಣ, ಮಹಿಳಾ ಮಂಡಳಿಯ ಮುಖ್ಯಸ್ಥೆ ಕೇಸರಿ ಬಿ. ಅಮೀನ್, ಪ್ರಕಾಶ್ ಮೂಡಬಿದ್ರಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ದಾಮೋದರ ಸಿ. ಕುಂದರ್, ನ್ಯಾಯವಾದಿ ಎಸ್. ಬಿ. ಅಮೀನ್, ಭಾರತಿ ನಿಟ್ಟೇಕರ್, ಹರಿದಾಸ ಜಿ. ಶೆಟ್ಟಿ ವಿದ್ಯಾವಿಹಾರ್, ನಿಲೇಶ್ ಪೂಜಾರಿ ಪಲಿಮಾರ್, ಹರೀಶ್ ಅಂಚನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್