Advertisement
ಸಹಕಾರ ಕ್ಷೇತ್ರದ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ರೂ.2200 ಮುಂಗಡ ಹಣವನ್ನು ತಕ್ಷಣ ಪಾವತಿಸಬೇಕು. ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ರೂ.10 ಕೋಟಿ ಸಾಲದ ಖಾತ್ರಿ ಕೊಟ್ಟರೂ ಬ್ಯಾಂಕ್ ಸಾಲ ಕೊಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಬಿಎಸ್‌ಎಸ್‌ಕೆಯನ್ನ ಸುಸ್ಥಿರಗೊಳಿಸಲು ಸಹಕರಿಸಬೇಕು.
ಮುಖಂಡರೊಂದಿಗೆ ಮಾತನಾಡಿ, ಸೂಕ್ತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ಉಪಾಧ್ಯಕ್ಷ ಶಾಕಿಮ್, ರಾಜ್ಯ ಸಂಘದ ಕಾರ್ಯದರ್ಶಿ ಪಾಂಡ್ರೆ, ತಾಲೂಕು ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯದರ್ಶಿ ಬಾಬುರಾವ್ ಜೋಳದಾಪಕಾ, ಪ್ರಮುಖರಾದ ವೈಜಿನಾಥ ನೌಬಾದೆ, ಶಂಕ್ರೇಪ್ಪ ಪಾರಾ, ವಿಶ್ವನಾಥ ಚೀಲಶೆಟ್ಟೆ, ಶೇಷರಾವ್ ಕಣಜಿ, ಕೊಂಡಿಬಾ ಪಾಂಡ್ರೆ, ಸ್ರೀಮಂತ ಬಿರಾದಾರ್, ಮನೋಹರರಾವ್ ಹೊರಂಡಿ, ಶರಣಪ್ಪ ಕಂದಗೂಳ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾದೇವಿ ಕಾರಬಾರಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.