Advertisement

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

01:36 AM Sep 20, 2024 | Team Udayavani |

ವಾಷಿಂಗ್ಟನ್‌: “ನನ್ನ ಹತ್ಯೆಗೆ ಭಾರತ ಸರಕಾರ 2 ಬಾರಿ ಸಂಚು ರೂಪಿಸಿತ್ತು’ ಎಂದು ಆರೋಪಿಸಿ ಅಮೆರಿಕದ ಕೋರ್ಟ್‌ನಲ್ಲಿ ಖಲಿಸ್ಥಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಮೊಕ ದ್ದಮೆ ಹೂಡಿದ್ದಾನೆ. ಹೀಗಾಗಿ, ದಕ್ಷಿಣ ನ್ಯೂಯಾರ್ಕ್‌ ಜಿಲ್ಲೆಯ ಕೋರ್ಟ್‌ ಭಾರತ ಸರಕಾರ, ರಾಷ್ಟ್ರೀಯ ಭದ್ರತಾ ಸಲ ಹೆಗಾರ ಅಜಿತ್‌ ದೋವಲ್‌ಗೆ ಸಮನ್ಸ್‌ ಜಾರಿಗೊಳಿಸಿದೆ. 21ದಿನಗಳ ಒಳಗೆ ಭಾರತ ಸರಕಾರ ಪ್ರತಿಕ್ರಿಯಿಸ ಬೇ ಕೆಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

Advertisement

ದೋವಲ್‌ ಮಾತ್ರವಲ್ಲದೆ, “ರಾ’ ಮಾಜಿ ಮುಖ್ಯಸ್ಥ ಸಮಂತ್‌ ಗೋಯೆಲ್‌, ಏಜೆಂಟ್‌ ವಿಕ್ರಮ್‌ ಯಾದವ್‌, ಉದ್ಯಮಿ ನಿಕಿಲ್‌ ಗುಪ್ತಾ ಹೆಸರನ್ನೂ ಉಗ್ರ ಪನ್ನು ಮೊಕದ್ದಮೆಯಲ್ಲಿ ಸೇರಿಸಿದ್ದಾನೆ. ಪನ್ನು ನೇತೃತ್ವದ ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್ಜೆ) ಸಂಘಟನೆ ಈ ಸಮನ್ಸ್‌ ಪ್ರತಿಯನ್ನು ಹಂಚಿಕೊಂಡಿದೆ.

ಅನಗತ್ಯ, ಆಧಾರ ರಹಿತ: ಭಾರತ
ಅಮೆರಿಕ ಕೋರ್ಟ್‌ ಸಮನ್ಸ್‌ ಸಂಬಂಧ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಪ್ರತಿಕ್ರಿಯಿಸಿದ್ದಾರೆ.” ಈ ಹಿಂದೆಯೇ ಈ ಆರೋಪಗಳೆಲ್ಲ ಅನಗತ್ಯ ಮತ್ತು ಆಧಾರರಹಿತ ವೆಂದು ಹೇಳಿದ್ದೇವೆ. ಆದಾಗ್ಯೂ ಈಗ ಕೇಸು ದಾಖಲಿಸಲಾಗಿದೆ ಹಾಗೆಂದ ಮಾತ್ರಕ್ಕೆ ನಮ್ಮ ಹಿಂದಿನ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next