ನ್ಯೂಯಾರ್ಕ್/ಹೊಸದಿಲ್ಲಿ: ಪಂಜಾಬ್‌ನಲ್ಲಿ ಹಿಂದೂ ನಾಯಕರ ಮೇಲೆ ದಾಳಿ ನಡೆಸಲು ಖಲಿಸ್ಥಾನ ಪರ ಸಂಘಟನೆಗಳು ಸಂಚು ರೂಪಿಸಿವೆ. ಪ್ರಮುಖವಾಗಿ ಇಬ್ಬರು ಹಿಂದೂ ನಾಯಕರ ಪ್ರಾಣಕ್ಕೆ ಬೆದ ರಿಕೆ ಇದೆ ಎಂಬ ಆಘಾತಕಾರಿ ವಿಚಾರವನ್ನು ಗುಪ್ತಚರ ಮೂಲಗಳು ಬಹಿರಂಗಪಡಿಸಿವೆ. ಈ ಹಿನ್ನೆಲೆಯಲ್ಲಿ ಖಲಿಸ್ಥಾನ ಸಂಘಟನೆಗಳ ಮೇಲೆ ಗುಪ್ತಚರ ಇಲಾಖೆ ಸೇರಿದಂತೆ ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿವೆ.
ಕಳೆದ ತಿಂಗಳು ಕೆನಡಾದಲ್ಲಿ ಉಗ್ರ ನಿಜ್ಜರ್, ಬ್ರಿಟನ್‌ನಲ್ಲಿ ಅವತಾರ್ ಸಿಂಗ್ ಖಂಡಾ ಹತ್ಯೆ ಮತ್ತು ಮೇಯಲ್ಲಿ ಪಾಕಿಸ್ಥಾನ ಮೂಲದ ಉಗ್ರ ಪರಮ್‌ಜಿತ್ ಸಿಂಗ್ ಪಂಜ್ವಾರ್ ಕೊಲೆಯಿಂದಾಗಿ ಖಲಿಸ್ಥಾನಿ ನಾಯಕತ್ವ ತೀವ್ರ ಒತ್ತಡದಲ್ಲಿದೆ. ಇವರೆಲ್ಲರ ಹತ್ಯೆಗೆ ಪ್ರತೀಕಾರ ತೀರಿಸಲು ಖಲಿಸ್ಥಾನ ಪರ ಸಂಘಟನೆಗಳು ಸಂಚು ರೂಪಿಸಿವೆ ಎನ್ನಲಾಗಿದೆ. ಇದೇ ವೇಳೆ ಕೆನಡಾ, ಬ್ರಿಟನ್, ಅಮೆರಿಕ, ಆಸ್ಪ್ರೆಲಿಯಾದಲ್ಲಿ ಭಾರತದ ದೂತವಾಸ ಕಚೇರಿಗಳ ಎದುರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲು ಈ ಸಂಘಟನೆಗಳು ಯೋಜಿಸಿವೆ.
ದೂತವಾಸ ಕಚೇರಿ ಮೇಲೆ ದಾಳಿ: ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತೀ ಯ ದೂತಾವಾಸ ಕಚೇರಿ ಮೇಲೆ ಖಲಿಸ್ಥಾನಿ ಬೆಂಬಲಿರು ದಾಳಿ ನಡೆಸಿದ್ದು, ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ಕೃತ್ಯವನ್ನು ಭಾರತ, ಅಮೆರಿಕ ಬಲವಾಗಿ ಖಂಡಿಸಿದೆ. 5 ತಿಂಗಳಲ್ಲಿ ಭಾರತೀಯ ದೂತಾವಾಸ ಕಚೇರಿ ಮೇಲಿನ ಎರಡನೇ ದಾಳಿ ಇದಾಗಿದೆ. ಮಾರ್ಚ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ಥಾನಿ ಬೆಂಬಲಿಗರು ನುಗ್ಗಿ, ವಿಧ್ವಂಸಕ ಕೃತ್ಯ ಎಸಗಿದ್ದರು.
ಜು.2ರ ರವಿವಾರ ಮುಂಜಾನೆ ಖಲಿ ಸ್ಥಾನ ಪರ ಪ್ರತಿಭಟನಕಾರರು ಭಾರ ತೀಯ ದೂತವಾಸ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕೂಡಲೇ ಅಗ್ನಿಶಾ ಮಕ ಸಿಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ.
“ಭಾರತೀಯ ದೂತವಾಸ ಕಚೇರಿ ಮೇಲಿನ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿ ವಿದೇಶಿ ರಾಜತಾಂತ್ರಿಕರು ಹಾಗೂ ರಾಯಭಾರ ಕಚೇರಿ ಮೇಲಿನ ವಿಧ್ವಂಸಕ ಕೃತ್ಯವು ಕ್ರಿಮಿ ನಲ್ ಅಪರಾಧವಾಗಿದೆ’ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಟ್ವೀಟ್ ಮಾಡಿದ್ದಾರೆ.
ಅಧಿಕಾರಿಗಳ ಸುರಕ್ಷೆಗೆ ಬದ್ಧ: ಕೆನಡಾ
ಭಾರತದ ರಾಜತಾಂತ್ರಿಕ ಅಧಿಕಾರಿಗಳ ಚಿತ್ರಗಳ ಸಮೇತ ಬೆದರಿಕೆ ಅಂಶ ಇರುವ ಪೋಸ್ಟರ್‌ಗಳು ಆನ್‌ಲೈನ್ ನಲ್ಲಿ ಹಂಚಿಕೆ ಯಾಗುತ್ತಿರುವ ಸಂಬಂಧ ಕೆನಡಾದ ಹೈಕಮಿಷನರ್ ಕೆಮರಾನ್ ಅವರಿಗೆ ಭಾರತ ಸಮನ್ಸ್ ಜಾರಿಗೊಳಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆನಡಾ, ಭಾರತೀಯ ರಾಜ ತಾಂತ್ರಿಕ ಅಧಿಕಾರಿಗಳ ಸುರಕ್ಷೆಯ ಭರವಸೆ ನೀಡಿದೆ. ಕಳೆದ ತಿಂಗಳು ಖಲಿಸ್ಥಾನಿ ಉಗ್ರ ನಿಜ್ಜರ್ ಹತ್ಯೆಗೆ ಭಾರತ ಕಾರಣವೆಂದು ಖಲಿಸ್ಥಾನಿಯರು ಆರೋಪಿಸಿದ್ದಾರೆ. ಭಾರತದ ರಾಜತಾಂತ್ರಿಕ ಅಧಿಕಾರಿಗಳ ಚಿತ್ರ ಸಮೇತ ಬೆದರಿಕೆ ಹಾಕಿರುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಖಲಿಸ್ಥಾನಿ ಬೆಂಬಲಿಗರು ಶೇರ್ ಮಾಡುತ್ತಿದ್ದಾರೆ.