Advertisement

ಪಂಜಾಬ್ ಪೊಲೀಸರಿಂದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಬಂಧನ

05:35 PM Mar 18, 2023 | Team Udayavani |

ಚಂಡೀಗಢ: ಖಲಿಸ್ತಾನಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಶನಿವಾರ ಜಲಂಧರ್‌ ನ ನಕೋದರ್ ಬಳಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಪ್ರತ್ಯೇಕತಾವಾದಿ ನಾಯಕನ ವಿರುದ್ಧ ಪಂಜಾಬ್ ಪೊಲೀಸರು ಶನಿವಾರ ಕ್ರಮ ಕೈಗೊಂಡ ಬಳಿಕ ಈ ಬೆಳವಣಿಗೆ ನಡೆದಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯವು ಪಂಜಾಬ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವರದಿ ಹೇಳಿದೆ.

ಆತನ ಆರು ಮಂದಿ ಸಹಾಯಕರನ್ನು ಈ ಹಿಂದೆ ಜಲಂಧರ್‌ ನಲ್ಲಿ ಬಂಧಿಸಲಾಗಿತ್ತು. ಅವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಪುಲ್ವಾಮಾದಲ್ಲಿ ಬಸ್ ಅವಘಡ; ನಾಲ್ವರು ಮೃತ್ಯು, 28 ಮಂದಿ ಆಸ್ಪತ್ರೆಗೆ ದಾಖಲು

ಪಂಜಾಬ್ ಪೊಲೀಸರು ಶಾಕೋಟ್ ಬಳಿ ಅಮೃತಪಾಲ್ ಸಿಂಗ್ ಅವರಿದ್ದ ಸ್ಥಳವನ್ನು ಪತ್ತೆ ಹಚ್ಚಿ ನಂತರ ಬಂಧಿಸಲು ಮುಂದಾಗಿದ್ದಾರೆ. ಅವರನ್ನು ಬಂಧಿಸುವ ಪ್ರಯತ್ನದಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಖಲಿಸ್ತಾನಿ ನಾಯಕ ಮತ್ತು ಅವರ ಸಹಾಯಕರನ್ನು ಹಿಂಬಾಲಿಸಿದವು. ಪಂಜಾಬ್‌ ನ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ.

Advertisement

ಕಳೆದ ತಿಂಗಳು ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಪೊಲೀಸ್ ಬ್ಯಾರಿಕೇಡ್‌ ಗಳನ್ನು ಭೇದಿಸಿ ಅಜ್ನಾಲಾ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರಗಳನ್ನು ಝಳಪಿಸಿದ್ದರು. ಗಲಭೆಯಲ್ಲಿ ಬಂಧಿಸಲಾಗಿದ್ದ ಅವರ ಸಹಾಯಕರಲ್ಲಿ ಒಬ್ಬನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಬಲಿಗರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next