ಒಟ್ಟಾವ(ಕೆನಡಾ): ನಿಷೇಧಿತ ಸಿಖ್ ಫಾರ್ ಜಸ್ಟೀಸ್ (SFJ) ಸಂಘಟನೆ ಮತ್ತೊಂದು ಭಾರತ ವಿರೋಧಿ ಪ್ರಚೋದನಕಾರಿ ಕಾರ್ಯದಲ್ಲಿ ತೊಡಗಿದ್ದು, ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಜಯ್ ಕುಮಾರ್ ವರ್ಮಾ ಅವರ ಕುರಿತು ಮಾಹಿತಿ ನೀಡುವವರಿಗೆ 10, 000 ಅಮೆರಿಕನ್ ಡಾಲರ್ ಬಹುಮಾನ ನೀಡುವ ಘೋಷಣೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:LEO: ಕಾಂತಾರ, ಕೆಜಿಎಫ್, ಪುಷ್ಪ.. ಸೀಕ್ವೆಲ್ ಟ್ರೆಂಡ್: 2 ಭಾಗಗಳಲ್ಲಿ ʼಲಿಯೋʼ ರಿಲೀಸ್ ?
ಕೆನಡಾದಲ್ಲಿರುವ ರಾಜತಾಂತ್ರಿಕ ಸಂಜಯ್ ಕುಮಾರ್ ವರ್ಮಾ ನಿವಾಸದ ವಿಳಾಸ, ಮಾಹಿತಿ ನೀಡುವವರಿಗೆ 10,000 ಡಾಲರ್ ನಗದು ಬಹುಮಾನ ಕೊಡುವುದಾಗಿ ಸಿಖ್ ಫಾರ್ ಜಸ್ಟೀಸ್ ಪೋಸ್ಟರ್ ನಲ್ಲಿ ಉಲ್ಲೇಖಿಸಿದೆ.
ಕೆನಡಾದಲ್ಲಿ ಸಿಖ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನು ಹತ್ಯೆಗೈದಿರುವುದಕ್ಕೆ ಇದು ಪ್ರತೀಕಾರವಾಗಿದೆ ಎಂದು ಎಸ್ ಎಫ್ ಜೆ ಪೋಸ್ಟರ್ ನಲ್ಲಿ ನಮೂದಿಸಿದೆ. ಇತ್ತೀಚೆಗೆ ಕೆನಡಾದಲ್ಲಿ ಟ್ರಕ್ ನೊಳಗೆ ನಿಜ್ಜಾರ್ ಅವರನ್ನು ಗುಂಡಿಕ್ಕಿ ಕೊಲೆಗೈಯಲಾಗಿತ್ತು.
ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಖಂಡಿಸಿ ಲಂಡನ್, ಮೆಲ್ಬೋರ್ನ್ ಸೇರಿದಂತೆ ಜಗತ್ತಿನ ವಿವಿಧ ನಗರದಲ್ಲಿ ಸಾವಿರಾರು ಸಿಖ್ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸಿದ್ದರು.