ಸಿಡ್ನಿ: ಭದ್ರತಾ ಕಾರಣಗಳಿಗಾಗಿ ಸಿಡ್ನಿಯ ನಗರ ಸಭೆಯು ಮುಂದಿನ ತಿಂಗಳು ಯೋಜಿಸಲಾಗಿದ್ದ ಖಲಿಸ್ಥಾನ್ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.
ಭದ್ರತಾ ಏಜೆನ್ಸಿಗಳ ಸಲಹೆಯ ಮೇರೆಗೆ, ಬ್ಲ್ಯಾಕ್‌ಟೌನ್ ಸಿಟಿಯಲ್ಲಿ ‘ಸಿಖ್ಸ್ ಫಾರ್ ಜಸ್ಟೀಸ್’ ಗುಂಪು ಆಯೋಜಿಸಿದ್ದ ಕಾರ್ಯಕ್ರಮದ ಅನುಮತಿಯನ್ನು ಸಿಟಿ ಕೌನ್ಸಿಲ್ ಹಿಂಪಡೆದಿದೆ ಎಂದು ದಿ ಆಸ್ಟ್ರೇಲಿಯಾ ಟುಡೇ ಪತ್ರಿಕೆ ವರದಿ ಮಾಡಿದೆ.
ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಆಯೋಜಿಸಿರುವ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮೇ 24 ರಂದು ಸಿಡ್ನಿಗೆ ಭೇಟಿ ನೀಡಲಿದ್ದಾರೆ.
ಕೌನ್ಸಿಲ್ ಇಂದು ಬೆಳಗ್ಗೆ ಈ ಬುಕಿಂಗ್ ಅನ್ನು ರದ್ದುಗೊಳಿಸಿದೆ. ಸಾರ್ವಜನಿಕರಿಗೆ ಉಂಟಾಗುವ ಅಪಾಯಗಳ ಕಾರಣದಿಂದಾಗಿ ರದ್ದು ಮಾಡಲಾಗಿದೆ” ಎಂದು ಕೌನ್ಸಿಲ್ ಹೇಳಿಕೆ ತಿಳಿಸಿ ನಗರದಾದ್ಯಂತ ಹಾಕಲಾಗಿದ್ದ ಕಾರ್ಯಕ್ರಮದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಅನುಮೋದನೆ ಕೊರತೆಯನ್ನು ಉಲ್ಲೇಖಿಸಿ ತೆಗೆದುಹಾಕಲಾಗಿದೆ.