Advertisement

ಭಿಂದ್ರನ್‌ವಾಲೆ ಸಹವರ್ತಿ, ಖಾಲಿಸ್ಥಾನ್‌ ಉಗ್ರ ದಿಲ್ಲಿಯಲ್ಲಿ ಅರೆಸ್ಟ್‌

10:31 AM Mar 13, 2019 | udayavani editorial |

ಹೊಸದಿಲ್ಲಿ : 1984ರಲ್ಲಿ ಭಾರತೀಯ ಸೇನೆ ಪಂಜಾಬ್‌ ನ ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆಸಿದ್ದ ಆಪರೇಶನ್‌ ಬ್ಲೂ ಸ್ಟಾರ್‌ ನಲ್ಲಿ ಹತನಾಗಿದ್ದ ಉಗ್ರ ಜರ್ನೇಲ್‌ ಸಿಂಗ್‌ ಭಿಂದ್ರನ್‌ವಾಲೆಯ ಸಹವರ್ತಿ ಮತ್ತು ನಿಷೇಧಿತ ಖಾಲಿಸ್ಥಾನ್‌ ಉಗ್ರ ಸಂಘಟನೆಯ ಓರ್ವ ಸದಸ್ಯ, ಗುರುಸೇವಕ್‌ ಸಿಂಗ್‌ (53) ಎಂಬಾತನನ್ನು ದಿಲ್ಲಿ ಪೊಲೀಸರು ಇಂದು ಬುಧವಾರ ಬಂಧಿಸಿದರು. 

Advertisement

ಗುರುಸೇವಕ್‌ ಸಿಂಗ್‌ ನಿಷೇಧಿತ ಖಾಲಿಸ್ಥಾನ್‌ ಕಮಾಂಡೋ ಪಡೆ (ಕೆಸಿಎಫ್) ಓರ್ವ ಸದಸ್ಯ. ಈತನು ಪ್ರಕೃತ ಪಾಕಿಸ್ಥಾನದಲ್ಲಿರುವ ಕೆಸಿಎಫ್ ಮುಖ್ಯಸ್ಥ ಪರಮ್‌ ಜಿತ್‌ ಸಿಂಗ್‌ ಪಂಜವಾಡ್‌ ನ ನಿರ್ದೇಶನದ ಪ್ರಕಾರ ಭಾರತದಲ್ಲಿ  ತನ್ನ ಸಂಘಟನೆಯನ್ನು ಪುನಾರಚಿಸುವ ಯೋಜನೆ ಹೊಂದಿದ್ದ.

ಗುರುಸೇವಕ್‌ ಸಿಂಗ್‌ ತನ್ನ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಭೇಟಿಯಾಗಲು ಕಳೆದ ಮಾರ್ಚ್‌ 12ರಂದು ದಿಲ್ಲಿಗೆ ಬಂದಿದ್ದಾಗ ಆತನನ್ನು ಐಎಸ್‌ಬಿಟಿ ದಿಲ್ಲಿಯ ಕ್ರೈಮ್‌ ಬ್ರಾಂಚ್‌ ಅಧಿಕಾರಿಗಳು ಬಂಧಿಸಿದ್ದರು. ಈತನ  ತಿಹಾರ್‌ ಸೇರಿದಂತೆ ಭಾರತದ ವಿವಿಧ ಜೈಲುಗಳಲ್ಲಿರುವ ಖಾಲಿಸ್ಥಾನ ಉಗ್ರ ಸಂಘಟನೆಯ ಜಗತಾರ್‌ ಸಿಂಗ್‌ ಹವಾರಾ ಮತ್ತು ಇತರ ಉಗ್ರರೊಡನೆ ಸಂಪರ್ಕ ದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next