Advertisement

ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾಗೆ 5 ವರ್ಷ ಜೈಲು

08:15 AM Feb 09, 2018 | |

ಢಾಕಾ: ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯ ನಾಯಕಿ, ಮಾಜಿ ಪ್ರಧಾನಿ ಖಾಲಿದಾ ಜಿಯಾ (72)ಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆಯಾಗಿದೆ. ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ  ವಿಶೇಷ ನ್ಯಾಯಾಲಯ ಗುರುವಾರ ಈ ತೀರ್ಪು ನೀಡಿದೆ.

Advertisement

ಜಿಯಾರ ಪುತ್ರ ತಾರೀಖ್‌ ರೆಹಮಾನ್‌ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಈ ಪ್ರಕರಣದಲ್ಲಿ ಹತ್ತು ವರ್ಷಗಳ ಕಾಲ ಕಾರಾಗೃಹವಾಸ ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶಿಸಿದೆ. ಈ ಬೆಳವಣಿಗೆಯಿಂದಾಗಿ ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದಕ್ಕೆ ನಿಷೇಧ ಹೇರುವ ಸಾಧ್ಯತೆಗಳು ಅಧಿಕವಾಗಿವೆ.   ತೀರ್ಪು ಪ್ರಕಟವಾದ ಬಳಿಕ ಬಾಂಗ್ಲಾದೇಶದಾದ್ಯಂತ ಗಲಭೆಗಳು ಆರಂಭವಾಗಿವೆ. 

 ತೀರ್ಪು ಪ್ರಕಟವಾಗುವ ವೇಳೆ ಖಾಲಿದಾ ಜಿಯಾ ಕೋರ್ಟಲ್ಲಿ ಹಾಜರಿದ್ದರು. ಈ ನಡುವೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಪುತ್ರ ಯು.ಕೆ.ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿದೆ. ಜಿಯಾರ ಪತಿ ದಿ. ಜಿಯಾವುರ್‌ ರೆಹಮಾನ್‌ ಹೆಸರಲ್ಲಿರುವ ಝಿಯಾ ಅನಾಥಶ್ರಮ ಟ್ರಸ್ಟ್‌ಗೆ 2,50,000 ಅಮೆರಿಕನ್‌ ಡಾಲರ್‌ ವಿದೇಶಿ ದೇಣಿಗೆ ಸ್ವೀಕರಿಸಿದ್ದರಲ್ಲಿ ಅವ್ಯವಹಾರವಾಗಿದೆ  ಎಂದು ಆರೋಪಿಸಲಾಗಿತ್ತು. ಜಿಯಾ ಮತ್ತು  ಮೂವರು ಆಪ್ತರು 4 ಲಕ್ಷ ಅಮೆರಿಕನ್‌ ಡಾಲರ್‌ ಮೊತ್ತವನ್ನು ನಿಯಮಕ್ಕೆ ವಿರುದ್ಧವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಲ್ಲದೆ ಮತ್ತೂಂದು ಪ್ರಕರಣದಲ್ಲಿ ಬಾಂಗ್ಲಾದ ಪ್ರತಿಪಕ್ಷ ನಾಯಕಿಯ ಪುತ್ರ ಸೇರಿದಂತೆ ಐವರ ವಿರುದ್ಧ 2.77 ಲಕ್ಷ ಅಮೆರಿಕ ಡಾಲರ್‌ ಮೊತ್ತ ದುರುಪಯೋಗ ಮಾಡಿದ ಆರೋಪದಲ್ಲಿಯೂ ಕೇಸು ದಾಖಲಾಗಿತ್ತು. ಹೈಕೋರ್ಟ್‌  ಮತ್ತು ಸುಪ್ರೀಂಕೋರ್ಟ್‌ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next