Advertisement

ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಖಾಕಿ!

12:43 PM Nov 17, 2018 | |

ಬೆಂಗಳೂರು: ಶಿಸ್ತಿನ ಇಲಾಖೆ ಎಂದು ಹೆಸರು ಪಡೆದಿರುವ ಪೊಲೀಸ್‌ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಗಳು ಸೇರಿ 92 ಮಂದಿ ಪೊಲೀಸರು ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಶಿಸ್ತುಕ್ರಮಕ್ಕೆ ಗುರಿಯಾಗಿದ್ದಾರೆ.

Advertisement

ಬೆಂಗಳೂರಿನ ಕಾನೂನು ಸುವ್ಯವಸ್ಥೆ, ಸಂಚಾರ, ಸಿಎಆರ್‌ ಕೇಂದ್ರ, ವಿಧಾನಸೌಧ ಭದ್ರತೆ ಸೇರಿ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  92 ಮಂದಿ ಪೊಲೀಸರು, ತಮಗೆ ನೀಡಿದ್ದ ಸರ್ಕಾರಿ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ನೀಡಿದ್ದ ” ಪೆಟ್ರೋಕಾರ್ಡ್‌’ ಸೂಕ್ತ ರೀತಿಯಲ್ಲಿ ಬಳಸದೆ, ಸರ್ಕಾರಿ ವಾಹನ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ  ಶಿಸ್ತು ಪ್ರಾಧಿಕಾರದಿಂದ “ವಾಗªದಂಡನೆ’ಗೆ ಗುರಿಯಾಗಿದ್ದಾರೆ.

ಕರ್ತವ್ಯ ನಿರ್ವಹಣೆಗಾಗಿ ನೀಡಿದ್ದ ಸರ್ಕಾರಿ ವಾಹನಗಳಾದ ಬೊಲೆರೋ, ಜಿಪ್ಸಿ, ಹೊಯ್ಸಳ, ಚೀತಾ ಇನ್ನಿತರೆ ವಾಹನಗಳನ್ನು ಆರೋಪಿತ 92 ಮಂದಿ ಬಳಸಿದ್ದಾರೆ. ಅಲ್ಲದೆ, ಅವರಿಗೆ ಇಂಧನ ತುಂಬಿಸಲು ಇಲಾಖಾ ವತಿಯಿಂದ “ಪೆಟ್ರೋ ಕಾರ್ಡ್‌’ ನೀಡಲಾಗಿತ್ತು. ಆದರೆ, ತಾವು ಪಡೆದಿದ್ದ ಪೆಟ್ರೋಕಾರ್ಡ್‌ ಬಳಸಿ ನಿಯಮಗಳನ್ನು ಉಲ್ಲಂ ಸಿ ಪೆಟ್ರೋಲ್‌ ಬದಲಿಗೆ ಡಿಸೇಲ್‌, ಡಿಸೇಲ್‌ ಬದಲಿದೆ ಪೆಟ್ರೋಲ್‌ ತುಂಬಿಸಿಕೊಂಡು ಬೇಜವಾಬ್ದಾರಿ ಮೆರೆದಿದ್ದರು.

ಈ ಕುರಿತ ದೂರು ದಾಖಲಿಸಿಕೊಂಡಿದ್ದ ಶಿಸ್ತುಪ್ರಾಧಿಕಾರ, ಕರ್ತವ್ಯಲೋಪ, ಬೇಜವಾಬ್ದಾರಿ ತೋರಿದ್ದ 92 ಮಂದಿ ಪೊಲೀಸ್‌ ಸಿಬ್ಬಂದಿಯ ಸಮಜಾಯಿಷಿ ಕೇಳಿ ವಿಚಾರಣೆ ನಡೆಸಿದೆ. ಬಳಿಕ ಪೊಲೀಸರಿಗೆ ತೀವ್ರ ತರಾಟೆ ತೆಗೆದುಕೊಂಡು ” ವಾಗ್ಧದಂಡನೆ’  ವಿಧಿಸಿ ಮತ್ತೂಮ್ಮೆ ಕರ್ತವ್ಯಲೋಪ ಎಸಗದಂತೆ ಎಚ್ಚರಿಕೆ ನೀಡಿದೆ.ಆರೋಪಿತ ಪೊಲೀಸರ ವಿರುದ್ಧ “ವಾಗ್ಧಂಡನೆ’ ವಿಧಿಸಲಾಗಿದೆ ಎಂದು ಶಿಸ್ತುಪ್ರಾಧಿಕಾರಿ ಹಾಗೂ ಆಡಳಿತ ವಿಭಾಗದ ಅಪರ ಪೊಲೀಸ್‌ ಆಯುಕ್ತರಾದ ಎಂ. ನಂಜುಂಡಸ್ವಾಮಿ ಅವರು  ನ.15ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಪ್ರತಿ ” ಉದಯವಾಣಿ’ಗೆ ಲಭ್ಯವಾಗಿದೆ.

ರಸೀದಿ ಲೋಪ!: ಪೆಟ್ರೋ ಕಾರ್ಡ್‌ನ್ನು ಸೂಕ್ತ ರೀತಿಯಲ್ಲಿ ಬಳಸದೆ ಕರ್ತವ್ಯ ಲೋಪ ಎಸಗಿದ ಆರೋಪ ಕುರಿತ ವಿಚಾರಣೆ ವೇಳೆ, ಆರೋಪಿತರು ಸಿಬ್ಬಂದಿ ಪೆಟ್ರೋಲ್‌ ಹಾಕಿಸಿಕೊಂಡಿದ್ದಾರೆ. ಡಿಸೇಲ್‌ ಹಾಕಿಸಿಕೊಂಡ ಬಗ್ಗೆ ಎಂಟ್ರಿಯಾಗಿದೆ. ಡಿಸೇಲ್‌ ಹಾಕಿಸಿಕೊಂಡಿದ್ದರೆ ಪೆಟ್ರೋಲ್‌ ಹಾಕಿಸಿಕೊಂಡ ಬಗ್ಗೆ ನಮೂದಾಗಿದೆ. ಹೀಗಾಗಿ, ಈ ಲೋಪವನ್ನು ಸರಿಪಡಿಸುವ ಸಲುವಾಗಿ ಪೆಟ್ರೋ ಹಾಗೂ ಡಿಸೇಲ್‌ ಕಾರ್ಡ್‌ಗಳನ್ನು ಪ್ರತ್ಯೇಕವಾಗಿಯೇ ವಿತರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಪೆಟ್ರೋ ಕಾರ್ಡ್‌ ಸರಿಯಾಗಿ ಬಳಸದೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧದ ಎಲ್ಲ ದೂರುಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗಿದೆ. ವಿಚಾರಣೆ ವೇಳೆ ಅಧಿಕಾರಿಗಳು ಎಸಗಿದ ಲೋಪದ ಗಂಭೀರತೆಗೆ ಅನುಗುಣವಾಗಿ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಲಾಗಿದೆ
-ಎಂ. ನಂಜುಂಡಸ್ವಾಮಿ, ಶಿಸ್ತು ಪ್ರಾಧಿಕಾರಿ, ಅಪರ ಪೊಲೀಸ್‌ ಆಯುಕ್ತರು ಬೆಂಗಳೂರು

ಅಶಿಸ್ತು ತೋರಿ ಅಧಿಕಾರಿಗಳು ಯಾರ್ಯಾರು?: ಇನ್ಸ್‌ಪೆಕ್ಟರ್‌ಗಳಾದ ಮುತ್ತುರಾಜ್‌ (ಟಿಟಿಐ), ಜಗದೀಶ್‌ (ಸಿಟಿಎಸ್‌ಬಿ), ಪಿಎಸ್‌ಐಗಳಾದ ನೀಲಕಂಠನ್‌ ( ಮಡಿವಾಳ)  ರಾಮಕೃಷ್ಣಯ್ಯ (ವಿ.ವಿ  ಪುರಂ ಸಂಚಾರ) ಮಾಳಪ್ಪ ಮಳಕಪ್ಪ ಪೂಜಾರ್‌ ( ಪ್ರೊಬೆಷನರಿ ಪಿಎಸ್‌ಐ ಯಲಹಂಕ ) ಮುರುಳಿಧರ್‌ (ಯಲಹಂಕ) ಮಾಲ್ವಿನ್‌ ಫಾನ್ಸಿಸ್‌ (ಕೆ.ಆರ್‌ ಪುರಂ) ಅಮರೇಶ್‌ ( ಆರ್‌.ಆರ್‌ ನಗರ)  ರವಿಕುಮಾರ್‌ ( ಮೈಕೋಲೇಔಟ್‌)   ಲಕ್ಷ್ಮಣ (ಆರ್‌.ಆರ್‌ ನಗರ)  ಜಯರಾಮ್‌ (ಹೈಗ್ರೌಂಡ್ಸ್‌ ಸಂಚಾರ)  ಪರಮಶಿವಯ್ಯ ( ಯಲಹಂಕ ಸಂಚಾರ)

ಧರ್ಮರಾಜು ( ಕೆ.ಆರ್‌ ಪುರಂ ಸಂಚಾರ)  ಜ್ಞಾನಮೂರ್ತಿ (ರಾಜಗೋಪಾಲನಗರ ) ಅಂಜನಪ್ಪ  ( ವೈಟ್‌ಫೀಲ್ಡ್‌) ಮಂಜು ಕುಪ್ಪಳೂರು ( ಏರ್‌ ಪೋರ್ಟ್‌) ರಾಮಕೃಷ್ಣ ( ನಂದಿನಿ ಲೇಔಟ್‌ )  ಸುರೇಶ್‌ ( ಎಎಸ್‌ಐ)  ರವೀಂದ್ರ (ಎಎಸ್‌ಐ)  ಸತ್ಯನಾರಾಯಣ ಜೆಟ್ಟಿ ಎ ಎಸ್‌ಐ ( ಹಲಸೂರು ಗೇಟ್‌ ಸಂಚಾರ) ಯಲ್ಲಪ್ಪ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ,  ವಿಜಯ್‌ ರಾಜ್‌  ವೈಟ್‌ಫೀಲ್ಡ್‌ ಸಂಚಾರ ಸೇರಿ ಇನ್ನಿತರೆ  7 ಎಎಸ್‌ಐಗಳು.31 ಹೆಡ್‌ ಕಾನ್ಸ್‌ಟೇಬಲ್‌ಗ‌ಳು, 38 ಮಂದಿ ಹೆಡ್‌ ಕಾನ್ಸ್‌ಟೇಬಲ್‌ಗ‌ಳು ಸೇರಿ ಒಟ್ಟು 92 ಮಂದಿ ” ವಾಗ್ಧದಂಡನೆ’ಗೆ ಗುರಿಯಾಗಿದ್ದಾರೆ.

ವಾಗ್ಧಂಡನೆಗೆ ಗುರಿಯಾದ ಪೊಲೀಸರು
ಹುದ್ದೆ    ಸಂಖ್ಯೆ

-ಇನ್ಸ್‌ಪೆಕ್ಟರ್‌ಗಳು    2
-ಪಿಎಸ್‌ಐಗಳು     19  
-ಎಎಸ್‌ಐ    7 
-ಹೆಡ್‌ಕಾನ್ಸ್‌ಟೇಬಲ್‌    31
-ಕಾನ್ಸ್‌ಟೇಬಲ್‌    38

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next