Advertisement

ಟೀಸರ್‌ನಲ್ಲಿ “ಖಾಕಿ’ಖದರ್‌

10:04 AM Nov 04, 2019 | Lakshmi GovindaRaju |

ಚಿರಂಜೀವಿ ಸರ್ಜಾ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಖಾಕಿ’. ಹೌದು, ಚಿರಂಜೀವಿ “ಖಾಕಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಒಳ್ಳೆಯ ಹಿಟ್ಸ್‌ ಕೂಡಾ ಸಿಕ್ಕಿದೆ.

Advertisement

ಪಕ್ಕಾ ಆ್ಯಕ್ಷನ್‌ ಅಂಶಗಳೊಂದಿಗೆ ಮೂಡಿಬಂದಿರುವ ಟೀಸರ್‌, ಇದೊಂದು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ ಎಂಬುದನ್ನು ಬಿಂಬಿಸುವಂತಿದೆ. ಚಿರು ಈಗಾಗಲೇ ಸಾಕಷ್ಟು ಆ್ಯಕ್ಷನ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಆ ಚಿತ್ರಗಳಿಗಿಂತ “ಖಾಕಿ’ ಭಿನ್ನವಾಗಿದೆ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ನಾಯಕನದು ಕೇಬಲ್‌ ಹುಡುಗ ಪಾತ್ರ. ಚಿತ್ರದಲ್ಲಿ ಮಾಸ್‌ ಅಂಶಗಳು ಹೈಲೈಟ್‌.

ಚಿತ್ರದ ಶೀರ್ಷಿಕೆಗೆ “ಪವರ್‌ ಆಫ್ ಕಾಮನ್‌ ಮ್ಯಾನ್‌’ ಎಂಬ ಅಡಿಬರಹವಿದೆ. “ಖಾಕಿ’ ಅಂದಾಕ್ಷಣ, ಎಲ್ಲರಿಗೂ ಪೊಲೀಸ್‌ ನೆನಪಾಗುತ್ತಾರೆ. ಅದು ನಿಜ. ಆದರೆ, “ಖಾಕಿ’ ಹಾಕಿದ ಪೊಲೀಸರಷ್ಟೇ, ಅಲ್ಲ, ಒಬ್ಬ ಕಾಮನ್‌ ಮ್ಯಾನ್‌ ಕೂಡ ಪೊಲೀಸ್‌ ಕೆಲಸಕ್ಕೆ ಸಾಥ್‌ ಕೊಡಬಹುದು. ಅವರೊಂದಿಗೆ ಸಮಾಜದ ಸುಧಾರಣೆಗೆ ಮುಂದಾಗಬಹುದು ಎಂಬ ಒನ್‌ಲೈನ್‌ ಚಿತ್ರಕ್ಕಿದೆ.

ಚಿರುಗೆ ಜೋಡಿಯಾಗಿ ತಾನ್ಯಾ ಹೋಪ್‌ ನಟಿಸಿದ್ದಾರೆ. “ಯಜಮಾನ’, “ಅಮರ್‌’ ಚಿತ್ರಗಳಲ್ಲಿ ನಾಯಕಿಯಾಗಿದ್ದ ತಾನ್ಯಾ ಈ ಚಿತ್ರದಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ನವೆಂಬರ್‌ನಲ್ಲೇ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಕೂಡಾ ಚಿತ್ರತಂಡಕ್ಕಿದೆ. ತರುಣ್‌ ಶಿವಪ್ಪ “ಖಾಕಿ’ ಚಿತ್ರವನ್ನು ನಿರ್ಮಿಸಿದ್ದು, ನವೀನ್‌ ರೆಡ್ಡಿ ಈ ಚಿತ್ರದ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next