Advertisement
ಅಜ್ಮೀರ್ನ ಸ್ಥಳೀಯ ನ್ಯಾಯಾಲಯವು ಬುಧವಾರ ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಪ್ರತಿಕ್ರಿಯೆಯನ್ನು ಕೋರಿ ನೋಟಿಸ್ ಜಾರಿ ಮಾಡಿದೆ.
Related Articles
ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಅರ್ಜಿ ಸಲ್ಲಿಸಿ, ಹರ್ ಬಿಲಾಸ್ ಸರ್ದಾ ಅವರ ಪುಸ್ತಕವನ್ನು ಉಲ್ಲೇಖಿಸಿರುವ ‘ದರ್ಗಾ ಇರುವಲ್ಲಿ ಶಿವ ದೇವಾಲಯವಿದೆ’ ಎಂಬ ಹೇಳಿಕೆಯನ್ನು ಬೆಂಬಲಿಸಿದ್ದಾರೆ.ದರ್ಗಾಕ್ಕಿಂತ ಮೊದಲು ಇಲ್ಲಿ ಶಿವ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸುವ ಹಲವಾರು ಸಂಗತಿಗಳಿವೆ” ಎಂದು ಪ್ರತಿಪಾದಿಸಿದ್ದಾರೆ.
Advertisement
ದರ್ಗಾವನ್ನು ಶಿವಮಂದಿರ ಎಂದು ಘೋಷಿಸಿ, ದರ್ಗಾದ ಕಾರ್ಯಗಳನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸುವ ಕಾಯಿದೆ, ಪೂಜಾ ಹಕ್ಕುಗಳನ್ನು ನೀಡಬೇಕು ಮತ್ತು ಸ್ಥಳದ ವೈಜ್ಞಾನಿಕ ಸಮೀಕ್ಷೆ ನಡೆಸಲು ಎಎಸ್ಐಗೆ ನಿರ್ದೇಶನ ನೀಡಬೇಕು ಎಂದು ಗುಪ್ತಾ ಮನವಿ ಮಾಡಿದ್ದಾರೆ.
ತಾನು ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದೇನೆ ಮತ್ತು ಮುಸ್ಲಿಂ ದಾಳಿಕೋರರು ಶಿವ ದೇವಾಲಯವನ್ನು ನಾಶಪಡಿಸಿನಂತರ ದರ್ಗಾವನ್ನು ನಿರ್ಮಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪರ್ಷಿಯಾದ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅಜ್ಮೀರ್ ಅನ್ನು ತನ್ನ ಮನೆಯಾಗಿ ಮಾಡಿಕೊಂಡಿದ್ದರು.ಈ ದರ್ಗಾ ವನ್ನು ಮೊಘಲ್ ಚಕ್ರವರ್ತಿ ಹುಮಾಯೂನ್, ಸಂತನ ಗೌರವಾರ್ಥವಾಗಿ ನಿರ್ಮಿಸಿದ್ದ. ಮೊಘಲ್ ದೊರೆ ಅಕ್ಬರ್ ಪ್ರತಿ ವರ್ಷ ಅಜ್ಮೀರ್ಗೆ ಧಾರ್ಮಿಕ ಯಾತ್ರೆ ಮಾಡಿದ ಬಗ್ಗೆ ಉಲ್ಲೇಖವಿದೆ. ಷಹಜಹಾನ್ ಸಂಕೀರ್ಣದೊಳಗೆ ಮಸೀದಿಗಳನ್ನು ನಿರ್ಮಿಸಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ.