ನವದೆಹಲಿ: ಇದೇ ಫೆಬ್ರವರಿಯಿಂದ ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆಯಣ್ಣ ಖಾದಿ ದಿರಿಸಿನಲ್ಲಿ ಮಿಂಚಲಿದ್ದಾನೆ. ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 74,000 ಪೋಸ್ಟ್ ಮ್ಯಾನ್ ಹಾಗೂ 9,000 ಪೋಸ್ಟ್ ವುಮನ್‌ಗಳಿಗೆ ಖಾದಿ ಸಮವಸ್ತ್ರ ನೀಡಲು ಅಂಚೆ ಇಲಾಖೆ ಮುಂದಾಗಿದೆ.
ಖಾದಿ ಮತ್ತು ಗ್ರಾಮೀಣ ಉದ್ಯೋಗ ಆಯೋಗದ (ಕೆವಿಐಸಿ) ವತಿಯಿಂದ ಈ ಸಮವಸ್ತ್ರ ಖರೀದಿಸಲು ಅಂಚೆ ಇಲಾಖೆ ನಿರ್ಧರಿಸಿದೆ ಎಂದು ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ತಿಳಿಸಿದ್ದು, ಕೆವಿಐಸಿ, ವಿಶೇಷ ಸಮವಸ್ತ್ರಗಳನ್ನು ವಿನ್ಯಾಸಗೊಳಿಸಲು, ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ನಿಫ್ಟಿ) ಸಹಾಯ ಪಡೆದಿದೆ. ಮಹಿಳೆಯರಿಗೆ ಖಾಕಿ ಬಣ್ಣದ ಸಲ್ವಾರ್ ಕಮೀಜ್, ಪುರುಷರಿಗೆ ಖಾಕಿ ಶರ್ಟ್, ಪ್ಯಾಂಟ್ ವಿನ್ಯಾಸಗೊಳಿಸಲಾಗಿದೆ.
ಮೋದಿ ಸರ್ಕಾರ ಕೊಟ್ಟ ಪುನಶ್ಚೇತನ: ಖಾದಿ ಗ್ರಾಮೋದ್ಯೋಗಕ್ಕೆ ಪುಷ್ಟಿ ನೀಡಿದ ಹಿರಿಮೆ ಪ್ರಧಾನಿ ಮೋದಿ ಅವರಿಗೇ ಸಲ್ಲಬೇಕೆಂದು ಕೆವಿಐಸಿ ಅಧ್ಯಕ್ಷ ಸಕ್ಸೇನಾ ಹೇಳಿದ್ದಾರೆ. “2004-2014ರ ಅವಧಿಯಲ್ಲಿ ಖಾದಿ ಬೇಡಿಕೆ ಕುಸಿತ ಕಂಡು 400 ಖಾದಿ ಮಗ್ಗಗಳು ಮುಚ್ಚಲ್ಪಟ್ಟಿದ್ದವು. ಮೋದಿ ಸರ್ಕಾರದ ಖಾದಿ ಪರ ಧೋರಣೆಯಿಂದಾಗಿ 2015-16ರಲ್ಲಿ 37,000 ಕೋಟಿ ರೂ. ವಾರ್ಷಿಕ ವಹಿವಾಟು ಮಾಡಿದ್ದ ಕೆವಿಐಸಿ, 2016-17ರಲ್ಲಿ 4.69 ಕೋಟಿ ರೂ. ನಡೆಸಿತ್ತು ಎಂದಿದ್ದಾರೆ.
42 ಕೋಟಿ ರೂ.
ಸಮವಸ್ತ್ರ ಪೂರೈಕೆಯಿಂದ ಕೆವಿಐಸಿ ಗಳಿಸಲಿರುವ ಆದಾಯ
79,000
ದೇಶದಲ್ಲಿರುವ ಪೋಸ್ಟ್ ಮ್ಯಾನ್‌ಗಳ ಸಂಖ್ಯೆ
9,000
ದೇಶದ ಮಹಿಳಾ ಪೋಸ್ಟ್ ವುಮನ್‌ಗಳ ಸಂಖ್ಯೆ