ಹೊಸದಿಲ್ಲಿ: ದೇಸಿ ಖಾದಿ ವಸ್ತ್ರಗಳ ಶ್ರೀಮಂತ ಪರಂಪರೆಯನ್ನು ಮತ್ತೆ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಮಾ. 9ರಂದು “ಖಾದಿ ಇಂಡಿಯಾ ಶೋಕೇಸ್’ ಕಾರ್ಯಕ್ರಮ ನಡೆಯಲಿದೆ.
ದೇಶದ ಪ್ರಖ್ಯಾತ ವಸ್ತ್ರವಿನ್ಯಾಸಕರ ತಂಡವು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ತರ ಪಾತ್ರವಹಿಸಿದ ಖಾದಿ ಸೇರಿದಂತೆ ವಿವಿಧ ರೀತಿಯ ಖಾದಿ ವಸ್ತ್ರಗಳನ್ನು ತೊಟ್ಟು ಪ್ರದರ್ಶಕರು ಹೆಜ್ಜೆಹಾಕುವ ಮೂಲಕ ಖಾದಿ ಫ್ಯಾಶನ್ ಕಳೆಗಟ್ಟಲಿದೆ.
ಫ್ಯಾಶನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಫ್ಯಾಶನ್ ಗಾಲಾ ಸಂಸ್ಥೆ ಸಹಯೋಗದಲ್ಲಿ ಲ್ಯಾಕೆ¾ ಫ್ಯಾಶನ್ ವೀಕ್‌ನ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ದಿವ್ಯಂ ಮೆಹ್ತಾ, ಸುಕೇತ್ ಧಿರ್, ಶ್ರುತಿ ಸಂಚೇತಿ ಅವರ ಖಾದಿ ಕಲೆಕ್ಷನ್‌ಗಳನ್ನು ಪ್ರದರ್ಶಿಸಲಾಗುತ್ತದೆ.
ಈ ಪೈಕಿ ಗೋಂಡ್ ಜಾನಪದ ಕಲೆ, ಮಧುಬನಿ, ಪಿಚ್ಚಾವಿ ವಿನ್ಯಾಸಗಳನ್ನು ಹೊಂದಿರುವ ಖಾದಿ ಸೀರೆಗಳು, ಜುಬ್ಟಾ ಕೈ ಕುಸುರಿಯ ಪೈಜಾಮ ಸೇರಿದಂತೆ ವಿವಿಧ ಬಗೆಯ ಖಾದಿ ವಸ್ತ್ರಗಳು ಸೇರಿರಲಿವೆ.