ಹುಣಸಗಿ: ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಿಂದ ಯಾರಿಗೂ ಕೂಡ ಬಹಿಷ್ಕಾರ ಹಾಕಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ಕರ್ನಾಟಕ
ಮಜ್ದೂರ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಮಹ್ಮದ್ ಇಲಿಯಾಸ್ ಡೆಕ್ಕನ್ ಹೇಳಿದರು.
ಪಟ್ಟಣದ ಶಾದಿಮಹಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಖಬರಸ್ಥಾನ ಆಸ್ತಿಗೆ ಸಂಬಂಧಿಸಿದಂತೆ 4 ಜನರು ಸೇರಿಕೊಂಡು ಸಮಾಜದ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದರು. ಆಸ್ತಿಯನ್ನು ಯಾರು ಒತ್ತುವರಿ ಮಾಡಿಲ್ಲ ಎಲ್ಲಾ ದಾಖಲೆಗಳು ಜಿಲ್ಲಾ ವಕ್ ಮಂಡಳಿಯ ಕಛೇರಿಯಲ್ಲಿಯೂ ಕೂಡಾ ದಾಖಲಾಗಿದೆ.
ಆಸ್ತಿಯನ್ನು ಯಾರು ತಮ್ಮ ಸ್ವಂತಕ್ಕೆ ಒತ್ತುವರಿ ಮಾಡಿಕೊಂಡಿಲ್ಲ ಎಂದು ಹೇಳಿದರು. ಹಿರಿಯ ಮುಖಂಡ ಮಹ್ಮದ ಹನೀಫ್‌ಸಾಬ ಬೆಣ್ಣೂರು ಮಾತನಾಡಿ, ಪಟ್ಟಣದ ವಕ್ಫ್ ಬೋರ್ಡ್ ಗೆ ಸೇರಿದ ಆಸ್ತಿಯಲ್ಲಿ ಯಾವುದೇ ಕಬಳಿಕೆಯಾಗಲಿ ಆಗಿಲ್ಲ. ಸಂಶಯ ಇದ್ದರೆ ಪರಿಶೀಲಿಸಬಹುದು ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ರಸೂಲ್‌ಸಾಬ, ಸಮಾಜದ ಅಬ್ದುಲ್ ಹಮೀದಸಾಬ ಡೆಕ್ಕನ್, ಮಹ್ಮದ ಹಲಿ ಬಾಬು ಹವಾಲ್ದಾರ, ಬಾಬು ಚೌದ್ರಿ, ಮಿರ್ಜಾ ನಾದೀರ್ ಬೇಗ್, ಬುಡಾನ್ ಮೇಸ್ತ್ರಿ, ಲಿಯಾಖತ ಅಲಿ ಮೇಸ್ತ್ರಿ, ರಮಜಾನ್ ಖುರೇಶಿ, ಕಾಸೀಮ್ ಖುರೇಶಿ, ಶಾಲು ಮಕಾನದಾರ, ಹುಸೇನಸಾಬ ಟೊಣ್ಣೂರು ಸೇರಿದಂತೆ ಸಮಾಜದ ಮುಖಂಡರು ಇದ್ದರು.