ದೇವನಹಳ್ಳಿ: ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದ್ದು, ಫಲಿ ತಾಂಶದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಶಾಸಕರಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಗೆದ್ದಿರುವು ದರಿಂದ ಸಚಿವರಾಗುವುದು ಖಾತ್ರಿಯಾಗಿದೆ.
ಸ್ವತಂತ್ರ ಬಂದಾಗಿನಿಂದಲೂ ಇದುವರೆವಿಗೂ ಯಾವ ಶಾಸಕರೂ ಸಹ ಸಚಿವರಾಗಿಲ್ಲ. ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ನೂತನ ಶಾಸಕ ಹಾಗೂ ಕಾಂಗ್ರೆಸ್ ನ ಹಿರಿಯ ರಾಜಕಾರಣಿಯಾಗಿರುವ ಕೆ.ಎಚ್.ಮುನಿಯಪ್ಪ ಗೆದ್ದಿರುವುದರಿಂದ ಕ್ಯಾಬಿ ನೆಟ್‌ನಲ್ಲಿ ಸಚಿವರಾಗುವುದರ ಮೂಲಕ ವಿಧಾನಸಭಾ ಕ್ಷೇತ್ರಕ್ಕೆ ಇದ್ದ ಶಾಪ ವಿಮೋಚನೆಯಾಗುತ್ತಿದೆ. ಈ ಹಿಂದೆ ವಿಧಾನಸಭ ಕ್ಷೇತ್ರಕ್ಕೆ ಚಿಕ್ಕ ಜಾಲ ಮತ್ತು ಸೂಲಿಬೆಲೆಗಳು ಸೇರುತ್ತಿದ್ದವು. ಇದೀಗ ತೂಬಗೆರೆ ಹೋಬಳಿಯನ್ನು ದೇವನ ಹಳ್ಳಿ ಕ್ಷೇತ್ರಕ್ಕೆ ಸೇರಿಸಿದ್ದರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಹೊಸಮುಖ ಗಳಿವೆ. ಅವಕಾಶ ನೀಡುತ್ತಿರುವುದರಿಂದ ಸಚಿವ ಸ್ಥಾನದಿಂದ ವಂಚಿತರಾಗುತ್ತಿದ್ದರು. ಒಂದು ಬಾರಿ ಗೆದ್ದ ಶಾಸಕರು ಮತ್ತೂಂದು ಬಾರಿ ಗೆದ್ದಿರುವ ಉದಾ ಹರಣೆಗಳಿಲ್ಲ. ಅಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೆ ಇಲ್ಲಿ ಜೆಡಿಎಸ್ ಶಾಸಕರು ಗೆದ್ದಿರುತ್ತಾರೆ. ಜೆಡಿಎಸ್ ಅಥವಾ ಬಿಜೆಪಿ ಅಧಿಕಾರದಲ್ಲಿದ್ದರೆ ಇಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರು ಇರುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ತಾಲೂಕಿಗೆ ಆಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಹೊಸಕೋಟೆ ಮತ್ತು ನೆಲಮಂಗಲ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಅದರಲ್ಲಿ ಶಾಸಕರಲ್ಲಿ ಹಿರಿಯರು ಆಗಿರುವ ಕೆ.ಎಚ್. ಮುನಿಯಪ್ಪ ಆಗಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ 2ನೇ ಬಾರಿ ಆಯ್ಕೆಯಾಗಿದ್ದಾರೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶ್ರೀನಿವಾಸ್ ಶಾಸಕರಾಗಿದ್ದಾರೆ. ಅದರಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಸಚಿವರಾಗುವ ಯೋಗ ಹೆಚ್ಚು ಇದೆ.
ರಾಜಕಾರಣದಲ್ಲಿ ಗಮನ ಸೆಳೆದ ಕೆಎಚ್‌ಎಂ: ಕೆ.ಎಚ್. ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದಿಂದ 7 ಬಾರಿ ಸಂಸದರಾಗಿ 2 ಬಾರಿ ಸಚಿವರಾಗಿ ಹಾಗೂ ಕೇಂದ್ರ ರೈಲ್ವೆ ಮತ್ತು ಸಣ್ಣ ಕೈಗಾರಿಕೆ ಮತ್ತು ಉದ್ಯಮ ಸಚಿವರಾಗಿ ಇದ್ದ ಅವರು ಇಲ್ಲಿ ಗೆದ್ದಿರುವುದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಎಂಬುವುದು ವಿಧಾನಸಭಾ ಕ್ಷೇತ್ರದ ಸಾರ್ವ ಜನಿಕರ ನಿರೀಕ್ಷೆಯಾಗಿದೆ. ಕ್ಯಾಬಿನೆಟ್‌ನಲ್ಲಿ ದೇವನಹಳ್ಳಿಗೆ ಉತ್ತಮ ಸಚಿವ ಸ್ಥಾನದ ಖಾತೆ ದೊರೆಯಲಿದೆ. ಉಪ ಮುಖ್ಯಮಂತ್ರಿಯಾಗುವ ಸಂಭವವಿದೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ ಪೈಕಿ ಈಗಾಗಲೇ ದೊಡ್ಡ ಬಳ್ಳಾಪುರ, ನೆಲಮಂಗಲ, ಹೊಸಕೋಟೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಚಿವರಾಗಿ ಇರುತ್ತಾರೆ. ಆದರೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಇದುವರೆವಿಗೂ ಸಚಿವ ಸ್ಥಾನ ದೊರೆತಿಲ್ಲ. ಈ ಬಾರಿ ಕೆ.ಎಚ್. ಮುನಿಯಪ್ಪ ಅವರ ಮೂಲಕ ಸಚಿವ ಸ್ಥಾನ ಲಭಿಸುವಂತೆ ಆಗುತ್ತಿದೆ. ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಶಾಸಕರು ಗೆದ್ದಿರ ಲಿಲ್ಲ. 14 ಜನ ಕಾಂಗ್ರೆಸ್ ಆಕಾಂಕ್ಷಿಗಳು ಇದ್ದರು. ಅದ ರಲ್ಲೂ ಕೆ.ಎಚ್. ಮುನಿಯಪ್ಪ ಅವರಿಗೆ ಹೈಕಮಾಂಡ್ ಅವಕಾಶ ಮಾಡಿ ಕೊಟ್ಟಿತ್ತು. ಈ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಸ್ಪರ್ಧಿಸಿದ್ದರಿಂದ ರಾಜ್ಯ ಮತ್ತು ರಾಷ್ಟ್ರ ರಾಜ ಕಾರಣ ಗಮನ ಸೆಳೆಯುವಂತೆ ಆಗಿದೆ.
-ಎಸ್. ಮಹೇಶ್