ಭಾರತೀಯ ಚಿತ್ರಂಗದಲ್ಲೇ ಬಹುನಿರೀಕ್ಷೆ ಹುಟ್ಟುಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಇಂದು ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವಿಶ್ವದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಕಂಡಿದೆ.
ಹೊಂಬಾಳೆ ಫಿಲಂ ಬ್ಯಾನರ್ ನಲ್ಲಿ ವಿಜಯ್ ಕಿರಗಮದೂರು ಚಿತ್ರ ನಿರ್ಮಾಣ ಮಾಡಿದ್ದಾರೆ. ಯಶ್ ಜೊತೆ, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ್ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.
ಹಲವೆಡೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗಿದೆ. ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಬೆಳಗ್ಗೆಯೇ ಚಿತ್ರ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಇಂದಿನಿಂದ ಕೆಜಿಎಫ್-2 ಹವಾ; ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ
Related Articles
ಬಾಲಿವುಡ್ ಅನಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಕೆಜಿಎಫ್ 2 ನಿರೀಕ್ಷೆ ಮೀರಿ ಬೆಳೆದಿದೆ. ಇದಂದು ಬ್ಲಾಕ್ ಬಸ್ಟರ್ ಎಂದಿದ್ದಾರೆ. ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಉತ್ಸಾಹದಿಂದ ಪಂಚ್‌ಗಳು ಮತ್ತು ಪಂಚ್ ಲೈನ್‌ಗಳನ್ನು ಎರಡನ್ನೂ ನೀಡುತ್ತಾರೆ. ಅವರ ಅಸಾಧಾರಣ ಕಾರ್ಯವು ಈ ಫ್ರಾಂಚೈಸ್‌ನ ಪ್ರೇರಕ ಶಕ್ತಿಯಾಗಿದೆ. ಸಂಜಯ್ ದತ್ ಮಿಂಚು ಹರಿಸಿದ್ದಾರೆ. ರವೀನಾ ಟಂಡನ್ ಅದ್ಭುತ. ಆಕೆಯ ಪ್ರತಿಭೆಯನ್ನು ಗೌರವಿಸುವುದನ್ನು ಮತ್ತು ಪಾತ್ರದಲ್ಲಿ ಬಳಸಿಕೊಳ್ಳುವುದನ್ನು ನೋಡಲು ಅದ್ಭುತವಾಗಿದೆ ಎಂದು ತರಣ್ ಆದರ್ಶ್ ಬರೆದಿದ್ದಾರೆ.
ಇತರ ಟ್ವೀಟ್ ಗಳು