Advertisement

ಸ್ಥಳೀಯ ಚಾನೆಲ್‌ ವಿರುದ್ಧ ಕೆಜಿಎಫ್ ತಂಡ ಗರಂ

12:09 PM May 11, 2020 | Suhan S |

ಕೆಜಿಎಫ್ ಕನ್ನಡ ಸಿನಿಮಾರಂಗ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವನ್ನೇ ಹಾಗೊಮ್ಮೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಈಗ ಈ ಚಿತ್ರದ ಬಗ್ಗೆ ಯಾಕೆ ಪೀಠಿಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ತೆಲುಗಿನ ಸ್ಥಳೀಯ ವಾಹಿನಿಯೊಂದು ತೆಲುಗು ಭಾಷೆಯ ಕೆಜಿಎಫ್ ಚಿತ್ರವನ್ನು ಪ್ರಸಾರ ಮಾಡಿದೆ. ಅದು ಅಕ್ರಮ ಎಂದು ಕೆಜಿಎಫ್ ತಂಡ ಆಕ್ರೋಶ ಹೊರಹಾಕಿದ್ದು, ಆ ಚಾನೆಲ್‌ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

Advertisement

ವಿಶೇಷವೆಂದರೆ, ಇನ್ನೂ, ತೆಲುಗು ಟಿವಿ ರೈಟ್ಸ್‌ ಸೇಲ್‌ ಆಗಿಲ್ಲ. ಅದಾಗಲೇ ಸ್ಥಳೀಯ ಚಾನೆಲ್‌ ಪ್ರಸಾರ ಮಾಡಿದೆ. ಹೀಗಾಗಿ ಹೊಂಬಾಳೆ ಬ್ಯಾನರ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಅವರು ಟ್ವೀಟ್‌ ಮೂಲಕ ಬೇಸರ ಹೊರಹಾಕಿದ್ದು, ಗರಂ ಆಗಿದ್ದಾರೆ. ಅಂದಹಾಗೆ, ತೆಲುಗಿನ ಎವೆರಿ ಎಂಬ ಸ್ಥಳೀಯ ವಾಹಿನಿಯಲ್ಲಿ ಕೆಜಿಎಫ್ ಚಿತ್ರದ ತೆಲುಗುಅವತರಣಿಕೆಯನ್ನು ಪ್ರಸಾರ ಮಾಡಿದ್ದು ವ್ಯಾಪಾರ ವಹಿವಾಟುಗೆ ಪೆಟ್ಟು ಬಿದ್ದಿದೆ.

ಹೀಗಾಗಿ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಬೇಸರ ಹೊರಹಾಕಿರುವ ಕಾರ್ತಿಕ್‌ ಗೌಡ, ತೆಲುಗು ಲೋಕಲ್‌ ಚಾನೆಲ್‌ ಅಕ್ರಮವಾಗಿ ಕೆಜಿಎಫ್ ಚಿತ್ರವನ್ನು ಪ್ರಸಾರ ಮಾಡಿದೆ. ನಾವು ಕಾನೂನಾತ್ಮಕವಾಗಿ ಆ ಚಾನೆಲ್‌ ವಿರುದ್ಧ ಹೋರಾಟ ಮಾಡುತ್ತೇವೆ. ಇನ್ನೂ ಟಿವಿ ರೈಟ್ಸ್‌ ಮಾರಾಟವಾಗಿಲ್ಲ. ಹೀಗಿರುವಾಗಲೇ ಕೇಬಲ್‌ ಚಾನೆಲ್‌ ಇಂತಹ ಕೆಲಸಮಾಡಿದೆ. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಕಾರ್ತಿಕ್‌ ಗೌಡ ಹೇಳಿದ್ದಾರೆ.

ಅಕ್ಟೋಬರ್‌ 23 ರಂದು ಕೆಜಿಎಫ್2 ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್‌ಡೌನ್‌ ಆಗಿರುವುದರಿಂದ ಆ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆಯಾದರೂ, ಚಿತ್ರತಂಡದಿಂದ ಇನ್ನೂ ಯಾವುದೇ ಸುದ್ದಿ ಬಹಿರಂಗವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next