ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್’ ಚಿತ್ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈಗಾಗಲೇ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದೆ. ಅಚ್ಚರಿ ಏನೆಂದರೆ ಟ್ರೈಲರ್ ಬರೋಬ್ಬರಿ 2 ಕೋಟಿ ಬಾರಿ ವೀಕ್ಷಣೆ ಕಂಡಿದೆ.! ಸದ್ಯ ಈ ಚಿತ್ರಕ್ಕೆ ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಹೌದು “ಕೆಜಿಎಫ್’ ಚಿತ್ರದ ಟ್ರೈಲರ್ ಎಲ್ಲ ಭಾಷೆಯಲ್ಲೂ 20 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದಕ್ಕೆ ಯಶ್, ವಿಜಯ್ ಸರ್, ಪ್ರಶಾಂತ್ ನೀಲ್ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು. “ಕೆಜಿಎಫ್’ ಚಿತ್ರದ ಬಿಡುಗಡೆಗೂ ನನ್ನ ಶುಭಾಶಯಗಳು’ ಎಂದು ಪುನೀತ್ ರಾಜ್‍ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ “ಕೆಜಿಎಫ್’ ಚಿತ್ರಕ್ಕೆ ಶುಭ ಕೋರಿದ ಜೊತೆಗೆ ಪುನೀತ್ “ನಟ ಸಾರ್ವಭೌಮ’ ಚಿತ್ರದ ಡಬ್ಬಿಂಗ್ ಮುಗಿಸಲಾಗಿದೆ ಎಂದು ಹೇಳಿ ಒಂದು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಪುನೀತ್ ಇದೂವರೆಗೆ ಒಟ್ಟು ನಾಲ್ಕು ಟ್ವೀಟ್ ಗಳನ್ನು ಮಾತ್ರ ಮಾಡಿದ್ದು, 20 ಸಾವಿರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಈಗ ಬಹುದಿನಗಳ ನಂತರ ಪುನೀತ್ ಟ್ವೀಟ್ ಮಾಡಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.
Related Articles
ಇನ್ನು ಭೂಗತ ಲೋಕದ ಕರಾಳ ಸತ್ಯವನ್ನು “ಕೆಜಿಎಫ್’ ಚಿತ್ರ ತೋರಿಸಲಿದೆ ಎಂಬುವುದನ್ನು ಟ್ರೈಲರ್ ನೋಡಿದಾಗ ತಿಳಿಯುತ್ತದೆ. ಟ್ರೈಲರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ನೋಡುಗರಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ. ಈಗಾಗಲೇ ಶಿವಣ್ಣ, ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ದೊಡ್ಡ ದೊಡ್ಡ ನಟರೆಲ್ಲರೂ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಯಶ್‌ಗೆ ಹಾಗೂ “ಕೆಜಿಎಫ್’ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.