ಬೆಂಗಳೂರು ನಗರ : ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ರಾಜ್ಯದಲ್ಲಿ ಭರದಿಂದ ಸಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳಿಗೆ ನಡೆದ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್ ನ ಕೆಜಿಎಫ್ ಬಾಬು ಅವರ ವಿರುದ್ಧ ಬಿಜೆಪಿಯ ಗೋಪೀನಾಥ ರೆಡ್ಡಿ ಜಯಭೇರಿ ಗಳಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಪರಿಷತ್ ಚುನಾವಣೆ ಪ್ರತಿಷ್ಠೆಯ ಕದನವಾಗಿ ಬದಲಾಗಿದೆ. ಅದರಂತೆ ಬೆಂಗಳೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಎಸ್. ಗೋಪಿನಾಥ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ, ಸಾವಿರಾರು ಕೋಟಿಯ ಒಡೆಯ ಯೂಸಫ್ ಷರೀಫ್ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಅವರು ಸೋಲು ಕಂಡುಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಎಚ್.ಎಸ್.ಗೋಪಿನಾಥ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಯೂಸಫ್ ಷರೀಫ್ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಕಣದಲ್ಲಿದ್ದರು.
ಅಂದಹಾಗೆ ಸಾವಿರಾರು ಕೋಟಿಯ ಒಡೆಯರಾಗಿರುವ ಯೂಸಫ್ ಷರೀಫ್ (ಕೆಜಿಎಫ್ ಬಾಬು) ಅವರು ನಾಮಿನೇಷನ್ ಸಲ್ಲಿಸಲು ಅದ್ದೂರಿಯಾಗಿ ಆಡಿ ಕಾರಿನಿಂದ ಇಳಿದಿದ್ದ ಅವರು ಇಂದು ಫಲಿತಾಂಶ ಪ್ರಕಗೊಳ್ಳುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ರಿಕ್ಷಾ ಹತ್ತಿ ತೆರಳಿದ್ದಾರೆ.
ಗೋಪಿನಾಥ್ ರೆಡ್ಡಿ ಅವರು 1,227 ಮತಗಳು ಗಳಿಸಿದರೆ. ಕೆಜಿಎಫ್ ಬಾಬು ಅವರಿಗೆ ಕೇವಲ 830 ಮತಗಳನ್ನು ಪಡೆದುಕೊಂಡಿದ್ದಾರೆ . 13 ಮತಗಳು ತಿರಸ್ಕತಗೊಂಡಿವೆ.
ಇದನ್ನೂ ಓದಿ : ಜೀವನ್ಮರಣ ಹೋರಾಟದಲ್ಲಿದ್ದ ಕೋತಿಗೆ ಉಸಿರು ನೀಡಿದ ವ್ಯಕ್ತಿ.