Advertisement

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

12:41 PM May 08, 2024 | Team Udayavani |

ಮಂಗಳೂರು: ಕರಾವಳಿ ಬೆಡಗಿ, ʼಕೆಜಿಎಫ್‌ʼ ನಟಿ ಶ್ರೀನಿಧಿ ಶೆಟ್ಟಿ ದೈವಕೋಲದಲ್ಲಿ ಭಾಗಿಯಾಗಿ ಹರಕೆಯ ನೇಮೋತ್ಸವವನ್ನು ನೆರವೇರಿಸಿದ್ದಾರೆ.

Advertisement

ದಕ್ಷಿಣ ಕನ್ನಡದ ಹೊರವಲಯದ ಕಿನ್ನಿಗೋಳಿಯಲ್ಲಿ ತಮ್ಮ ಕುಟುಂಬದ ಮನೆ ತಾಳಿಪಾಡಿ ಗುತ್ತುವಿನಲ್ಲಿ ನಡೆದ ಹರಕೆಯ ನೇಮೋತ್ಸವದಲ್ಲಿ ಅವರು ಭಾಗಿಯಾಗಿದ್ದಾರೆ.

ಈ ಹಿಂದೆ ಶ್ರೀನಿಧಿ ಶೆಟ್ಟಿ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿಕೊಂಡಿದ್ದರು. ಅದರಂತೆ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತುವಿನಲ್ಲಿ ಜಾರಂದಾಯ ಮತ್ತು ಪರಿಹಾರ ದೈವಗಳ ನೇಮೋತ್ಸವ ನಡೆಯಿತು.

ಈ ನೇಮೋತ್ಸವದಲ್ಲಿ ನಟಿಯ ಕುಟುಂಬಸ್ಥರು ಸೇರಿದಂತೆ, ಸಂಬಂಧಿಕರು ಪಾಲ್ಗೊಂಡಿದ್ದಾರೆ. ಹೊತ್ತುಕೊಂಡ ಹರಕೆಯನ್ನು ಶ್ರೀನಿಧಿ ಶೆಟ್ಟಿ ಸಲ್ಲಿಸಿದ್ದಾರೆ.

ಈ ವೇಳೆ ದೈವ ಶ್ರೀನಿಧಿ ಶೆಟ್ಟಿಗೆ ʼನೀನು ಇನ್ನಷ್ಟು ಎತ್ತರಕ್ಕೆ ಏರುತ್ತೀಯʼ ಎಂದು ಅಭಯ ನೀಡಿದೆ.

Advertisement

ರಾಕಿಂಗ್‌ ಸ್ಟಾರ್‌ ಯಶ್‌ ಅವರ ʼಕೆಜಿಎಫ್ 1,2ʼ ನಲ್ಲಿ ಮಿಂಚಿರುವ ಶ್ರೀನಿಧಿಗೆ ಆ ಬಳಿಕ ಹತ್ತಾರು ಆಫರ್‌ ಗಳು ಬಂದಿವೆ. ಸದ್ಯ ಅವರು ಕಿಚ್ಚ ಸುದೀಪ್‌ ಅವರ 47ನೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next