Advertisement

ಕೆಜಿಎಫ್ 2 ಗೆ ಮುಹೂರ್ತ

12:02 PM Mar 14, 2019 | Sharanya Alva |

“ಕೆಜಿಎಫ್ ಚಾಪ್ಟರ್‌-1′ ಚಿತ್ರದ ಗೆಲುವಿನ ಬಳಿಕ “ಕೆಜಿಎಫ್ ಚಾಪ್ಟರ್‌-2′ ಚಿತ್ರಕ್ಕೂ ಚಾಲನೆ ದೊರೆತಿದೆ. ಬುಧವಾರ ಬೆಂಗಳೂರಿನ ವಿಜಯನಗರದ ಕೋದಂಡರಾಮ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತವನ್ನು ಆಚರಿಸಿ ಚಿತ್ರೀಕರಣಕ್ಕೆ ಚಿತ್ರತಂಡ ಚಾಲನೆ ನೀಡಿದೆ. 

Advertisement

ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಾಯಕ ನಟ ಯಶ್‌, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಪ್ರಶಾಂತ್‌ ನೀಲ್, ಛಾಯಾಗ್ರಹಕ ಭುವನ್‌ ಗೌಡ ಮೊದಲಾದವರು ಭಾಗಿಯಾಗಿದ್ದರು. “ಕೆಜಿಎಫ್ ಚಾಪ್ಟರ್‌-2′ ಚಿತ್ರದ ಚಿತ್ರೀಕರಣ ಏಪ್ರಿಲ್‌ನಿಂದ ಶುರುವಾಗಲಿದ್ದು, ಚಿತ್ರದಲ್ಲಿ “ಕೆಜಿಎಫ್ ಚಾಪ್ಟರ್‌-1′ ರಲ್ಲಿದ್ದ ಕಲಾವಿದರ ಜೊತೆ ಸಾಯಿಕುಮಾರ್‌, ರವಿಶಂಕರ್‌, ಬಾಲಿವುಡ್‌ ನಟಿ ರವೀನಾ ಟಂಡನ್‌, ಸಂಜಯ್‌ ದತ್‌ ಮೊದಲಾದ ಕಲಾವಿದರು ಇರಲಿದ್ದಾರೆ ಎನ್ನಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next