Advertisement

ಆಸ್ತಿಪಾಸ್ತಿ ಹಾನಿ ಮಾಡಿದವರಿಂದಲೇ ನಷ್ಟ ಭರಿಸುವ ಕ್ರಮದಿಂದ ಇಂತಹ ಕೃತ್ಯ ಕಡಿಮೆಯಾಗಬಹುದೇ?

04:24 PM Aug 14, 2020 | keerthan |

ಮಣಿಪಾಲ: ಗಲಭೆ – ದೊಂಬಿಗಳ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಗೊಳಿಸುವವರಿಂದಲೇ ಸರಕಾರ ಆ ನಷ್ಟವನ್ನು ಭರಿಸುವ ಮೂಲಕ ಇಂತಹ ಪುಂಡಾಟಗಳಿಗೆ ಕಡಿವಾಣ ಹಾಕಲು ಸಾಧ್ಯವೆಂದು ನಿಮ್ಮ ಅಭಿಪ್ರಾಯವೇ  ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ

Advertisement

ದಯಾನಂದ ಕೊಯಿಲಾ: ಇದು ಸರಿಯಾದ ಮಾರ್ಗ. ಸಾರ್ವಜನಿಕ ರ ತೆರಿಗೆ ಹಣದಿಂದ ಸರಕಾರ ಸಾರ್ವಜನಿಕರಿಗಾಗಿ ಮಾಡಿರುವ ವ್ಯವಸ್ಥೆಗಳನ್ನು ಒಂದಿಷ್ಟು ಮಂದಿ ಸೇರಿ ಹಾಳುಗೆಡವುದು ಎಷ್ಟು ಸರಿ. ಸಮುದಾಯ, ಸಂಘಟನೆ, ಇಲ್ಲವೇ ವ್ಯಕ್ತಿ ಇವರೇ ಭಾಧ್ಯಸ್ಥರು ಅವರಿಂದಲೇ ನಷ್ಟ ಭರಿಸಬೇಕು.

ಪ್ರಕಾಶ್ ಗಾಳಿಪಟ: ಏನಿರುತ್ತೆ ಅವರ ಬಳಿ ಎರಡು ತಲೆಗೆ ಇಪ್ಪತ್ತು ಮಕ್ಕಳು ಏನು ವಶ ಪಡಿಸಿಕೊಳ್ತೀರಿ

ಕೃಷ್ಣ ಜೋಶಿ: ದೇಶ ಹಾಳು ಮಾಡಬೇಕೆನ್ನುವವರು ಎಲ್ಲ ಕೆಟ್ಟ ಹಾಗೂ ದುಷ್ಟ ಕೆಲಸಗಳಿಗೆ ಸಿದ್ಧರಿದ್ದಾರೆ. ಗಿಡವಾಗಿದ್ದಾಗ ಬಗ್ಗಿಸದವರು ಮರವಾದಾಗ ಬಗ್ಗಿಸುವದು ಕಠಿಣ.

ಸತೀಶ್ ರಾವ್: ರಾಜಕೀಯ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು ಕಾನೂನು ತಿದ್ದುಪಡಿ ಮಸೂದೆ ಮಂಡನೆ ಮಾಡಿ ಯಾವುದೇ, ಯಾವ ಮುಲಾಜು ನೋಡದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮನಸ್ಸಿದ್ದರೆ ಮಾರ್ಗ ಖಂಡಿತ.

Advertisement

ದಾವೂದ್ ಕೂರ್ಗ್: ಈ ಕಾಳಜಿ ಯಾವಾಗಲೂ ಇರಲಿ ಒಳ್ಳೆಯದು

Advertisement

Udayavani is now on Telegram. Click here to join our channel and stay updated with the latest news.

Next