Advertisement
ಪೊಲೀಸ್ ಠಾಣೆಗೆ ಬಂದು ಧಮಕಿ ಹಾಕಿದ ವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಆದಿಲ್ ವಿರುದ್ಧ ದೂರು ಇದ್ದುದರಿಂದ ಪೊಲೀಸರು ಠಾಣೆಗೆ ಕರೆತಂದಿದ್ದರು. ಬಳಿಕ 7 ನಿಮಿಷ ಗಳಲ್ಲಿ ಏನಾಯಿತೋ ಗೊತ್ತಿಲ್ಲ. ಆರೋಗ್ಯದಲ್ಲಿ ವ್ಯತ್ಯಾಸ ಆಗಿ ಆತ ತೀರಿಕೊಂಡಿದ್ದಾನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
Related Articles
ಉಡುಪಿ ಗ್ಯಾಂಗ್‌ವಾರ್ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ, ಇಂಥ ಗುಂಪು ಘರ್ಷಣೆಗಳು, ರೌಡಿ ಚಟುವಟಿಕೆಗಳು ಯಾರನ್ನೂ ಹೇಳಿಕೇಳಿ ನಡೆಯುವುದಿಲ್ಲ. ಅವುಗಳನ್ನು ಹತ್ತಿಕ್ಕಲು ಏನು ಬೇಕೋ ಅದನ್ನು ಮಾಡಲಾಗುತ್ತದೆ. ಅಂತಹವರು ಮುಕ್ತವಾಗಿ ಓಡಾಡಿಕೊಂಡಿರಲು ಬಿಡುವುದಿಲ್ಲ ಎಂದರು. ಬೆಳಗಾವಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಗಲಭೆ ಸಂಬಂಧ ಪ್ರತಿಕ್ರಿಯಿಸಿ, ಗಲ್ಲಿಯಲ್ಲಿ ಸಣ್ಣದಾಗಿ ಗಲಾಟೆ ಆಗಿ ದೊಡ್ಡದಾಗುತ್ತದೆ. ಅದನ್ನು ನಿಯಂತ್ರಿಸುವುದು ನಮ್ಮ ಕೆಲಸ. ಅದಕ್ಕೂ ಮೊದಲೇ ಊಹಿಸಲಾಗುತ್ತದೆಯೇ ಎಂದು ಮರುಪ್ರಶ್ನೆ ಹಾಕಿದರು.
Advertisement
ಯುವಕನ ಸಾವು ಲಾಕಪ್ ಡೆತ್ ಅಲ್ಲ. ಆತನಿಗೆ ಮೂರ್ಛೆರೋಗ ಇದ್ದುದರಿಂದ ಮೃತಪಟ್ಟಿ ದ್ದಾನೆ. ಆದರೆ ಎಫ್ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆತಂದದ್ದು ತಪ್ಪು. ಈ ತಪ್ಪಿಗೆ ಪೊಲೀಸ್ ಅಧಿ ಕಾರಿಗಳ ಅಮಾನತಿಗೆ ಆದೇಶ ಮಾಡಿದ್ದೇನೆ.-ಸಿದ್ದರಾಮಯ್ಯ, ಮುಖ್ಯಮಂತ್ರಿ