ಕೆಯ್ಯೂರು : ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿ ಕೊಳ್ಳಬೇಕು. ಸಮಯ ವ್ಯರ್ಥ ಮಾಡದೇ ಈ ನಿಟ್ಟಿನಲ್ಲಿ ತೊಡಗಬೇಕು ಎಂದು ಕೆಯ್ಯೂರು ಜಯಕರ್ನಾಟಕ ಘಟಕದ ಗೌರವಾಧ್ಯಕ್ಷ, ಗ್ರಾ.ಪಂ. ಸದಸ್ಯ ಎ.ಕೆ. ಜಯರಾಮ ರೈ ಹೇಳಿದರು.
ಅವರು ಕೆಯ್ಯೂರು ಸ.ಪ.ಪೂ.ಕಾಲೇಜಿನಲ್ಲಿ ಜಯಕರ್ನಾಟಕ, ವಿದ್ಯಾಮಾತಾ ಫೌಂಡೇಶನ್ ಇದರ ವತಿಯಿಂದ ನಡೆದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಮಾತಾ ಫೌಂಡೇಶನ್ ಇದರ ಅಧ್ಯಕ್ಷ ಭಾಗೆÂàಶ್ ರೈ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಸಮಸ್ಯೆ ಇದೆ. ಇದರ ನಿವಾರಣೆಗಾಗಿ ಫೌಂಡೇಶನ್ ವತಿಯಿಂದ ನ್ಪೋಕನ್ ಇಂಗ್ಲೀಷ್ ತರಬೇತಿಗೆ ಸಹಕಾರ ನೀಡಲಾಗುವುದು ಎಂದರು.
ಗ್ರಾ.ಪಂ. ಅಧ್ಯಕ್ಷ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸವಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಬಿ.ವಿ. ಸೂರ್ಯ ನಾರಾಯಣ, ಜೇಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಪಿ.ಎಸ್. ಅವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆಯ್ಯೂರು ಪ.ಪೂ.ಕಾಲೇಜಿನ ಪ್ರಾಚಾರ್ಯೆ ಸುನಂದಾ, ಕೆಯ್ಯೂರು ಶ್ರೀ ದುರ್ಗಾ ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸತೀಶ್ ರೈ ದೇವಿನಗರ ಮೊದಲಾದವರು ಉಪಸ್ಥಿತರಿದ್ದರು.ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ವಿನೋದ್ ಕುಮಾರ್ ಕೆ.ಎಸ್. ಸ್ವಾಗತಿಸಿ, ಶಿಕ್ಷಕಿ ಜೆಸ್ಸಿ ಪಿ.ವಿ. ನಿರೂಪಿಸಿದರು.