Advertisement

ನೋ ಬಾಲ್ ವಿವಾದ; ಇನ್ನಿಂಗ್ ಡಿಕ್ಲೇರ್ ಗೆ ಮುಂದಾದ ಪಂತ್ ಗೆ ಪೀಟರ್ಸನ್ ಕ್ಲಾಸ್!

04:03 PM Apr 23, 2022 | Team Udayavani |

ಮುಂಬೈ: ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈವೋಲ್ಟೇಜ್ ಸಮರ ಕಳೆದ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಮೊದಲು ಜೋಸ್ ಬಟ್ಲರ್ ಶತಕ ಸಿಡಿಸಿ ಮಿಂಚಿದರೆ, ನಂತರ ನೋ ಬಾಲ್ ವಿವಾದ ನಡೆಯಿತು.

Advertisement

ಪಂದ್ಯದ ಕೊನೆಯ ಓವರ್ ನಲ್ಲಿ ಡೆಲ್ಲಿ ಆಟಗಾರ ರೋಮನ್ ಪೊವೆಲ್ ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ ಡೆಲ್ಲಿಗೆ 36 ರನ್ ಅಗತ್ಯವಿತ್ತು. ಪೊವಲ್ ಮೊದಲ ಮೂರು ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು. ಒಬೆಡ್ ಮೆಕಾಯ್ ಎಸೆದ ನಾಲ್ಕನೇ ಎಸೆತ ಫುಲ್ ಟಾಸ್ ಆಗಿತ್ತು. ಆದರೆ ಚೆಂಡು ಸೊಂಟಕ್ಕಿಂತ ಮೇಲಕ್ಕೆತ್ತು, ಹೀಗಾಗಿ ನೋ ಬಾಲ್ ನೀಡಬೇಕು ಎಂದು ಡೆಲ್ಲಿ ಆಟಗಾರರು ಕೇಳಿದರು. ಆದರೆ ಅಂಪೈರ್ ನೀಡಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ಆಟಗಾರರಿಗೆ ಆಡುವುದು ಬೇಡ, ಹಿಂದಕ್ಕೆ ಬನ್ನಿ ಎಂದು ಕರೆದರು.

ಇದನ್ನೂ ಓದಿ:ಕ್ರಿಕೆಟರ್‌ ಆಗುವ ನಿರೀಕ್ಷೆಯೇ ಇರಲಿಲ್ಲ: ಮುಕೇಶ್‌ ಚೌಧರಿ

ಅಲ್ಲದೆ ಡೆಲ್ಲಿ ಸಹಾಯಕ ಸಿಬ್ಬಂದಿ ಪ್ರವೀಣ್ ಆಮ್ರೆ ಮೈದಾನಕ್ಕೆ ಬಂದರು. ಅಂಪೈರ್ಸ್ಸ್ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 15 ರನ್ ಅಂತರದಿಂದ ಸೋಲನುಭವಿಸಿತ್ತು. ಆದರೆ ಪಂತ್ ವರ್ತನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಸ್ವತಃ ಡೆಲ್ಲಿ ತಂಡದ ಸಹಾಯಕ ಕೋಚ್ ಶೇನ್ ವಾಟ್ಸನ್ ಅವರೂ ಪಂತ್ ನಿರ್ಧಾರ ಅಸಮಂಜಸ ಎಂದಿದ್ದಾರೆ. ತಾವು ಅಂಪೈರ್ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಕೂಡಾ ಪಂತ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. “ಇದು ಅವರ ಏಕಾಗ್ರತೆಗೆ ಅಡ್ಡಿಪಡಿಸಿರಬಹುದು. ಈ ವಿಚಾರ ಅಂಪೈರ್ ಕರೆಗಿಂತ ಹೆಚ್ಚು ಡೆಲ್ಲಿ ತಂಡದ ನಡವಳಿಕೆ ಸಂಬಂಧಿಸಿದೆ ” ಎಂದು ಪೀಟರ್ಸನ್ ತಿಳಿಸಿದರು.

“ರಿಕಿ ಪಾಂಟಿಂಗ್ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪಂತ್ ಬಳಿ ಹೋಗಿ ನೀವು ಕೋಚನ್ನು ಆಟದ ಮಧ್ಯೆ ಕಳುಹಿಸಿ ‘ನೀವು ಭೂಮಿಯ ಮೇಲೆ ಏನು ಮಾಡುತ್ತಿದ್ದೀರಿ’ ಎಂದು ಜೋಸ್ ಬಟ್ಲರ್ ಗೆ ಎಲ್ಲಾ ಹಕ್ಕಿದೆ. ಇದು ಜಂಟಲ್ ಮೆನ್ ಗೇಮ್. ಜನರು ತಪ್ಪು ಮಾಡುತ್ತಾರೆ. ಎಷ್ಟೋ ಬಾರಿ ನಮಗೆ ಔಟಾಗದಿದ್ದರೂ ಔಟ್ ನೀಡಿದ್ದಾರೆ, ನಾನು ಮತ್ತು ಸ್ವಾನಿ (ಗ್ರೇಮ್ ಸ್ವಾನ್) 20 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇವೆ. ಆದರೆ ಇಂತಹ ಘಟನೆಗಳು ಕ್ರಿಕೆಟ್ ಆಟಕ್ಕೆ ಒಳ್ಳೆಯದಲ್ಲ” ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next