Advertisement

ಕೆವಿಜಿ ವೈದ್ಯ ಕಾಲೇಜಿಗೆ: ನವಜಾತ ಶಿಶು ರಕ್ಷಣಾ ಘಟಕಕ್ಕೆ 25 ಲ.ರೂ.

11:41 AM Mar 08, 2017 | Team Udayavani |

ಮಂಗಳೂರು: ಕರ್ಣಾಟಕ ಬ್ಯಾಂಕ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಮೆಡಿಕಲ್‌ ಕಾಲೇಜಿನಲ್ಲಿ “ನವಜಾತ ಶಿಶುಗಳ ನಿರ್ವಹಣ ಘಟಕ’ ಸ್ಥಾಪನೆಗೆ 25 ಲಕ್ಷ ರೂ. ನೆರವು ನೀಡಿದೆ. ಅವಧಿಗೆ ಮುನ್ನ ಜನಿಸುವ ಶಿಶುಗಳನ್ನು ಈ ಅತ್ಯಾಧುನಿಕ ತಂತ್ರಜ್ಞಾನದ ಘಟಕದಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ.

Advertisement

ಘಟಕವನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್‌ ಉದ್ಘಾಟಿಸಿದರು. “ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ಶಾಲಾ ಕಾಲೇಜುಧಿಗಳ ಕೊಠಡಿಗಳ ನಿರ್ಮಾಣ, ಕುಡಿಯುವ ನೀರು, ಹಸುರೀಕರಣ, ಆರೋಗ್ಯ ರಕ್ಷಣೆ ಮುಂತಾದ ಕಾರ್ಯಗಳಿಗೆ ಈ ವರ್ಷ 6 ಕೋಟಿ ರೂ.ಗೂ ಅಧಿಕ ಮೊತ್ತ ಒದಗಿಸಲಾಗಿದೆ’ ಎಂದು ತಿಳಿಸಿದರು.

ಅಕಾಡೆಮಿ ಆಫ್‌ ಲಿಟರಲ್‌ ಎಜುಕೇಶನ್‌ ಸಂಸ್ಥೆಯ ಅಧ್ಯಕ್ಷ- ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ| ಕೆ. ವಿ. ಚಿದಾನಂದ, ಪ್ರಾಂಶುಪಾಲೆ ಡಾ| ರೂಪಾ ಕುಲಕರ್ಣಿ, ಸಂಸ್ಥೆಯ ಖಜಾಂಚಿ ಶೋಭಾ ಚಿದಾನಂದ, ಡಾ| ಶಿವನ ಗೌಡ, ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌, ಬ್ಯಾಂಕಿನ ಎಜಿಎಂ ನಾಗರಾಜ ಆರ್‌. ಹೆಬ್ಟಾರ್‌, ಚೀಫ್‌ ಮ್ಯಾನೇಜರ್‌ ಶ್ರೀನಿವಾಸ ದೇಶಪಾಂಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next