Advertisement

Hill collapse ಕೆತ್ತಿಕಲ್‌ ಗುಡ್ಡ ಕುಸಿತ: ಜಿಎಸ್‌ಐ ವಿಜ್ಞಾನಿಗಳಿಂದ ಪರಿಶೀಲನೆ

11:18 PM Aug 07, 2024 | Team Udayavani |

ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ ಆಗುತ್ತಿರುವ ಬಗ್ಗೆ ಅಧ್ಯಯನ ನಡೆಸಲು ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ(ಜಿಎಸ್‌ಐ)ದ ಇಬ್ಬರು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಜಿಎಸ್‌ಐ ವಿಜ್ಞಾನಿಗಳು ಎರಡು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಅವರ ಸೂಚನೆಯಂತೆ ಗುಡ್ಡ ಜರಿತ ಪ್ರದೇಶದ ಒಂದೆರಡು ಕಡೆಗಳಲ್ಲಿ ಆತಂಕ ಇದ್ದು, ಈ ಭಾಗದ ರಸ್ತೆಯಲ್ಲಿ ಎಚ್ಚರಿಕೆಯಿಂದ ವಾಹನ ಸಂಚಾರ ಚಲಾಯಿಸಬೇಕು. ಗುಡ್ಡ ಪ್ರದೇಶದಿಂದ ಹರಿದು ಬರುವ ನೀರನ್ನು ಒಂದೇ ಕಡೆಯಿಂದ ನಿಯಂತ್ರಿಸಲು ತಿಳಿಸಲಾಗಿದೆ. ಡ್ರೋನ್‌ ಸರ್ವೇ, ಮಾಹಿತಿ ಸಂಗ್ರಹ ಮಾಡುವ ದಿಲ್ಲಿಯ ತಂಡದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಗುಡ್ಡ ಜರಿತಕ್ಕೆ ಕಾರಣ ಏನು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಸುಪಾಸಿನಲ್ಲಿರುವ ಕೆಲವು ಮನೆಯವರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಸಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಎನ್‌ಎಚ್‌ಪಿಡಿ, ಪಾಲಿಕೆ ಆಯುಕ್ತರು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಎಸ್‌ಐ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಇತರ ಕಡೆಗಳ ಗುಡ್ಡ ಕುಸಿತ ಪ್ರದೇಶಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ಶಿರೂರು ಕುಸಿತ ಪ್ರಕರಣ ದಲ್ಲಿ ಅಧ್ಯಯನ ನಡೆಸಿದ ತಂಡವೂ ಶೀಘ್ರದಲ್ಲೇ ಕೆತ್ತಿಕಲ್‌ಗೆ ಬರುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next