Advertisement
ಮಾನ ಮುಚ್ಚಿಕೊಳ್ಳಲು, ತಿನ್ನಲು, ಮನೆ ಕಟ್ಟಿಕೊಳ್ಳಲುಸೊಪ್ಪನ್ನು ಬಳಸುವ ಪರಂಪರೆ ಹಿಂದಿನಿಂದ ಇದೆ. ಮಲೆನಾಡಿಗರುಕಾಡಿನಲ್ಲಿ ಸಹಜವಾಗಿ ಸಿಗುವಸೊಪ್ಪುಗಳನ್ನು ಬಳಸಿ ಅಡುಗೆಮಾಡಿ ಊಟ ಮಾಡುತ್ತ ತಮ್ಮ ಆರೋಗ್ಯಕಾಪಾಡಿಕೊಂಡು ಬಂದಿದ್ದಾರೆ. ಖನಿಜಾಂಶಗಳಗಣಿಯಾಗಿರುವ ಕೆಸುವಿನ ಅಡುಗೆಯ ವಾಸ್ತವಪ್ರಪಂಚ ಅದ್ಭುತವಾದದ್ದು. ಎಲ್ಲ ಕೆಸುಗಳುಆಹಾರಕ್ಕೆ ಯೋಗ್ಯವಲ್ಲ. ಕೆಲವು ಪ್ರತಿಕೂಲ ಪರಿಣಾಮ ಬೀರುತ್ತವೆ.
Related Articles
Advertisement
ಎಂಎ, ಬಿಎಡ್ ಓದಿ ಕರ್ಕಿ ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಜಾನಪದ ಹಿರಿಯವಿದ್ವಾಂಸ ಡಾ| ಎನ್.ಆರ್. ನಾಯಕರಧರ್ಮಪತ್ನಿಯಾಗಿ ಅವರ ಎಲ್ಲ ಕೆಲಸಗಳಲ್ಲಿಜೊತೆಯಾಗಿ ದುಡಿದು ಸ್ವತಂತ್ರವಾಗಿ 25ಕ್ಕೂ ಹೆಚ್ಚುಜಾನಪದ ಅಡುಗೆಯ ಸಾಹಿತ್ಯ, ಮನೆಮದ್ದು,ಮೊದಲಾದ ಪುಸ್ತಕಗಳನ್ನು ಪ್ರಕಟಿಸಿರುವ ಶಾಂತಿನಾಯಕರಿಗೆ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆಪ್ರಶಸ್ತಿ, ಸಹಿತ ಹಲವು ಪ್ರಶಸ್ತಿಗಳು ದೊರಕಿವೆ. 78ರಈ ವಯಸ್ಸಿನಲ್ಲಿ ಕೆಸುವಿನ ಕುರಿತು ಬರೆದಿರುವ ಶಾಂತಕ್ಕನ ಕಸುವು ಮೆಚ್ಚತಕ್ಕದು.
ಹೊನ್ನಾವರದ ಭೂಮಿ ಜಾನಪದ ಪ್ರತಿಷ್ಠಾನವು ಶಾಂತಿ ನಾಯಕರು ಬರೆದು ಪ್ರಕಟಿಸಿರುವ,ಕೆಸು ಪುರಾಣ ಮತ್ತು ವಾಸ್ತವ ಪುಸ್ತಕದ ಕುರಿತು ಬರಹಗಳನ್ನು ಆಹ್ವಾನಿಸಿದೆ. ಪ್ರತಿ ಬರಹವು ಏ4ಆಕಾರದ 4-5 ಪುಟಗಳಿಗೆ ಮೀರದಂತಿರಬೇಕು.ಆಯ್ಕೆಗೊಂಡ ಐದು ಬರಹಗಳ ಲೇಖಕರನ್ನುಗೌರವ ಪ್ರಶಸ್ತಿ ಪತ್ರದೊಂದಿಗೆ ತಲಾ ಎರಡು ಸಾವಿರ ರೂ.ಗಳನ್ನು ನೀಡಿ ಗೌರವಿಸಲಿದೆ. ಬರಹಗಳನ್ನು ಮೇ 15 ರೊಳಗೆ ಸುಹಾಸ,ಉದಯಗಿರಿ ಪ್ರಭಾತನಗರ, ಹೊನ್ನಾವರ(ಉ.ಕ.)-581334 ಈ ವಿಳಾಸಕ್ಕೆ ಕಳಿಸಬೇಕು.ಪುಸ್ತಕವನ್ನು ರಿಯಾಯತಿ ದರದಲ್ಲಿ ಈಕೆಳಗಿನ ವಿಳಾಸದಲ್ಲಿ ಪಡೆಯಬಹುದು.ಚಂದ್ರಿಕಾ ಪಿ., ಅಭಿನವ, 2 ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40. ಮೊ. 9448804044.ಶಾಂತಿ ನಾಯಕ, ಸುಹಾಸ, ಉದಯಗಿರಿ,ಪ್ರಭಾತನಗರ. ಹೊನ್ನಾವರ ಮೊ. 9482438577.
–ಜೀಯು, ಹೊನ್ನಾವರ