Advertisement

ಹರಕೆ ತೀರಿಸಿದ ಕೆಸಿಆರ್‌: ಪ್ರತಿಪಕ್ಷಗಳ ಆಕ್ಷೇಪ

03:50 AM Feb 23, 2017 | Team Udayavani |

ಹೈದ್ರಾಬಾದ್‌: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಹರಕೆ ಹೊತ್ತಿದ್ದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ತಿರುಪತಿಯ ವೆಂಕಟೇಶ್ವರ ಸ್ವಾಮಿಗೆ 5 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಬುಧವಾರ ಅರ್ಪಿಸಿದರು. ಇದಕ್ಕೆ ಸ್ಥಳೀಯ ವಿರೋಧ ಪಕ್ಷಗಳಾದ ಕಾಂಗ್ರೆಸ್‌,ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿವೆ.

Advertisement

ಮಂಗಳವಾರ ರಾತ್ರಿಯೇ ಕೆಸಿಆರ್‌ ತಮ್ಮ ಕುಟುಂಬ ಸದಸ್ಯರು ಹಾಗೂ ಸಂಪುಟ ಸಚಿವರೊಂದಿಗೆ ಆಗಮಿಸಿ ಇಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಬಳಿಕ ಸಾಲಿಗ್ರಾಮಗಳಿಂದ ಪೋಣಿಸಿದ್ದ, 5 ಕೋಟಿ ರೂ. ಬೆಲೆ ಬಾಳುವ, 19 ಕೆ.ಜಿ ತೂಕದ ಬಹು ಸ್ತರಗಳ “ಚಿನ್ನದ ಮಕರ ಕಂಠಾಭರಣ’ವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದರು.

ವಿಪಕ್ಷಗಳ ವಿರೋಧ: ಕೆಸಿಆರ್‌ ಭಾರಿ ಮೌಲ್ಯದ ಚಿನ್ನಾಭರಣ ಗಳನ್ನು ತಿರುಪತಿ ದೇವಾಲಯಕ್ಕೆ ನೀಡಿರುವುದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ತಮ್ಮ ವೈಯಕ್ತಿಕ ಹರಕೆ ತೀರಿಸಲು ಸಾರ್ವಜನಿಕ ಹಣ ಪೋಲು ಮಾಡುತ್ತಿದ್ದಾರೆ. ಆಭರಣಗಳಿಗೆ ಮಾಡಲಾದ ವೆಚ್ಚದ ಬಗ್ಗೆ ಸರ್ಕಾರ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿವೆ. ವೈಯಕ್ತಿಕ ಕಾರಣಗಳಿಗೆ ಇಷ್ಟೊಂದು ಮೊತ್ತದ ಹಣ ವ್ಯಯಿಸಿರುವ ದೇಶದ ಮೊದಲ ಸಿಎಂ ಕೆಸಿಆರ್‌ ಎಂದು ಬಿಜೆಪಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next