Advertisement

Dinesh Gundu Rao ಸಿಡಿಲು ಬಾಧಕ ಪ್ರದೇಶಗಳಲ್ಲಿ ಮಿಂಚುಬಂಧಕ

11:26 PM Jun 10, 2024 | Team Udayavani |

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಹೆಚ್ಚು ಸಿಡಿಲು ಬಾಧಿಸುವ ಸುಬ್ರಹ್ಮಣ್ಯ, ಕಡಬ, ಸುಳ್ಯ ಭಾಗದಲ್ಲಿ ಪ್ರಾಯೋಗಿಕವಾಗಿ ಮಿಂಚು ಬಂಧಕಗಳನ್ನು ಅಳವಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂ ರಾವ್‌ ತಿಳಿಸಿದ್ದಾರೆ.

Advertisement

ವಿಪತ್ತು ನಿರ್ವಹಣೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದು ಯಶಸ್ವಿಯಾದರೆ ಇತರೆಡೆ ಗಳಲ್ಲೂ ಸ್ಥಾಪಿಸಲಾಗುವುದು ಎಂದರು.

ಎತ್ತರದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಅಳವಡಿಸಲಾಗುವುದು. 500 ಮೀ.ನಿಂದ 1.5 ಕಿ.ಮೀ. ವರೆಗೂ ಸಿಡಿಲಿನ ಪರಿಣಾಮವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಈ ಉಪಕರಣಗಳು ಹೊಂದಿರುತ್ತವೆ ಎಂದರು.

ಮರಳು, ಕೆಂಪು ಮಣ್ಣು
ಸಾಗಾಟಕ್ಕೆ ನಿಯಂತ್ರಣ
ಜಿಲ್ಲೆಯ ಹಲವೆಡೆ ಅನಧಿಕೃತವಾಗಿ ಕೆಂಪು ಮಣ್ಣು ಗಣಿಗಾರಿಕೆ ನಡೆಸುತ್ತಿರುವ ದೂರುಗಳಿವೆ. ಯಾರೇ ಆಗಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಗಣಿ ಇಲಾಖೆಗೆ ತಾಕೀತು ಮಾಡಿದ್ದೇನೆ. ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ನಿಷ್ಪಕ್ಷವಾಗಿ ಅವರು ಕಾರ್ಯ ನಿರ್ವಹಿ ಸಬೇಕು, ಸರಕಾರದಿಂದ ಅಗತ್ಯ ರಕ್ಷಣೆ ಒದಗಿಸುವ ಭರವಸೆ ನೀಡಿದರು.

ಸಿಆರ್‌ಝಡ್‌ ಮರಳಿಗೆ ಜಿಲ್ಲೆಯಲ್ಲಿ ಬೇಡಿಕೆ ಇದೆ. ಆದರೆ ಲಭ್ಯತೆ ಇಲ್ಲ, ನಾನ್‌ ಸಿಆರ್‌ಝಡ್‌ ಮರಳು ಲಭ್ಯವಿದ್ದರೂ ಬೇಡಿಕೆ ಇಲ್ಲ ಎನ್ನಲಾಗಿದೆ. 3 ತಿಂಗಳಲ್ಲಿ ಸಿಆರ್‌ಝಡ್‌ ಮರಳು ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಆದರೆ ಅಕ್ರಮ ಮರಳು ಸಾಗಣೆಗೆ ಅವಕಾಶವಿಲ್ಲ.ಎಲ್ಲ ಕಡೆ ಸಿಸಿ ಕೆಮರಾ ಅಳವಡಿಸಿದ್ದರೂ ಪ್ರಯೋಜನವಾಗಿಲ್ಲ, ಇದು ಆಡಳಿತದ ವೈಫಲ್ಯ ಎಂದರು.

Advertisement

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಯಾವುದೇ ಅನಾಹುತವಾಗದಂತೆ ಸರ್ವ ಸನ್ನದ್ಧರಾಗಬೇಕಿದೆ. ಅದಕ್ಕಾಗಿ ಎಲ್ಲ ಇಲಾಖೆಗಳನ್ನೂ ಸೇರಿಸಿಕೊಂಡು ಅಣಕು ಕಾರ್ಯಾಚರಣೆಯೊಂದನ್ನು ಕೂಡಲೇ ನಡೆಸಿ ದೋಣಿಗಳು, ಉಪಕರಣಗಳು ಎಲ್ಲವೂ ಸರಿಯಾಗಿ ಕೆಲಸ ಮಾಡುವಂತಿ ರಬೇಕು ಎನ್ನುವುದನ್ನು ಆ ಮೂಲಕ ದೃಢಪಡಿಸಿಕೊಳ್ಳಬೇಕು ಎನ್ನಲಾಗಿದೆ. ನೆರೆ ಸಾಧ್ಯತೆಯ ಎಲ್ಲ ಪ್ರದೇಶಗಳನ್ನೂ ಪಟ್ಟಿ ಮಾಡಿಕೊಳ್ಳಲಾಗಿದ್ದು ಅಲ್ಲಿ ಹೂಳೆತ್ತು ವುದೂ ಸೇರಿದಂತೆ ವಿವಿಧ ಮುಂತಾದ ಕ್ರಮಗಳನ್ನು ಜರಗಿಸಬೇಕು. ಯಾವುದೇ ಪರಿಹಾರ ಒದಗಿಸುವುದಕ್ಕೂ ಹಣದ ಕೊರತೆ ಇಲ್ಲ, ಜಿಲ್ಲೆಯ ವಿಪತ್ತು ನಿಧಿಯಲ್ಲಿ 17 ಕೋಟಿ ರೂ., ತಾಲೂಕುಗಳ ನಿಧಿ ಯಲ್ಲಿ 4 ಕೋಟಿ ರೂ. ಇದೆ ಎಂದರು.

ಕಡಲ್ಕೊರೆತಕ್ಕೆ ತುರ್ತು ಹಣ
ಕಡಲ್ಕೊರೆತದಿಂದ ಸಮಸ್ಯೆಯಾದರೆ ತತ್‌ಕ್ಷಣಕ್ಕೆ ತುರ್ತು ಬಳಕೆಗೆ ಹಣ ವನ್ನು ವಿಪತ್ತು ನಿಧಿಯಿಂದ ಬಳಸುವಂತಿಲ್ಲ. ಅದಕ್ಕಾಗಿ ಸರಕಾರದಿಂದಲೇ ಮೊತ್ತ ಒದಗಿಸುವ ಬಗ್ಗೆ ಹಣಕಾಸು ಇಲಾಖೆಗೆ ಸೂಚಿಸಲಾಗಿದೆ. ಅಲ್ಲದೆ ಶಾಶ್ವತ ಪರಿಹಾರಕ್ಕೆ 80 ಕೋಟಿ ರೂ.ನ ಯೋಜನೆಯೊಂದಕ್ಕೆ ಬಂದರು
ಇಲಾಖೆ ಪ್ರಸ್ತಾವನೆ ಸಿದ್ಧಗೊಳಿಸಿದೆ ಎಂದರು.

ಸುಬ್ರಹ್ಮಣ್ಯ ಪರಿಸರದಲ್ಲಿ ಯಶಸ್ವಿ
ಒಂದು ಮಿಂಚು ಬಂಧಕವನ್ನು ಈ ಹಿಂದೆ ಸುಬ್ರಹ್ಮಣ್ಯದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ್ದು, ಪರಿಣಾಮಕಾರಿಯಾಗಿದೆ. ಇದು ಎತ್ತರದ ಕಂಬ ಹಾಗೂ ತಾಮ್ರದ ತಂತಿಯನ್ನೊಳಗೊಂಡಿದ್ದು, ತನ್ನ ಪರಿಧಿಯಲ್ಲಿ ಬರುವ ಮಿಂಚನ್ನು ಸೆಳೆದುಕೊಂಡು ಅದರ ಶಕ್ತಿಯನ್ನು ತಂತಿ ಮೂಲಕ ಭೂಮಿಗೆ ವರ್ಗಾಯಿಸುತ್ತದೆ ಹಾಗೂ ಆ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚು ಸಿಡಿಲು ಬಡಿಯುವ ಪ್ರದೇಶಗಳನ್ನು ನೋಡಿಕೊಂಡು ಪ್ರಾಯೋಗಿಕವಾಗಿ ಕಂದಾಯ ಇಲಾಖೆ ವತಿಯಿಂದ ಮಿಂಚು ನಿರೋಧಕಗಳನ್ನು ಅಳವಡಿಸಲು ಯೋಜಿಸಲಾಗಿದೆ.

ವಾರದೊಳಗೆ ಕಲ್ಲಡ್ಕ ಹೆದ್ದಾರಿ ದುರಸ್ತಿಗೊಳಿಸಿ
ಮಂಗಳೂರು: ಜಿಲ್ಲೆಯಲ್ಲಿ ಹಾದುಹೋಗಿರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಸಮರ್ಪಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಯೋಗ್ಯವಾಗಿಸುವಂತೆ ಸಚಿವ ದಿನೇಶ್‌ ಗುಂಡೂರಾವ್‌ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಳೆಗಾಲದಲ್ಲಿ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಮಾತನಾಡಿ, ಬಿಸಿ.ರೋಡ್‌-ಕಲ್ಲಡ್ಕ-ಮಾಣಿ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಆಗಿರುವ ದುರವಸ್ಥೆಯ ಬಗ್ಗೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ವಿಷಯ ಪ್ರಸ್ತಾ ವಿಸಿ, ಕಲ್ಲಡ್ಕ ಪೇಟೆಯಲ್ಲಿ ಸಾಗುವ ವಾಹನ ಪ್ರಯಾಣಿಕರು, ಸ್ಥಳೀಯರು ಪ್ರತಿಕ್ಷಣವೂ ಸಮಸ್ಯೆ ಎದುರಿಸುತ್ತಿದ್ದಾರೆ.ಎಂದು ಸಚಿವರ ಗಮನಕ್ಕೆ ತಂದರು.

ಹೆದ್ದಾರಿಯ ಅವ್ಯವಸ್ಥೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ವಾರದೊಳಗೆ ದುರಸ್ತಿಗೊಳ್ಳಬೇಕು. ಮಳೆಗಾಲ ಪೂರ್ಣಗೊಳ್ಳುವವರೆಗೂ ಈ ಹೆದ್ದಾರಿ ಮೇಲೆ ನಿಗಾ ವಹಿಸಬೇಕು ಎಂದರು.ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ಪುಂಜಾಲಕಟ್ಟೆ – ಚಾರ್ಮಾಡಿ ಹೆದ್ದಾರಿ ವಿಸ್ತರಣೆ ನಡೆಯುತ್ತಿದ್ದು ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದರು.

ಸಚಿವರು ಈ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದರೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಕೂಳೂರು ರಾ.ಹೆ.ಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ನದಿಗೆ ಮಣ್ಣು ತುಂಬಿದ್ದು, ಮಳೆಗಾಲದಲ್ಲಿ ನದಿ ನೀರಿನ ಸುಗಮ ಹರಿವಿಗೆ ಅಡ್ಡಿಯಾಗಿ ಸೇತುವೆಗೆ ಅಪಾಯ ಸಾಧ್ಯತೆ ಇರುವುದರಿಂದ ಈ ಮಣ್ಣನ್ನು ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನವೀನ್‌ ಮಾತನಾಡಿ, ಈಗಾಗಲೇ ಕೂಳೂರು ಸೇತುವೆ ಮಣ್ಣನ್ನು ತೆರವುಗೊಳಿಸಲು ಕಾಮಗಾರಿ ನಡೆಯುತ್ತಿದೆ. ಕಲ್ಲಡ್ಕ ಹೆದ್ದಾರಿಯಲ್ಲಿ ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಆದ್ಯತೆಯಲ್ಲಿ ಕೆಲಸ ನಡೆಯುತ್ತಿದೆ ಎಂದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿ.ಪಂ. ಸಿಇಒ ಡಾ| ಆನಂದ್‌ ಕೆ., ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಎಸ್‌ಪಿ ರಿಷ್ಯಂತ್‌ ಸಿಬಿ ಮುಂತಾದವರಿದ್ದರು.

ಬೋಳಿಯಾರು ಘಟನೆ: ನಿಷ್ಪಕ್ಷ ಕ್ರಮ
ಮಂಗಳೂರು: ಬೊಳಿಯಾರಿನಲ್ಲಿ ರವಿವಾರ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ. ಪೊಲೀಸರು ಯಾವುದೇ ಘಟನೆ ಆದಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೋಳಿ ಯಾರು ಘಟನೆಗೆ ಕಾರಣ ಏನೇ ಇರಬಹುದು. ಆದರೆ ಕಾನೂನು ಕೈಗೆತ್ತಿ ಕೊಂಡಾಗ ಯಾರನ್ನೂ ಕ್ಷಮಿಸಲಾಗದು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಪೊಲೀಸ್‌ ವರದಿಯಲ್ಲಿ ಇರಲಿದೆ. ಕೆಲವರಿಂದ ಪ್ರಚೋದನೆಯೂ ಆಗಿರಬಹುದು. ಜನರು ಸಹಕರಿಸಬೇಕು ಎಂದರು.

ಗೃಹ ಸಚಿವರ ಆದೇಶದ ಮೇರೆಗೆ ರಚನೆಯಾದ ಆ್ಯಂಟಿ ಕಮ್ಯುನಲ್‌ ವಿಂಗ್‌ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲ. ಆ ಬಗ್ಗೆ ಮುಂದೆ ಗಮನ ಹರಿಸಲಾಗುವುದು ಎಂದರು.

ಮೋದಿಗೆ ಪಾಠ
ಫ‌ಲಿತಾಂಶದಲ್ಲಿ ಸೋತಾಗ ಎಲ್ಲ ವನ್ನೂ ಕಳೆದುಕೊಂಡಂತೆ, ಗೆದ್ದಾಗ ಎಲ್ಲವನ್ನೂ ಗೆದ್ದಂತೆ ಭಾವಿಸಬಾ ರದು ಎಂಬಂತೆ ಕೇಂದ್ರದಲ್ಲಿ ಮೋದಿ ಯವರಿಗೆ ಪಾಠ ಕಲಿಸಲಾಗಿದೆ. ಈ ಸರ್ವಾಧಿಕಾರ ಧೋರಣೆಗೆ ಅವರ ಧೋರಣೆಗೆ ಕಡಿವಾಣ ಬಿದ್ದಿದೆ. ಸಚಿವರ ಕಾರ್ಯದ ಬಗ್ಗೆ ವಿಶ್ಲೇಷಣೆ ಆಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಯಾವ ಬದಲಾವಣೆ ಆಗಬೇಕೋ ಅದನ್ನು ವರಿಷ್ಠರು ಮಾಡುವರು. ನಾವು ಅದಕ್ಕೆ ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next