Advertisement
ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಕೇಶವ ಪ್ರಸಾದ್ ಅವರು ಕೆಂಪು ಕಲ್ಲು ತೆಗೆದು ಹೊಂಡಗಳಿಂದ ತುಂಬಿದ್ದ ತನ್ನ ಎರಡು ಎಕ್ರೆ ಪ್ರದೇಶವನ್ನು ಸಮತಟ್ಟುಗೊಳಿಸಿ ಕೇರಳದಲ್ಲಿ ಅತೀ ಬೇಡಿಕೆ ಇರುವ ಮರಗೆಣಸು ಕೃಷಿ ಮಾಡಲು ನಿರ್ಧರಿಸಿದರು. ಇತರ ಕೃಷಿಕರಿಂದ ಹಾಗೂ ತೋಟಗಾರಿಕಾ ಇಲಾಖೆಯಿಂದ ಸುಮಾರು ಎರಡು ಸಾವಿರದಷ್ಟು ಮರಗೆಣಸಿನ ಗಿಡಗಳನ್ನು ತಂದು ನೆಟ್ಟರು. ಒಂದು ಸಸಿಯಲ್ಲಿ ಸಾಧಾರಣ ಹದಿನೈದರಿಂದ ಇಪ್ಪತ್ತು ಕಿಲೋಗಳಷ್ಟು ಗೆಣಸು ಲಭಿಸುತ್ತಿದ್ದು ಇದರಿಂದ ಮಾತ್ರ ಎರಡು ಲಕ್ಷ ರೂ.ನಷ್ಟು ಆದಾಯ ಲಭಿಸಿರುವುದಾಗಿ ಕೇಶವ ಪ್ರಸಾದ್ ಹೇಳುತ್ತಾರೆ. ಜುಲೈ ತಿಂಗಳ ಕೊನೆಯಲ್ಲಿ ಗಿಡಗಳನ್ನು ನೆಟ್ಟಿದ್ದು ಮಳೆ ಕಡಿಮೆಯಾಗಿದ್ದುದರಿಂದ ಪೈಪಿನ ಮುಖಾಂತರ ನೀರುಣಿಸಬೇಕಾಯಿತು. ಹಾಗಾಗಿ ಗಿಡದ ಬೆಳವಣಿಗೆ ನಿರೀಕ್ಷೆ ಯಷ್ಟು ಆಗದೆ ಇಳುವರಿ ಕಡಿಮೆ ಯಾಯಿತು ಇಲ್ಲವಾದರೆ ಸುಮಾರು ನಾಲ್ಕು ಲಕ್ಷ ರೂ. ಆದಾಯ ಲಭಿಸುತ್ತಿತ್ತು ಎಂದವರ ಅಭಿಪ್ರಾಯ.
Related Articles
Advertisement
ಉಪಬೆಳೆಗಳ ಫಸಲುಮರಗೆಣಸು ಮಾತ್ರವಲ್ಲದೆ ಉಪಬೆಳೆಯಾಗಿ ಬಸಳೆ, ಕುಂಬಳಕಾಯಿ, ಸೋರೆಕಾಯಿ, ಚೀನಿಕಾಯಿ, ತೊಂಡೆ ಕಾಯಿ, ಅಲಸಂಡೆ, ಬದನೆ, ಹರಿವೆ ಮುಂತಾದವುಗಳನ್ನು ಬೆಳೆಸುತ್ತಿದ್ದಾರೆ. ಕೇವಲ ಮೂರು ಸಾವಿರ ಖರ್ಚು ಮಾಡಿದ ಬಸಳೆ ಕೃಷಿಯಿಂದ ಮಾತ್ರ ಮೂವತ್ತೆ$çದು ಸಾವಿರ ಆದಾಯ ಲಭಿಸಿದೆ. ಸ್ಪ್ರಿಂಕ್ಲರ್ ಹಾಗೂ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ಕೃಷಿ ಮಾಡಿ ಯಶಸ್ವಿಗಳಿಸಿದ್ದಾರೆ ಕೇಶವ ಪ್ರಸಾದ್. ನೆಲಕಡಲೆ ಹಿಂಡಿ ಹಾಗೂ ಸಾವಯವ ಗೊಬ್ಬರ ಮಾತ್ರವೇ ಉಪಯೋಗಿಸಿ ಬೆಳೆದ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಜನರು ಇವರ ಮನೆಯಿಂದ ನೇರವಾಗಿ ತರಕಾರಿಗಳನ್ನು ಕೊಂಡು ಕೊಳ್ಳುತ್ತಾರೆ. ಉಳಿದ ತರಕಾರಿಗಳನ್ನು ಕುಂಬಳೆಯಲ್ಲಿರುವ ತರಕಾರಿ ಅಂಗಡಿಗೆ ಮಾರಾಟ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಗೋವುಗಳನ್ನೂ ಸಾಕುತ್ತಿದ್ದು ಹಟ್ಟಿಯ ಗೊಬ್ಬರ ಕೃಷಿಗೆ ಉಪಯೋಗಿಸುತ್ತಾರೆ. ಹಾಗೆಯೇ ತನ್ನ ಹಿತ್ತಿಲಲ್ಲಿ ಹುಲ್ಲನ್ನೂ ಬೆಳೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜನಪದ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರು, ಉತ್ತಮ ಸಂಘಟಕ, ಸಮಾಜಸೇವಕ… ಹೀಗೆ ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವ ಕೇಶವ ಪ್ರಸಾದರು ತನ್ನ ಬಿಡುವಿನ ಸಮಯವನ್ನು ಕೃಷಿ ಕೆಲಸಕ್ಕಾಗಿ ಮೀಸಲಿಡುತ್ತಾರೆ. ಉತ್ತಮ ವಾಗ್ಮಿಯು ಅಗಿರುವ ಇವರು ಕನ್ನಡ, ಮಲಯಾಳಂ, ತುಳು, ಇಂಗ್ಲೀಷ್, ಹಿಂದಿ ಮಾತಾಡಬಲ್ಲವರಾಗಿದ್ದಾರೆ. ಇವರ ತೋಟದಲ್ಲಿ ಬೆಳೆಯುವ ತರಕಾರಿಗಳು ಈ ವರ್ಷದ ವಿಷುವಿಗಾಗಿ ಈಗಾಗಲೇ ಮಾರುಕಟ್ಟೆ ತಲುಪಿದೆ. ಉತ್ತಮ ಗುಣಮಟ್ಟದ, ಸಾವಯವ ಉತ್ಪನ್ನಗಳು ಆರೋಗ್ಯವಂತ ವಿಷುವನ್ನು ಜನರು ಸಂಭ್ರಮದಿಂದ ಆಚರಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಆತ್ಮಹತ್ಯೆಯೋಚನೆಯ ಕೃಷಿಕರು ಇವರಿಂದ ಕಲಿಯಲಿ
ಕೃಷಿಯಲ್ಲಿ ಸಾಧನೆಮಾಡಲು ಹೋಗಿ ಕೈಸುಟ್ಟುಕೊಂಡ ನಿರಾಸೆ ಯಿಂದ ಆತ್ಮಹತ್ಯೆ ಮಾಡುವ ಕೃಷಿಕರು ಇವರಿಂದ ಕಲಿಯುವುದು ಬಹಳ ವಿದೆ. ಬಿಡುವಿನ ಸಮಯವನ್ನು ಹೇಗೆ ಪ್ರಯೋಜನಕಾರಿಯಾಗಿ ಉಪ ಯೋಗಿಸಿಕೊಳ್ಳಬಹುದು ಎಂಬು ದನ್ನು ತೋರಿಸಿಕೊಟ್ಟ ಕೇಶವ ಪ್ರಸಾದ್ ಅವರ ಸಾಧನೆ ಮುಂದುವ ರಿಯಲಿ. ಹಾಗೆಯೇ ಭಾರತ ದೇಶದ ಬೆನ್ನೆಲು ಬಾದ ಕೃಷಿಯತ್ತ ಜನರನ್ನು ಆಕರ್ಷಿಸು ವಂತಾಗಲಿ.
ವಿಷುವಿನ ಸಂಭ್ರಮ ವರ್ಷವಿಡೀ ಎಲ್ಲರ ಮನೆಯಲ್ಲೂ ತುಂಬಿ ತುಳುಕಲಿ. – ಅಖೀಲೇಶ್ ನಗುಮುಗಂ