ಬಾಲಿವುಡ್ ನ ಸೆನ್ಸೇಷನಲ್ ಆ್ಯಕ್ಟರ್ ಅಕ್ಷಯ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೇಸರಿ’ಯ ಟ್ರೈಲರ್ ಬಿಡುಗಡೆಗೊಂಡಿದ್ದು ಬಾಲಿವುಡ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ. ಟ್ರೈಲರ್ ಬಿಡುಗಡೆಗೊಂಡ ಕೇವಲ ಒಂದು ಗಂಟೆಯೊಳಗೆ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಳಪಡುವ ಮೂಲಕ ಭಾರತದಲ್ಲಿ ಯೂಟ್ಯೂಬ್ ಟ್ರೆಂಡಿಂಗ್ ಆಗಿದೆ.
‘ಸರ್ ಗಢಿ ಕಾಳಗ’ ಎಂದೇ ಇತಿಹಾಸದಲ್ಲಿ ದಾಖಲಾಗಿರುವ ಘಟನೆಯೊಂದನ್ನು ಆದಾರವಾಗಿಟ್ಟುಕೊಂಡು ನಿರ್ದೇಶಕ ಅನುರಾಗ್ ಸಿಂಗ್ ಅವರು ಈ ‘ಕೇಸರಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. 1897ರಲ್ಲಿ 10,000 ಅಫ್ಘಾನ್ ದಾಳಿಕೊರರ ವಿರುದ್ಧ ಕೇವಲ 21 ಜನ ಸಿಖ್ಖರು ಹೋರಾಡುವ ಕಥೆಯುಳ್ಳ ಚಿತ್ರ ಇದಾಗಿದೆ. ಇಲ್ಲಿ ಅಕ್ಷಯ್ ಕುಮಾರ್ ಅವರು ಹವಾಲ್ದಾರ್ ಇಶಾರ್ ಸಿಂಗ್ ಅವರ ಪಾತ್ರದಲ್ಲಿ ಮಿಂಚಿದ್ದಾರೆ. ತಲೆಗೆ ಕೇಸರಿ ಪಗಡಿಯನ್ನು ತೊಟ್ಟು, ಪೊದೆಗಡ್ಡದೊಂದಿಗೆ ಅಕ್ಕಿ ಅವರ ಐತಿಹಾಸಿಕ ಪಾತ್ರ ಚಿತ್ರಣ ‘ಕೇಸರಿ’ಯ ವಿಶೇಷವಾಗಿದೆ. ಪರಿಣಿತಿ ಚೋಪ್ರಾ ಅವರು ಈ ಚಿತ್ರದ ನಾಯಕಿಯಾಗಿದ್ದಾರೆ.