ಆವೃತವಾಗಿದೆ.
Advertisement
ಈ ರಸ್ತೆ ಸುಮಾರು 2 ಕಿ.ಮೀ.ಯಷ್ಟು ಉದ್ದವಿದ್ದು ಸುಮಾರು 10 ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಬೃಹತ್ ಹೊಂಡಗಳಿದ್ದು ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳ ರಾಶಿ ಬಿದ್ದಿದೆ.ಪಾಲ್ದಕ್ಯಾರು, ದೊಂದುಬೈಲು, ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ.ಈ ಭಾಗದಲ್ಲಿ ಸುಮಾರು 200 ಮನೆಗಳಿದ್ದು ಸಂಚಾರ ಅಸಾಧ್ಯವಾಗಿದೆ.
Related Articles
ಈ ರಸ್ತೆಯ ಉದ್ದಕ್ಕೂ ಚರಂಡಿಯೇ ಇಲ್ಲದಂತಾಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಕೆಲವು ಭಾಗಗಳಲ್ಲಿ ರಸ್ತೆಯಲ್ಲಿಯೇ ಮಳೆ ನೀರು ನಿಲ್ಲುತ್ತಿರುವ ಜತೆಗೆ, ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ತುಂಬಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
Advertisement
ಈ ಭಾಗದ ಅತ್ಯಂತ ಪ್ರಮುಖ ರಸ್ತೆಯಾಗಿರುವ ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರೂ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಸ್ತಾವನೆ ಸಲ್ಲಿಕೆಪಾಲ್ದಕ್ಯಾರು ಭಾಗದ ಪ್ರಮುಖ ರಸ್ತೆ ಇದಾಗಿದ್ದು ರಸ್ತೆಯ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡ ಯೋಜನೆಯಡಿ 10 ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾದ ತತ್‌ಕ್ಷಣ ರಸ್ತೆ ದುರಸ್ತಿಗೊಳಿಸಲಾಗುವುದು.
-ಉದಯ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರು ಪಂಚಾಯತ್ ನಿರ್ಲಕ್ಷ್ಯ
ಕೆರ್ವಾಶೆ ಪಾಲ್ದಕ್ಯಾರು ರಸ್ತೆ ಸೂಕ್ತ ನಿರ್ವಹಣೆಯಿಲ್ಲದೆ ಸಂಪೂರ್ಣ ಹದಗೆಟ್ಟಿದ್ದು ಸ್ಥಳೀಯರಿಗೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಹಿಂದೆ ರಸ್ತೆ ನಿರ್ವಹಣೆಗೆ ಪಂಚಾಯತ್ ಆಡಳಿತ ಅನುದಾನ ಒದಗಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಪಂಚಾಯತ್ ಆಡಳಿತ ನಿರ್ಲಕ್ಷ್ಯ ತೋರುತ್ತಿದೆ.
-ಅನಿಲ್ ಅಮೀನ್ ಪಾಲ್ದಕ್ಯಾರು, ಸ್ಥಳೀಯರು