Advertisement

ಕೆರೂರ: ಗೈಬುಸಾಬ್‌ ದರ್ಗಾಕ್ಕೆ ಸೌಕರ್ಯ ಕೊರತೆ

05:41 PM Feb 03, 2024 | Team Udayavani |

ಉದಯವಾಣಿ ಸಮಾಚಾರ
ಕೆರೂರ: ಮಾವಿನಮಡ್ಡಿ ಗೈಬುಸಾಬ್‌ ದರ್ಗಾಕ್ಕೆ ವಿದ್ಯುತ್‌ ಸಂಪರ್ಕ, ರಸ್ತೆ ಡಾಂಬರೀಕರಣ ಸೇರಿ ಮೂಲಸೌಕರ್ಯ ಕೊರತೆ ಎದುರಾಗಿದೆ. ದರ್ಗಾ ಹೊರ ಪ್ರದೇಶದಲ್ಲಿ ಇರುವುದರಿಂದ ರಾತ್ರಿ ಸಮಯ ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲೆ ಆವರಿಸಿರುತ್ತದೆ. ಆ ಸಮಯದಲ್ಲಿ ಯಾರೊಬ್ಬರೂ ದರ್ಗಾಕ್ಕೆ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಬಟಕುರ್ಕಿ ರಸ್ತೆಯಿಂದ ದರ್ಗಾವರೆಗಿನ ರಸ್ತೆ ಡಾಂಬರೀಕರಣ ಮತ್ತು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ ವಿದ್ಯುತ್‌ ಸೌಕರ್ಯ ಕಲ್ಪಿಸಬೇಕೆಂಬುದು ಜನರ ಬೇಡಿಕೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ದರ್ಗಾದ ಮುಂಬದಿ ಹಳೆಯ ವಿದ್ಯುತ್‌ ಸಂಪರ್ಕದ ತಂತಿ ನೆಲಕ್ಕೆ ತಾಗಿದೆ. ಕಂಬಗಳು
ವಾಲಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಅಲ್ಲಿ ಟ್ರಾನ್ಸ್‌ ಫಾರ್ಮರ್‌ ಅಳವಡಿಸಿ ವಿದ್ಯುತ್‌ ಕಲ್ಪಿಸುವಂತೆ ಫಕೀರಬೂದಿಹಾಳ ಗ್ರಾಮ ಪಂಚಾಯಿತಿ ಪಿಡಿಒ ಹೆಸ್ಕಾಂಗೆ ಪತ್ರ ಬರೆದಿದ್ದಾರೆ.

ಜಿಲ್ಲಾಧಿಕಾರಿಗೆ ಶಾಸಕ ಜೆ.ಟಿ.ಪಾಟೀಲ ಪತ್ರ:
ಗೈಬುಸಾಬ್‌ ದರ್ಗಾ ಮತ್ತು ಪಕ್ಕದಲ್ಲಿರುವ ಹನಮಂತ, ಲಕ್ಷ್ಮೀ ದೇವಿ, ನಾಗಪ್ಪ ದೇವರ ಗುಡಿಗಳಿಗೆ ಸಂಬಂಧಿಸಿದ ತಸ್ತಿಕ ಭತ್ತೆ ಮಂಜೂರು ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ 2017ರಲ್ಲಿ ಬೀಳಗಿ ಶಾಸಕ ಜೆ ಟಿ ಪಾಟೀಲ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ದರ್ಗಾಕ್ಕೆ ಬರ್ತಾರೆ ಸಾವಿರಾರು ಭಕ್ತರು
ಪಟ್ಟಣದಿಂದ 5 ಕಿ.ಮೀ ದೂರದ ಗೈಬುಸಾಬ್‌ ಅಜ್ಜನ ದರ್ಗಾಕ್ಕೆ ಪ್ರತಿ ಗುರುವಾರ, ರವಿವಾರ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಮಾವಾಸ್ಯೆ ದಿನ ಪಟ್ಟಣ ಸೇರಿ ಸುತ್ತಮುತ್ತಲಿನ ಭಕ್ತರ ದಂಡೇ ಹರಿದು ಬರುತ್ತದೆ. ಗೈಬುಸಾಬ್‌ ಅಜ್ಜನ ದರ್ಗಾ ಅಷ್ಟೇ ಅಲ್ಲ ಅದರ ಸುತ್ತ ಹನಮಂತ, ಲಕ್ಷ್ಮೀ ದೇವಿ, ನಾಗಪ್ಪ ಗುಡಿ ಇದೆ. ದರ್ಗಾಕ್ಕೆ ಬರುವ ಭಕ್ತರು ಎಲ್ಲ ದೇವರನ್ನು ಪೂಜಿಸುತ್ತಾರೆ. ನಂಬಿದ ಭಕ್ತರನ್ನು ಗೈಬುಸಾಬ್‌ ಅಜ್ಜ ಎಂದಿಗೂ ಕೈ ಬಿಟ್ಟಿಲ್ಲ ಎಂಬುದು ನಂಬಿಕೆ.

Advertisement

ಹಿಂದೂ ಭಕ್ತರ ಸಂಖ್ಯೆ ಅಧಿಕ
ಗೈಬುಸಾಬ್‌ ಗದ್ದುಗೆಗೆ ಹಿಂದೂ ಭಕ್ತರೇ ಹೆಚ್ಚಾಗಿ ನಡೆದುಕೊಳ್ಳುತ್ತಾರೆ. ಕುಟುಂಬ ಕಲಹ ವೈಯಕ್ತಿಕ ಸಮಸ್ಯೆಗಳನ್ನು ಗೈಬುಸಾಬ್‌ ಅಜ್ಜ ಪರಿಹರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.

ಗೈಬುಸಾಬ್‌ ದರ್ಗಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಆದರೆ, ದತ್ತಿ ಇಲಾಖೆಯಿಂದ ಈವರೆಗೆ ಯಾವುದೇ ಸೌಲಭ್ಯ, ಅನುದಾನ ಸಿಕ್ಕಿಲ್ಲ.

ದರ್ಗಾ ರಸ್ತೆ ಡಾಂಬರೀಕರಣ ಮತ್ತು ವಿದ್ಯುತ್‌ ಸಂಪರ್ಕ ಕಲ್ಪಿಸಲು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರೂ
ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ರಾಜೇಸಾಬ್‌ ರಾಗಾಪುರ್‌,
ದರ್ಗಾ ಉಸ್ತುವಾರಿ

* ಶ್ರೀಧರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next