ಕೆರೂರ: ಸರಕು ಸಾಗಾಣಿಕೆಯ ವಾಹನಗಳಲ್ಲಿ ಪ್ರಯಾಣಿಕರನ್ನು ಕೊಂಡೊ ಯ್ಯುವಂತಿಲ್ಲ. ಪ್ರಯಾಣಿಕ ವಾಹನಗಳಲ್ಲಿ ಸಾರಿಗೆ ಇಲಾಖೆ ಮಿತಿಯ ಅನ್ವಯ ನಿಗದಿಪಡಿಸಿದ ಸಂಖ್ಯೆಯ ಪ್ರಯಾಣಿಕರ ಪ್ರಯಾಣಕ್ಕೆ ಒತ್ತು ನೀಡಬೇಕು. ನಿಯಮ ಮೀರಿ ಹೆಚ್ಚಿನ ಜನರನ್ನು ಸಾಗಿಸಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಪಿಎಸ್‌ಐ ಗುರುಶಾಂತ ದಾಸ್ಯಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸರಕು ಸಾಗಾಣಿಕೆ ವಾಹನ ಹಾಗೂ ಚಿಕ್ಕ, ಪುಟ್ಟ ವಾಹನಗಳ ಚಾಲಕರು ಮತ್ತು ಮಾಲೀಕರ ಜೊತೆಗೆ ನಡೆದ ಸಭೆಯಲ್ಲಿ ಅವರು ಸಂಚಾರ ನಿಯಮ ಕಡ್ಡಾಯ ಪಾಲನೆ ಮತ್ತು ಸಾರಿಗೆ ಇಲಾಖೆ ನಿಗದಿ ಪಡಿಸಿದ ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ತಿಳಿವಳಿಕೆ ಹೇಳಿದರು.
ಸರಕು ತುಂಬುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಮೊಬೈಲ್ ಬಳಸುವಂತಿಲ್ಲ. ಪ್ರಯಾಣಿಕ ವಾಹನದಾರರು ತಮಗೆ ಸಾರಿಗೆ ಇಲಾಖೆ ನೀಡಿರುವ ಪರವಾನಗಿಯಲ್ಲಿ ಎಷ್ಟು ಪ್ರಯಾಣಿಕರನ್ನು ನಿಗದಿ ಮಾಡಲಾಗಿದೆಯೊ ಅಷ್ಟೇ ಜನರ ಪ್ರಯಾಣಿಕರ ನಿಗದಿಗೆ ಒತ್ತು ನೀಡಬೇಕು. ಹೆಚ್ಚಿಗೆ ಜನರನ್ನು ಸಾಗಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ಲೈಸನ್ಸ್, ಸಮವಸ್ತ್ರ, ಜೀವ ವಿಮೆ ಪಾಲಸಿ ಹೊಂದಿರಬೇಕು. ತಪ್ಪದೇ ಇಲಾಖೆ ನಿಗದಿ ಪಡಿಸಿದ ರಸ್ತೆ ನಿಯಮ ಪಾಲಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಪಟ್ಟಣ ಪಂಚಾಯತ ಸದಸ್ಯ ವಿಠಲ ಗೌಡರ, ವಾಹನ ಚಾಲಕರಾದ ಮೌಲಾಸಾಬ್, ಶಿವಾನಂದ, ಮಹಮ್ಮದ, ರಾಮಣ್ಣಾ, ಲಾಲಸಾಬ್,ವಿಠಲ, ಮಂಜು, ಹುಸೇನಸಾನ, ಈಶ್ವರ, ರವಿ, ಆನಂದ, ಅಬ್ದುಲ್ ರೆಹಮಾನ, ಪೊಲೀಸ್ ಸಿಬ್ಬಂದಿ ಎಚ್.ಎಂ. ಹೊಸಮನಿ, ಎನ್.ಎಸ್. ಸಿಮಾನಿ, ಎಂ.ಆರ್. ಹೊನ್ನಾಯಕ, ಎಸ್.ಕೆ. ಪೀರಜಾದೆ, ಡಿ.ಜೆ. ಶಿವಪುರ, ಜೆ.ಆರ್. ಹೊಕ್ರಾಣಿ, ಎನ್.ಬಿ. ರೇಷ್ಮಿ, ಮಲ್ಲು ಕೂಡಗಿ, ವೈ.ಪಿ. ಪೂಜಾರ ಇತರರು ಇದ್ದರು.