Advertisement
***
ಮಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದು ವಂಚಿಸಿರುವ ಬಗ್ಗೆ ನಗರದ ಜಪ್ಪುವಿನ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದ ಕಾರ್ಯದರ್ಶಿ ಚಂದ್ರಿಕಾ ಡಿ.ರಾವ್ ಅವರು ನೀಡಿರುವ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪ ಗಜಾನನ ಪೂಂಜಾ, ಡಾ| ನಿಶ್ಚಿಕೇತ್ ಪೂಂಜಾ ಮತ್ತು ಡಾ| ನಿಖೀತಾ ಪೂಂಜಾ ಆರೋಪಿಗಳು. 2017ರಲ್ಲಿ ಶಿಲ್ಪ ಗಜಾನನ ಪೂಂಜಾ 50 ಲ.ರೂ. ಸಾಲಕ್ಕೆ ಅರ್ಜಿ ಸಲ್ಲಿಸಿ ಬ್ಯಾಂಕ್‌ವೊಂದರ ಡೆಪಾಸಿಟ್ ಬಾಂಡ್ ಮತ್ತು ಎಲ್‌ಐಸಿ ಬಾಂಡ್ ಹಾಗೂ ಡಾ| ನಿಶ್ಚಿಕೇತ್ ಪೂಂಜಾ 40 ಲ.ರೂ. ಸಾಲಕ್ಕೆ ಬ್ಯಾಂಕ್‌ವೊಂದರ ಡೆಪಾಸಿಟ್ ಬಾಂಡ್ ಮತ್ತು ಎಲ್‌ಐಸಿ ಬಾಂಡ್ ನೀಡಿದ್ದರು. ಅವರೀರ್ವರಿಗೂ ಸಾಲ ಮಂಜೂರಾಗಿತ್ತು.
Related Articles
Advertisement